ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ
ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಭಾಗ-3
ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ
ಅರಿವು ವಿಸ್ತರಿಸಲಿ..
ಮನೆ ಬಾಗಿಲು ದಾಟಬೇಡಿ.. ಮನೆಯೊಳಗೇ ಸುರಕ್ಷಿತವಾಗಿರಿ ಎಂದಕೂಡಲೇ ಮನಸ್ಸು ತರಾವರಿ ಚಿಂತಿಸುತ್ತದೆ. ಇಷ್ಟಪಟ್ಟು ಸಾಲ ತೆಗೆದು, ಕಷ್ಟಬಿದ್ದು ಕಟ್ಟಿಸಿದ ನಮ್ಮ ಮನೆಯೂ ನಮಗೆಸೆರೆಮನೆಯೆನಿಸುತ್ತದೆ. ಯಾಕೆ ಹೀಗೆ? ಯಾವುದು ಬೇಡ ಎಂದು ಹೇಳುತ್ತಾರೆಯೋ ಅದನ್ನು ಮೀರುವುದು ಸಾಹಸ… ಆದರೆ ಈಗ ಅದು ದುಃಸ್ಸಾಹಸ. ವಿವೇಚನೆ ಇಲ್ಲದ ನಡೆ. ಸುರಕ್ಷಿತತೆಯ ಪ್ರಶ್ನೆ ಎದ್ದಾಗ ಅದಕ್ಕೇ ನಮ್ಮ ಮೊದಲ ಆದ್ಯತೆ.
ಮನೆ ಬಾಗಿಲು ದಾಟುವುದು ಹಾಗಿರಲಿ ನಮ್ಮ ಮುಖವನ್ನೇ ನಾವು ಬೇಕಾದಷ್ಟು ಸಲ ಮುಟ್ಟುವಂತಿಲ್ಲ! ಕೈ ತೊಳೆದು ಮುಖ ಮುಟ್ಟಬೇಕೋ, ಮುಖ ಮುಟ್ಟಿದ ನಂತರ ಕೈ ತೊಳೆಯಬೇಕೋ ಗೊಂದಲ! ಒಂದರ್ಥದಲ್ಲಿ ನಮಗೆ ನಾವೇ ಅಸ್ಪ್ರಶ್ಯರಾಗೋದು. ಇನ್ನು ರೋಗಿಗಳಾದರೆ ಅಥವಾ ಕ್ವಾರಂಟೇನ್ ಅನುಭವಿಸಿದರೆ ಸಮಾಜವೇ ( ವೈದ್ಯರು, ಆರೋಗ್ಯ ಇಲಾಖೆ ಹೊರತುಪಡಿಸಿ)ಒಂದು ಹಂತಕ್ಕೆ ಅಂತವರನ್ನು ದೂರವಿಡುತ್ತದೆ…ಇದನ್ನು ತಪ್ಪು ಎನ್ನುವಂತೆಯೂ ಇಲ್ಲ… ಬದುಕಿನಲ್ಲಿ ಇಂತವುಗಳನ್ನೆಲ್ಲ ಎದುರಿಸದ ಅನೇಕ ಜನರಿಗೆ ವ್ಯಥೆ, ನೋವು ಆಗಬಹುದು. ಆದರೆ ಇದು ಕೆಲ ದಿನಗಳು ಮಾತ್ರ ನೆನಪಿರಲಿ.
ಆದರೆ ಇಡೀ ಬದುಕನ್ನು ಅಸ್ಪೃಶ್ಯತೆಯ ನೋವಿನಲ್ಲಿ ಕಳೆದ, ಅದರ ವಿರುದ್ಧ ಹೋರಾಡುವುದರಲ್ಲಿಯೇ ಬದುಕನ್ನು ಎದುರಿಸಿದ ಅಂಬೇಡ್ಕರ ಅವರ ಕಷ್ಟ ಎಷ್ಟಿರಬಹುದು? ಇಂದಿಗೂ ಎಷ್ಟೋ ಊರುಗಳಲ್ಲಿ ದಲಿತರನ್ನು ಅಸ್ಪೃಶ್ಯರೆಂಬಂತೆಯೇ ಕಾಣುವುದಿದೆ. ಕೊರೋನಾ ಸಂಕಷ್ಟ ನಮ್ಮ ಮಾನವೀಯತೆಯ ಅರಿವನ್ನು ವಿಸ್ತರಿಸುವಂತಾಗಲಿ. ಮನೆಯ ಬಾಗಿಲು ಮುಚ್ಚಿದರೂ ಮನದ ಬಾಗಿಲು ಎಂದೂ ಮುಚ್ಚದಿರಲಿ.
*******
ಮುಂದುವರಿಯುವುದು….
ಮಾಲತಿ ಹೆಗಡೆ