ಕಾವ್ಯಯಾನ

ಪ್ರಕೃತಿ ಆಚರಿಸುತಿದೆ ಹಬ್ಬ

ಶಾಲಿನಿ ಆರ್.

ಮಾನವನ ತಗ್ಗು ದಿಬ್ಬಗಳ ಲೀಲೆಗೆ,
ನಲಿದಿದೆ  ಪ್ರಕೃತಿ ಈ ಸೋಜಿಗೆ,

ಹಲವು ಜೀವನವ ಕಸಿದ ಕರೋನಾ,
ಪ್ರಕೃತಿಗೆ ಇದುವೇ ವರವಾಯಿತೇನಾ?

ಮನುಜನ ವಿಪರೀತಗಳನ್ನೆಲ್ಲ ಅಳಿಸಿ
ಪ್ರಕೃತಿ ತನ್ನತನದ ಪ್ರೀತಿ ಉಳಿಸಿ ಹರಸಿ,

ಹಾಡುವ ಹಕ್ಕಿಗಳೆಲ್ಲ ಹಾರುತಿವೆ
ಮನಸಾರೆ ಖುಷಿಯಾಗಿ,
ನಭದ ನೀಲಿಯಲಿ ನೀಲವಾಗಿ,

ಬೀಸುವ ತಂಪೆಲರಿಗು ಬಂದಿದೆ ಅಭಿಮಾನ,
ನಾ ನಾಗಿಹೆನೆಂಬ ಸಮ್ಮಾನ,

ಹರಿವ ನದಿಯದು ಈಗ ಶುದ್ದ ಸ್ಪಟಿಕವಂತೆ,
ಝುಳು ಝುಳು ನಿನಾದಕದು ಗೆಜ್ಜೆ ಕಟ್ಟಿ
ಸಡಗರಿಸುತಿಹದಂತೆ,

ಪ್ರಾಣಿ ಪಕ್ಷಿಗಳೆಲ್ಲ ಸೇರಿ ನಡೆಸಿದೆ ವನಮೋಹತ್ಸವ,
ಮರೆತು  ಮಾನವನ ದಬ್ಬಾಳಿಕೆಯ
ರಣೋತ್ಸವ,

ಪಕೃತಿಯ ಈ ಉತ್ಸವ ನಿತ್ಯೋತ್ಸವವಾಗಲಿ,
ಪರಿಸರದಲಿ ಸದಾ ಶುದ್ದತೆಯ ಹಸಿರು
ತೂಗಲಿ.

*****

Leave a Reply

Back To Top