Category: ಗಝಲ್

ಗಜ಼ಲ್

ಕಣ್ಣೀರು ಕಡಲಾಗಿ ಹರಿದು ಹೋದಾಗ ಈಜಿ ದಡ ಸೇರಿದ್ದೇವೆ
ಬದುಕು ನೊಂದು-ಬೆಂದು ಕತ್ತಲಾದಾಗ ಚಿಮ್ಮಣಿ ಹಿಡಿದಿದ್ದೇವೆ

ಛಿದ್ರವಾಗಿದೆ ಅನ್ನದಾತನ ಹೃದಯ ಸದಾ ವರ್ಷವಿಲ್ಲದೆ ಕಂಗಾಲಾಗಿ ಕೂತಿಹನು|
ಭದ್ರತೆ ದೊರೆಯದೆ ತಳದಹೂಳಿಗೆ ಕಣ್ಕುಕ್ಕಿ ಬೆದರುತ ಹುದುಗಿದೆ ನಿತ್ಯ|

ನಿಷ್ಠೆ,ನಂಬಿಕೆ, ಪ್ರೀತಿ,ಮಮತೆಗಳೆಲ್ಲ ಕಪ್ಪ ಕೇಳುತ್ತಿವೆ
ದುಡಿದ ಕೈ ಈಗ ಹತಾಶೆಯ ಗಾಯದಲಿ ದಣಿದಿದೆ

ಆ ನಿಸ್ತೇಜ ಕಣ್ಣುಗಳಲ್ಲಿ ಬಿರಿದ ನೆಲ, ಕಮರಿದ ಫಸಲು
ನಿನ್ನ ಹೆಣದ ಮೇಲೆ ಚದುರಂಗ ಆಡುತ್ತಾರೆ ಎಲ್ಲರೂ

ಕೋಟಿ ವಿದ್ಯೆಯ ಬಿಟ್ಟು ಮೇಟಿ ಹಿಡಿಯಲು ಬಂದ ಮಗನ ಭವಿಷ್ಯ ಗಾಳಿಗಿಟ್ಟ ಹಣತೆ
ಮನೆ ಮಂದಿಯಲ್ಲ ಬೆವರು ಬಸಿದರೂ ಹಸಿರಾಗದ ಅಕ್ಕಡಿ ಸಾಲು ಈಟಿಯಾಗಿ ತಿವಿದಿದೆ

ರೈತಗಜಲ್ ಹಸಿರುಸಿರಿನ ಸಿರಿ ನೀನು ಧರಣಿ ಮೇಲೆ ದಯೆಬಾರದೆ ಮಳೆರಾಯಾಹರಸುವ ಹೆಸರೇ ನೀರು ಸುರಿಯುತ್ತ ಇಳೆಯ ಬೆರೆಯಬಾರದೆ ಮಳೆರಾಯಾ ನೇಗಿಲು ಕಾಯಕವಿಲ್ಲದೆ ಕುಳಿತಿದೆ ಸುಣ್ಣವಿರದ ಗೋಡೆಯನ್ನು ಅಂಟಿಕೊಂಡುರೈತನ ಹೊಲ ಉಳುವ ಜೋಡೆತ್ತನ್ನಾದರೂ ಬದುಕಿಸಬಾರದೆ ಮಳೆರಾಯಾ ಅಟ್ಟ ಬಿಟ್ಟು ಹಸಿದ ಹೊಟ್ಟೆ ಸೇರಿವೆ ಬೀಜಕ್ಕಿಟ್ಟ ಕಾಳೆಂಬುದನ್ನೂ ಮರೆತುಗುಟ್ಟಾಗುಳಿಯದ ಸಾಲಕ್ಕಾದರೂ ಬಡ್ಡಿಯಾಗಬಾರದೆ ಮಳೆರಾಯಾ ಮಣ್ಣ ಮಕ್ಕಳೆಲ್ಲ ನೊಂದು ಬೆಂದು ಕಣ್ಣೀರು ಹಾಕುತ್ತಿಹರುನಿನ್ನಿರುವಿಕೆಯ ಸಣ್ಣ ಸುಳಿವೊಂದು ತೋರಬಾರದೆ ಮಳೆರಾಯಾ ಬವಣೆಗೆಲ್ಲ ಪ್ರೀತಿಯುಣಿಸಿ ಧರೆಯೊಡಲಿಗೆ ವರವಾಗಿ ಬಾಸಕಲಕ್ಕಾಧಾರವೇ ಜಲವೆನ್ನುವ ‘ಸರೋಜ’ಳ ಮನವಿ ಸ್ವೀಕರಿಸಬಾರದೆ […]

ಕೆಸರುಂಡ ಕೈಗಳಿವು ಮೊಸರಿನ ಸಂಗವ ತೊರೆದಿವೆ
ನಿಟ್ಟುಸಿರ ತಾಪ ಕೊನರುತ್ತಿದೆ ಬಿರುಕು ಬಿಟ್ಟ ಪಾದದಲಿ

ಬೆಳೆದ ಬೆಳೆಗೆ ಈಗಲಾದರೂ ಬೆಲೆ ಬರುವುದೆಂದು ಕಾದಿದ್ದೇನೆ
ಕಷ್ಟ ಕೋಟಲೆ ಆಗಲಾದರೂ ಕಳೆವುದೆಂದು ನಿರೀಕ್ಷಿಸಿದ್ದೇನೆ

Back To Top