ರೈತ ಗಜಲ್

What has brought India's farmers to the streets? - BBC News

ಅಹರ್ನಿಶಿಯಲು ದುಡಿದು ದಣಿದ ಜೀವ ಬೇಸತ್ತು ಕೊರಗಿದೆ ನಿತ್ಯ|
ಅಹಸ್ಕರನ ಬಿಸಿಲಿಗೆ ಬೆಂದು ಮೂಳೆ ಚಕ್ಕಳವಾಗಿ ಮರುಗಿದೆ ನಿತ್ಯ||

ವಿಭಾತದೊಳು ಎದ್ದು ಪೃಥ್ವಿಗೆ ಕರಮುಗಿದು ಸಂತಸದಿ ಬೀಗುತ ನೋಡುತಿಹನು|
ಪ್ರಭಾಥದಲಿ ಎತ್ತುಗಳಿಗೆ ನೊಗವೂಡಿ ಇಳೆಯ ಹಸನದಲಿ ಕರಗಿದೆ ನಿತ್ಯ||

ಮಳೆಯೊಂದಿಗಿನ ಜೂಜಾಟ ರೈತನ ಕೃಷಿ ಬಾರದಿದ್ದರೆ ಸಾಲದಕೂಪವೆ ಗತಿಯೇ|
ತರಣಿಯ ತಾಪಕೆ ಬೆಚ್ಚಿ ಬೀಳುತ ಸುಕೃತದಲ್ಲೆ ಸೊರಗಿದೆ ನಿತ್ಯ||

ಸರಿಯಾದ ಬೆಲೆ ಸಿಗದೆ ಎಣಗುತಿಹ ಮಧ್ಯವರ್ತಿಗಳ ಕೈಸೆರೆಯು ನೇಗಿಲಯೋಗಿ|
ಪರಿಪರಿ ಬೇಡಿದರು ನೆರವು ಸಿಗದೆ ತಬ್ಬಿಬ್ಬಲಿ ತಿರುಗಿದೆ ನಿತ್ಯ||

ಛಿದ್ರವಾಗಿದೆ ಅನ್ನದಾತನ ಹೃದಯ ಸದಾ ವರ್ಷವಿಲ್ಲದೆ ಕಂಗಾಲಾಗಿ ಕೂತಿಹನು|
ಭದ್ರತೆ ದೊರೆಯದೆ ತಳದಹೂಳಿಗೆ ಕಣ್ಕುಕ್ಕಿ ಬೆದರುತ ಹುದುಗಿದೆ ನಿತ್ಯ||

ಚಿಂದಿಯಾದ ಜೀವ ಕಣ್ಣೀರಲಿ ಕೈತೊಳೆದ ಅಸಾಯಕತೆಯ ಸ್ಥಿತಿಗೆ ನೊಂದಿಹುದು|
ಬಂಧಿಯಲಿ ಸಿಲುಕಿ ಸಾಲದ ಹೊರೆಗೆ ಕೊರಳೊಡ್ಡಿ ನಲುಗಿದೆ ನಿತ್ಯ||

ಹಸಿದ ಜೋಳಿಗೆಯ ತುಂಬಿಸಿ ನಗುವ ಕಾಯಕನಿಗೆ ಅಭಿಯು ವಂದಿಸುತಿಹಳು|
ಕಸುವಲಿ ಉತ್ತಿಬಿತ್ತಿ ಧರೆಯ ಸಿಂಗರಿಸಿ ಕಳೆಯು ತೊಲಗಿದೆ ನಿತ್ಯ||

****************************************

ಅಭಿಜ್ಞಾ ಪಿ ಎಮ್ ಗೌಡ

2 thoughts on “

Leave a Reply

Back To Top