ಗಜಲ್
ರತ್ನರಾಯಮಲ್ಲ
ಕೂಲಿ ಮಾಡುವವರು ಮಾಲೀಕರು ಆಗಬೇಕು
ಮಾಲೀಕರಿಗೆ ಕೂಲಿಯ ಅನುಭವ ಇರಬೇಕು
ಬಡತನ-ಸಿರಿತನ ಎಲ್ಲದರಲ್ಲೂ ಮನೆ ಮಾಡಿದೆ
ಒಡಲ ಮಿಡಿತ ಅನ್ನವು ಕೈಗಳಿಗೆ ಎಟುಕಬೇಕು
ಆಸ್ತಿಗಾಗಿ ಕಲಹದೊಂದಿಗೆ ಹೆಜ್ಜೆ ಹಾಕುತಿದ್ದೇವೆ
ಕೂಡಿಡುವ ಮನೆಗಳು ದಾಸೋಹ ಮಾಡಬೇಕು
ಬಂಡವಾಳವು ಭಂಡತನದಲ್ಲಿಯೇ ಮೀಯುತಿದೆ
ಹಣವು ಮಾತಾಡದೆ ಗುಣವು ಮಾತಾಡಬೇಕು
ನಮ್ಮ ಬಾಳಿನ ಅಡುಗೆಗೆ ದುಡ್ಡೇ ಉಪ್ಪು ‘ಮಲ್ಲಿ’
ಇಲ್ಲಿ ಬಡವನಿಗೆ ಉಸಿರಾಡಲು ಪ್ರೀತಿ ಸಿಗಬೇಕು
****************************