ರೈತ ಗಜಲ್

Are Indian Farmers Ready To Explore International Markets?

ಕನಸು ಕುಸಿಯುತಿದೆ ಹಸಿದ ಕೂಸಿನ ಅಳುವಿನಲಿ
ಮನವು ಘಾಸಿಗೊಂಡಿದೆ ಬ್ಯಾಂಕ್ ಕೊಟ್ಟ ನೋಟಿಸಿನಲಿ

ರೈತನ ಸ್ವೇದದ ಸ್ವಾದ ಸವಿದ ಅಕ್ಕಿಕಾಳು ಅಳುತ್ತಿದೆ
ಅನ್ನವಿಲ್ಲದೆ ಬೆಂದ ಇಳಿಜೀವ ಇಳೆಯ ಬಿಸಿಲ ಝಳದಲಿ

ಮಧ್ಯಸ್ಥಿಕೆಯ ಮಾರುಕಟ್ಟೆ ಒಡಲ ಮಂಕರಿ ತುಂಬಲಿಲ್ಲ
ಬಣ್ಣದ ಬದುಕು ಕಟ್ಟುವ ಬಯಕೆಗಳು ಬೆರೆತಿವೆ ಬೂದಿಯಲಿ

ಮೆತ್ತನೆಯ ಹಾಸಿಗೆಯಲಿ ಪವಡಿಸುವ ಪರಿ ಎನಗಿಲ್ಲ
ಅಂಗಾತ ಮಲಗಿ ಬೇಡಿದರೂ ಖಾರ ಏರುತ್ತಿದೆ ಸಾಲದಲಿ

ಕೆಸರುಂಡ ಕೈಗಳಿವು ಮೊಸರಿನ ಸಂಗವ ತೊರೆದಿವೆ
ನಿಟ್ಟುಸಿರ ತಾಪ ಕೊನರುತ್ತಿದೆ ಬಿರುಕು ಬಿಟ್ಟ  ಪಾದದಲಿ

ಅನ್ನದಾತ ಶಿರೋನಾಮೆ ಕ್ಷಾಮತುಂಬಿದೆ ಜೀವದಾತನಿಗೆ
ಶೈಲ ಶಿಖರದ ಕಂಗಳಲೂ ನೀರು ಜಿನುಗುತ್ತಿದೆ ನೋವಿನಲಿ

************************

ಶೈಲಜ.ವಿ.ಕೋಲಾರ

2 thoughts on “

Leave a Reply

Back To Top