ಅವಳು ಮತ್ತು ಕವಿತೆ!
ಅವಳು ನೋವಿನ ಬಗ್ಗೆ ಕವಿತೆ ಬರೆದಳು
ಓದಿದ ಜನ ಅವಳ ನೋವನ್ನು ಸವಿದು ಸಂಭ್ರಮಿಸಿದರು
ಅದರ ಆಳಅಗಲಗಳ ಅಳೆದು ತೂಗಿದರು
ಆ ನೋವಿನ ಉತ್ಕಟತೆಯನ್ನಳೆಯಲು
ಇರಬಹುದೆಮಾಪಕವೆನಾದರೆಂದು ಅದನೂ ಹುಡುಕಾಡಿದರು
ಅವಳ ನೋವಿಗಿರಬಹುದಾದ ಕಾರಣಗಳ ಕುರಿತು
ಸಂಶೋಧನೆಯನ್ನೇ ನಡೆಸಿದರು
ಭಗ್ರಪ್ರೇಮ, ಮುರಿದ ದಾಂಪತ್ಯ
ಹೀಗೆ ಕಾರಣಗಳ ಪಟ್ಟಿ ಮಾಡುತ್ತ ಹೋದರು
ನೋವಿಗೂ ಮಾರುಕಟ್ಟೆ ಇದೆಯೆಂದರಿತ ಅವಳು
ಹೀಗೆಯೇ ವರ್ಷಗಟ್ಟಲೆಕವಿತೆ ಬರೆಯುತ್ತ ಪ್ರಸಿದ್ದಳಾಗುತ್ತ ಹೋದಳು
ಅದ್ಯಾಕೊ ಒಂದು ದಿನ
ಬರಿದೇ ನೋವಿನ ಬಗ್ಗೆ ಬರೆಯುವುದು ಬೇಸರವೆನಿಸಿ
ನಗುವಿನ ಬಗ್ಗೆ
ಬರೆಯತೊಡಗಿದಳು.
ಅವಳ ನೋವಿಗೆ ಲೊಚಗುಟ್ಟುವುದಕ್ಕೆ
ಒಗ್ಗಿ ಹೋಗಿದ್ದ ಓದುಗರು
ಅವಳ ಹೊಸ ಕವಿತೆಗಳತ್ತ ತಿರುಗಿಯೂ ನೋಡಲಿಲ್ಲ
ಈಗವಳು ನೋವಿಲ್ಲದಿದ್ದರೂ ನಗುನಗುತ್ತಲೇ ನೋವಿನ ಬಗ್ಗೆ ಬರೆಯಲೇ ಬೇಕಾದ
ಗೊಂದಲಕೆ ಸಿಲುಕಿಕೊಂಡಳು
ಬಹಳ ಯೋಚಿಸಿದ ಅವಳೊಂದುದಿನ
ಕವಿತೆ ಬರೆಯುವುದ ನಿಲ್ಲಿಸಿ
ನಿಸೂರಾದಳು!
*********
ಕು.ಸ.ಮಧುಸೂದನ
ಒಂದು ಹಂತಕ್ಕೆ ಬದುಕೇ ಬೇಡವೆನಿಸುವಂತೆ !
ಕವಿತೆಯೂ ಬೇಡವಾಗುತ್ತಾಳೆ ಸುಂದರ ಅಭಿವ್ಯಕ್ತಿ
ಥ್ಯಾಂಕ್ಸ್ ಮೇಡಂ
ಕಂಡವರ ನೋವಿನಲ್ಲಿ ಖುಷಿ ಪಡುವ ವಿಕೃತ ಮನಗಳ ನಡುವಿನ ಬದುಕು ಅಸಹನೀಯವಾಗುವ ಪರಿಯ ಅಭಿವ್ಯಕ್ತಿ ಮಾರ್ಮಿಕ.
Super sir
ಪಯ ನಗುವಿಗಿಂತ ನೋವು ಬೇಗನೆ ಮನಸ್ಸಿಗೆ ತಟ್ಟುತ್ತದೆಂಬುದು ನಿಜ.ಚಂದದ ಕವಿತೆ.