ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇರಬೇಕಿತ್ತು ನೀನು
ನನ್ನಾತ್ಮದ ಕನ್ನಡಿಯಲಿ ದೂಳು ಕೂರದಂತೆ
ನನ್ನ ಪ್ರಜ್ಞೆಯಾಳದೊಳಗೆ ಅಹಮ್ಮಿನ ಮುಳ್ಳು ಬೆಳೆಯದಂತೆ
ನನ್ನ ಹೃದಯದಾಳದಲಿ ಪಾಪಿಷ್ಠ ಲಹರಿಗಳು
ಗುನುಗದಂತೆ ನೋಡಿಕೊಳ್ಳಲು.

ಜನರಹಿತ ರಾತ್ರಿಯ ಬೆತ್ತಲು ರಸ್ತೆಗಳಲ್ಲಿ
ಸಂಜೆ ಉರಿಸಿದ ಚಿತೆಯ ಬೆಂಕಿ ಆರದ ಮಸಣಗಳಲಿ
ಗತದ ನೆನಪುಗಳೆಲ್ಲ ಹಾವುಗಳಂತೆ ಹರಿದಾಡುವ
ಅಸಹನೀಯ ಕ್ಷಣಗಳ ಪಯಣದಲಿ.

ಎಂದೂ ಮಳೆಯಾಗದ
ಬೀಜ ಸಸಿಯಾಗದ
ಸಸಿ ಮರವಾಗಿ
ಮರ ಹೂವರಳಿಸಿ ಹಣ್ಣುಗಳ ಫಲಿಸಿ
ತಾಯಾಗಲಾರದಂತಹ ತೀರಗಳಿರದ
ರುದ್ರಭೀಕರ ಮರಳುಭೂಮಿಯ
ನಡುವಲ್ಲೂ ಹಸಿರು ಚಿಗುರಿಸುವ
ಛಲದೊಡತಿ ನೀನಿರಬೇಕಿತ್ತು

ಮುಗಿದ ನನ್ನಿಷ್ಟಕಾಲದ ಜೊತೆಗೆ
ಆರಂಭಗೊಂಡ ಕಷ್ಟಕಾಲದಲಿ
ನೀನಿರಬೇಕಿತ್ತು ನನ್ನಾತ್ಮದ ಕನ್ನಡಿಯಲ್ಲಿ!

******

ಕು.ಸ.ಮಧುಸೂದನ್

About The Author

7 thoughts on “ನನ್ನಾತ್ಮದ ಕನ್ನಡಿಯಲ್ಲಿ”

  1. ಜಯಶ್ರೀ. ಅಬ್ಬಿಗೇರಿ

    ಮರುಭೂಮಿಯ ನಡುವಲ್ಲೂ
    ಹಸಿರು ಚಿಗುರೊಡೆಸುವ
    ಭಾವದಂತೆಯೇ ಇದೆ ಕವಿತೆ
    ಅತಿ ಸುಂದರ
    ಅಭಿನಂದನೆಗಳು ಸರ್

    1. Nagaraj Harapanahalli

      ಓಹ್, ವಿರಹವನ್ನು ತೀವ್ರವಾಗಿ ದಾಖಲಿಸಿದ ಕವಿತೆ

Leave a Reply

You cannot copy content of this page

Scroll to Top