ಅಂಕಣ ಬರಹ ಕಬ್ಬಿಗರ ಅಬ್ಬಿ ಪಟ್ಟಣದ ಕವಿತೆಗೆ ಛಂದಸ್ಸಿಲ್ಲ! ಈ ಷಹರ ನಿದ್ರಿಸಲ್ಲ!. ಏರ್ಪೋರ್ಟ್ ನಲ್ಲಿ ಇಳಿಯಲು ಅನುಮತಿ ಸಿಗುವ ವರೆಗೆ ಪೈಲಟ್ ವಿಮಾನವನ್ನು ಷಹರಕ್ಕೆ ಸುತ್ತು ಹಾಕುತ್ತಿದ್ದ. ವಿಂಡೋ ದಿಂದ ಕಣ್ಣು ಹಾಯಿಸಿದರೆ, ಕೆಳಗೆ ಅಷ್ಟೂ ಬೆಳಕು. ಉದ್ದಕ್ಕೆ ಅಡ್ಡಕ್ಕೆ ಕೆಲವು ನೇರ,ಹಲವು ವಕ್ರ ರಸ್ತೆಗಳು. ಅವುಗಳನ್ನು ಬೆಳಗುವ ರಾತ್ರಿ ದೀಪಗಳು. ಈ ಪಟ್ಟಣಕ್ಕೆ ಮಧ್ಯರಾತ್ರಿ ಎನ್ನುವುದು ಬರೇ ಒಂದು ಪದ. ಆಕಾಶದಿಂದ ನೋಡಿದರೆ, ನೆಲದೆದೆಗೆ ಮೊಳೆ ಹೊಡೆದ ಹಾಗಿರುವ ಕಟ್ಟಡಗಳು. ಅವುಗಳ ಕಿಟಿಕಿಗಳಿಂದ ತಡರಾತ್ರೆ […]
ಮೂರನೇ ಆಯಾಮ
ಅಂಕಣ ಬರಹ ಹಾಡುವ ತೊರೆಗೆ ಹಾದಿ ತೋರುವ ಕವಿತೆಗಳು ಸಂಕಲನ-ತೊರೆ ಹರಿವ ಹಾದಿಕವಿ- ವಿನಯಚಂದ್ರಬೆಲೆ-೧೨೦ಪ್ರಕಾಶನ- ವಿಶಿಷ್ಟ ಪ್ರಕಾಶನ, ಹಾಸನ ಕವಿತೆಗಳ ಜಾಡು ಎಂತಹದ್ದು? ಅದು ಯಾವ ಹಾದಿ ಹಿಡಿದು ಹೊರಟಿರುತ್ತದೆ? ಕವಿತೆ ಅಂತರ್ಮುಖಿಯಾಗಿರಬೇಕೆ ಅಥವಾ ಬಹಿರ್ಮುಖಿಯಾಗಿರಬೇಕೆ ಎನ್ನುವ ಪ್ರಶ್ನೆ ಸದಾಕಾಲ ವಿಮರ್ಶೆಯನ್ನು ಕಾಡುತ್ತಿರುತ್ತದೆ. ಒಂದು ಕವಿತೆ ಅತ್ಯುತ್ತಮ ಅಥವಾ ಇನ್ನೊಂದು ಕವಿತೆ ಸಾಧಾರಣ ಇಲ್ಲವೆ ಈ ಕವಿತೆ ಕಳಪೆ ಎಂದು ಹೇಳುವ ಮಾನದಂಡವಾದರೂ ಯಾವುದು? ಕವಿತೆಯನ್ನು ಓದಿ ಆಸ್ವಾದಿಸಬೇಕೋ ಅಥವಾ ವಿಮಶೆಯ ನಿಕಶಕ್ಕೆ ಒಡ್ಡಿ ಒಳ್ಳೆಯ […]
ಅಂಕಣ ಬರಹ ಸೀಗಲ್ ಸೀಗಲ್ಮೂಲ : ಆಂಟನ್ ಚೆಕಾಫ್ ಕನ್ನಡಕ್ಕೆ : ಹೇಮಾ ಪಟ್ಟಣಶೆಟ್ಟಿಪ್ರ : ಅನನ್ಯ ಪ್ರಕಾಶನಪ್ರ.ವರ್ಷ :೨೦೦೭ಬೆಲೆ :ರೂ.೭೦ಪುಟಗಳು : ೧೦೮ ಎರಡು ತಲೆಮಾರುಗಳ ನಡುವಣ ಸಂಘರ್ಷವೇ ಈ ನಾಟಕದ ಮುಖ್ಯ ಕಥಾ ವಸ್ತು. ಇಬ್ಬರು ನಟಿಯರು ಮತ್ತು ಇಬ್ಬರು ಲೇಖಕರುಗಳ ನಡುವಣ ಸಂಬಂಧದ ಸ್ವರೂಪದ ಶೋಧನೆಯೇ ಇಲ್ಲಿನ ಮುಖ್ಯ ಕಾಳಜಿಯಾಗಿದೆ. ಹಿರಿಯ ನಟಿ ಅರ್ಕಾದಿನಾ ಮತ್ತು ಹಿರಿಯ ಲೇಖಕ ತ್ರಿಗೊರಿನ್ ಆಗಲೇ ಸಮಾಜದಲ್ಲಿ ತಮ್ಮ ನೆಲೆಯನ್ನು ರೂಪಿಸಿಕೊಂಡವರು. ಯುವಕ ತ್ರೆಪ್ಲೆಫ್ ಮತ್ತು ಎಳೆಯ […]
ಅಂಕಣ ಬರಹ ಹೊಸ ದನಿ – ಹೊಸ ಬನಿ – ೯ ಅರ್ಥಕ್ಕೂ ಮೀರಿದ ಅನುಭವಗಳಲ್ಲಿ ಅರಳುವ “ಶ್ರೀ ತಲಗೇರಿ” ಕವಿತೆಗಳು ಅರ್ಥಕ್ಕೂ ಮೀರಿದ ಅನುಭವಗಳಲ್ಲಿ ಅರಳುವ “ಶ್ರೀ ತಲಗೇರಿ” ಕವಿತೆಗಳು. ಉತ್ತರ ಕನ್ನಡ ಜಿಲ್ಲೆ ಕನ್ನಡ ಸಾಹಿತ್ಯ ಮತ್ತು ರಂಗಭೂಮಿಗೆ ತನ್ನದೇ ಆದ ವಿಶೇಷ ಕೊಡುಗೆಗಳನ್ನು ನೀಡುತ್ತಲೇ ಬಂದಿದೆ. ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿಯಂಥ ಅದ್ಭುತ ಪ್ರತಿಭೆಗಳನ್ನು ಮುಂಬಯಿಯ ಮಹಾಕೂಪಕ್ಕೆ ತಳ್ಳಿಯೂ ಅವರಿಂದ ಆ ಮಹಾನಗರದ ಸಕಲ ಸೂಕ್ಷ್ಮಗಳ ಪರಿಚಯ ಮಾಡಿಸುತ್ತಲೇ ತನ್ನದೇ ಆದ ಹವ್ಯಕ […]
ಅಂಕಣ ಬರಹ ಒಂದು ಹೃದ್ಯ ಕಾವ್ಯ ರಂಗಮ್ಮಹೊದೇಕಲ್ ತುಮಕೂರು ಜಿಲ್ಲೆಯ ಹೊದೇಕಲ್ ಗ್ರಾಮದ ಪ್ರತಿಭೆ ರಂಗಮ್ಮ ಹೊದೇಕಲ್.ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ.ಸಾಹಿತ್ಯ,ಸಂಘಟನೆ ಆಸಕ್ತಿಯ ಕ್ಷೇತ್ರಗಳು.ಒಳದನಿ,ಜೀವಪ್ರೀತಿಯ ಹಾಡು ಕವನ ಸಂಕಲನಗಳ ನಂತರ ಇದೀಗ ‘ನೋವೂ ಒಂದು ಹೃದ್ಯ ಕಾವ್ಯ’ ಹನಿಗವಿತೆಗಳ ಸಂಕಲನ ಹಾಸನದ “ಇಷ್ಟ” ಪ್ರಕಾಶನದಿಂದ ಪ್ರಕಟವಾಗಿದೆ. ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಕವಿತೆ ಅವ್ಯಕ್ತಗಳ ಅಭಿವ್ಯಕ್ತಿ.ಆತ್ಮದ ಬೆಳಕು.ಮತ್ತು ಕವಿತೆ ಮಾತ್ರವೇ ಆತ್ಮದ ಸಂಗಾತ ಅನ್ನಿಸಿದ್ದಕ್ಕೆ! ಕವಿತೆ ಹುಟ್ಟುವ ಕ್ಷಣ ಯಾವುದು ? ಕರುಳು ಕಲಕುವ ಯಾವುದೇ ಸಂಕಟವೂ […]
ಅಂಕಣ ಬರಹ ತ್ವರಿತವಾಗಿಉತ್ತಮನಿರ್ಧಾರತೆಗೆದು ಕೊಳ್ಳುವುದುಹೇಗೆ? ಹಿಂದೆ ಮಾಡಿದ ನಿರ್ಧಾರಗಳು ಇಂದು ನಾವಿರುವ ಸ್ಥಿತಿಗೆ ಕಾರಣ.ಎಂಬುದು ನಮಗೆಲ್ಲ ಗೊತ್ತಿರುವ ವಿಷಯವೇ. ಆದರೂ ಹಲವೊಮ್ಮೆ ನಾವು, ಛೇ! ನಾನು ಅಷ್ಟು ತಡವಾಗಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಈಗ ನೋಡು ಎಷ್ಟೊಂದು ನೋವು ಅನುಭವಿಸುವ ಹಾಗಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯ್ತು. ನನ್ನ ವಿಳಂಬ ನಿರ್ಧಾರದಿಂದ ಸಾಕಷ್ಟು ನಷ್ಟವಾಗುತ್ತಿದೆ ಅಂತ ತಿಳಿಯುತ್ತಿದ್ದರೂ ಅದನ್ನು ಬದಲಿಸಿಕೊಳ್ಳಲು ಆಗುತ್ತಿಲ್ಲ ಎಂದು ಹಲಬುತ್ತೇವೆ.ನಿರ್ಧಾರಗಳು ಇಡೀ ಜೀವನವನ್ನೇ ಆವರಿಸಿವೆ. ವೃತ್ತಿ ಪ್ರವೃತ್ತಿ ಆರೋಗ್ಯ ಸಂಬಂಧಗಳು ಎಲ್ಲವೂ ನಿರ್ಧಾರದಿಂದ […]
ಒಂದು ಜೀವನ ಸಾಲದು ( ಆತ್ಮ ಕಥೆ) ಒಂದು ಜೀವನ ಸಾಲದು ( ಆತ್ಮ ಕಥೆ)ಮೂಲ : ಕುಲದೀಪ್ ನಯ್ಯರ್ಅನುವಾದ : ಆರ್. ಪೂರ್ಣಿಮಾಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ :೨೦೧೮ಬೆಲೆ :ರೂ.೪೪೬ಪುಟಗಳು : ೫೯೨ ಇದು ಪ್ರಸಿದ್ಧ ಪತ್ರಕರ್ತ ಕುಲದೀಪ ನಯ್ಯರ್ ಅವರ ಆತ್ಮಕಥೆಯ ಅನುವಾದ. ಸಾಕಷ್ಟು ದೀರ್ಘವಾಗಿರುವ ಈ ಕೃತಿಸ್ವಾತಂತ್ರ್ಯೋತ್ತರ. ಭಾರತದಲ್ಲಿ ಘಟಿಸಿದ ಅನೇಕ ದುಃಖಕರ ಘಟನೆಗಳನ್ನು ನಿರೂಪಿಸುತ್ತದೆ. ಹಾಗೆಯೇ ಸ್ವಾತಂತ್ರ್ಯ ಪೂರ್ವದಲ್ಲಿ ದೇಶವನ್ನು ವಿಭಜನೆಯತ್ತ ಕೊಂಡೊಯ್ದ ರಾಜಕೀಯ ಸನ್ನಿವೇಶಗಳನ್ನು ಕುರಿತೂ ಹೇಳುತ್ತದೆ. ಸಾಮಾನ್ಯ […]
ಅಂಕಣ ಬರಹ ನೈಸು-ಬಿರುಸು ಒಮ್ಮೆ ತೊಗಲುಬೊಂಬೆ ಕಲಾವಿದರಾದ ಬೆಳಗಲ್ಲು ವೀರಣ್ಣನವರ ಜತೆಗೆ ಮಾತಾಡುತ್ತ ಕುಳಿತಿದ್ದೆ. ಮಾತುಕತೆ ನಡುವೆ ಅವರ ಮನೆಯಿಂದ ಫೋನುಕರೆ ಬಂತು. ಅವರು ಎತ್ತಿಕೊಂಡು ಮರಾಠಿಯಲ್ಲಿ ಮಾತಾಡಿದರು. ಮಾತು ಮುಗಿದ ಬಳಿಕ ನನ್ನತ್ತ ಹುಳ್ಳಗೆ ನೋಡಿ `ನಮ್ಮದು ಒರಟು ಮರಾಠಿ’ ಎಂದರು. ಉತ್ತರ ಕರ್ನಾಟಕದ ತಿರುಗಾಟದಲ್ಲಿ ಕೆಲವರು ನನ್ನ ಕನ್ನಡಕ್ಕೆ `ನಿಮ್ಮ ಮಾತು ನೈಸು. ನಮ್ಮದು ಬಿರುಸು’ ಎಂದು ಪ್ರತಿಕ್ರಿಯಿಸುವುದುಂಟು. ವಿಚಾರಿಸಿ ನೋಡಿದರೆ, ಬಿರುಸೆಂದು ಭಾವಿಸಿದವರ ಮಾತಲ್ಲಿ ಆಡುಮಾತಿನ ಪ್ರಾದೇಶಿಕ ರೂಪಗಳು ಹೆಚ್ಚ್ಚಿರುತ್ತವೆ, ನೈಸೆಂದು ಕರೆಯಲಾಗುವ […]
ಅಂಕಣ ಬರಹ ಕಬ್ಬಿಗರ ಅಬ್ಬಿ ರಾಗದ ಬೆನ್ನೇರಿ ಬಂತು ಭಾವನಾ ವಿಲಾಸ ಕರ್ನಾಟಕ ಸಂಗೀತದಲ್ಲಿ’ ಕದನ ಕುತೂಹಲ’ ಅನ್ನೋ ರಾಗ ಇದೆ. ಈ ರಾಗದ ಸ್ವರಗಳನ್ನು ಸಾಕಷ್ಟು ವೇಗವಾಗಿ ಹಾಡುತ್ತಾರೆ. ಸಮುದ್ರಮಥನದ ಸಮಯದಲ್ಲಿ ಆಕಡೆ ರಾಕ್ಷಸರು,ಈ ಕಡೆ ದೇವತೆಗಳು ಅಮೃತಕ್ಕಾಗಿ ಕಡಲನ್ನು ಕಡೆಯುವಾಗಲೂ, ಎರಡೂ ವಿರುದ್ಧ ಪಂಗಡಗಳ ನಡುವೆ ಕದನವೇ. ಮನಸ್ಸೊಳಗೂ ಅಷ್ಟೇ, ಯಾವುದೇ ಹೊಸ ಆವಿಷ್ಕಾರದ ಬೆಣ್ಣೆ ಮೂಡುವುದು, ವಿರುದ್ಧ ಚಿಂತನೆಗಳ ಮಂಥನದಿಂದಲೇ. ಈ ರಾಗವನ್ನು ನೀವು ಆಲಿಸುವಾಗ ಒಂದು ಮಂಥನದ ಅನುಭವ ಆಗುತ್ತೆ. ರಾಗ […]
ಅಂಕಣ ಬರಹ ಬಸ್ ಸ್ಟ್ಯಾಂಡೆನ್ನುವ ಮಾಯಾಲೋಕ ಚಲನೆ ಎನ್ನುವ ಪದದ ನಿಜವಾದ ಅರ್ಥವೇನೆಂದು ತಿಳಿಯಬೇಕಾದರೆ ಈ ಬಸ್ ಸ್ಟ್ಯಾಂಡಿನಲ್ಲಿ ಅರ್ಧ ಗಂಟೆ ಸುಮ್ಮನೆ ನಿಂತುಬಿಡಬೇಕು; ಅವಸರದಲ್ಲಿ ಅತ್ತಿತ್ತ ಓಡಾಡುತ್ತ ಬೋರ್ಡು ಹುಡುಕುವವರನ್ನು, ಕಂಟ್ರೋಲ್ ರೂಮಿನಿಂದ ಅಶರೀರವಾಣಿಯಂತೆ ಮೊಳಗುವ ಅನೌನ್ಸ್ಮೆಂಟಿಗೆ ಬ್ಯಾಗನ್ನೆತ್ತಿಕೊಂಡು ಬಸ್ಸಿನೆಡೆಗೆ ಓಡುವವರನ್ನು, ಒಂದು ನಿಮಿಷವೂ ಆಚೀಚೆಯಾಗದಂತೆ ಅದೆಲ್ಲಿಂದಲೋ ಓಡಿಬಂದು ಹೊರಡುತ್ತಿರುವ ಬಸ್ಸನ್ನು ಹತ್ತಿಕೊಳ್ಳುವವರನ್ನು ಸಹನೆಯಿಂದ ಗಮನಿಸಬೇಕು! ಬಸ್ಸಿನ ಹಾಗೂ ಅದರ ಚಲನೆಯ ಹೊರತಾಗಿ ಬೇರಾವ ವಿಷಯಗಳೂ ಆ ಕ್ಷಣದ ಅಲ್ಲಿನ ಬದುಕುಗಳ ಎಣಿಕೆಗೆ ಸಿಕ್ಕುವುದಿಲ್ಲ. ಭೂಮಿ […]