ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
“ತಿರುವುಗಳ ಬದುಕು”


ಗೆಳೆಯ
ನೀ ದೂರವಾದರೇನು
ಅರಿವಿನ ಹಾದಿ
ಜೊತೆಯಾಯಿತು
ಸರಿದ ಕಪ್ಪು ಛಾಯೆ
ಬೆಳದಿಂಗಳ ತಂಪಿನಲ್ಲಿ
ತಾವರೆ ಅರಳಿದಂತೆ
ನೀ ನನ್ನ ತೊರೆದು ಹೋದೆ
ಬದುಕು ಸೆಳೆಯಿತು
ಮೋಹದ ಮಿಂಚು
ಕರಗಿ
ಮಳೆ ಸುರಿದು
ಹಸಿರಿಗೆ ಉಸಿರಾದಂತೆ
ಸುಳ್ಳು ಪ್ರೀತಿಯೇ ಸರಿ
ಪ್ರೀತಿಯ ಸವಿ ನೀಡಿದೆ
ಕ್ಷಣ ಕಾಲ
ಬಯಸಿದ್ದೆಲ್ಲ ಸಿಗುತ್ತಿದ್ದರೆ
ಬದುಕಿಗೆ ಬೆಲೆ ಎಲ್ಲಿ
ಬದುಕು ಬವಣೆ ಅಲ್ಲ
ಸರಳತೆಯೂ ಅಲ್ಲ
ಬಯಸಿದಂತೆ ಬದುಕು
ಸಾಗುವುದಿಲ್ಲ…..
ಮಾಜಾನ್ ಮಸ್ಕಿ




Fine
ಬಹುಶಃ ಬಹುತೇಕರ ಬದುಕು ಹಾಗೇ ಇರುತ್ತೆ, ಬಯಸಿದ್ದು ಬಯಕೆಯಾಗೇ ಉಳಿತದೆ, ಸಿಗುವ ಮಾತು ಮರೀಚಿಕೆಯೇ
ವಾಸ್ತವ ಬಿಂಬಿಸುವ ಕವಿತೆ