ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಗೆಳೆಯ
ನೀ ದೂರವಾದರೇನು
ಅರಿವಿನ ಹಾದಿ
ಜೊತೆಯಾಯಿತು
ಸರಿದ ಕಪ್ಪು ಛಾಯೆ
ಬೆಳದಿಂಗಳ ತಂಪಿನಲ್ಲಿ
ತಾವರೆ ಅರಳಿದಂತೆ

ನೀ ನನ್ನ ತೊರೆದು ಹೋದೆ
ಬದುಕು ಸೆಳೆಯಿತು
ಮೋಹದ ಮಿಂಚು
ಕರಗಿ
ಮಳೆ ಸುರಿದು
ಹಸಿರಿಗೆ ಉಸಿರಾದಂತೆ
ಸುಳ್ಳು ಪ್ರೀತಿಯೇ ಸರಿ
ಪ್ರೀತಿಯ ಸವಿ ನೀಡಿದೆ
ಕ್ಷಣ ಕಾಲ

ಬಯಸಿದ್ದೆಲ್ಲ ಸಿಗುತ್ತಿದ್ದರೆ
ಬದುಕಿಗೆ ಬೆಲೆ ಎಲ್ಲಿ
ಬದುಕು ಬವಣೆ  ಅಲ್ಲ
ಸರಳತೆಯೂ ಅಲ್ಲ
ಬಯಸಿದಂತೆ ಬದುಕು
ಸಾಗುವುದಿಲ್ಲ…..


About The Author

2 thoughts on “ಮಾಜಾನ್‌ ಮಸ್ಕಿ ಅವರ ಕವಿತೆ “ತಿರುವುಗಳ ಬದುಕು””

  1. ಬಹುಶಃ ಬಹುತೇಕರ ಬದುಕು ಹಾಗೇ ಇರುತ್ತೆ, ಬಯಸಿದ್ದು ಬಯಕೆಯಾಗೇ ಉಳಿತದೆ, ಸಿಗುವ ಮಾತು ಮರೀಚಿಕೆಯೇ
    ವಾಸ್ತವ ಬಿಂಬಿಸುವ ಕವಿತೆ

Leave a Reply

You cannot copy content of this page

Scroll to Top