ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕತ್ತಲನು ಸೀಳಿ ಸಂಸಾರಕೆ ಸಿರಿ ಕಾಂತಿಯಾದವಳು ಹೆಣ್ಣು
ಅಶಾಂತಿಯ ಗೋಡೆ ಮುರಿದು ಮನೆಗೆ ಭಾತಿಯಾದವಳು ಹೆಣ್ಣು

ಸಂಕೋಲೆಗಳ ತೂರಿ ಸಮಾನತೆಯ ಬಾನಲಿ ಹಾರುತಿಹಳು
ಬದುಕಿನ ಪಯಣದಲಿ ಬೆಳಕಾಗಿ ನೀತಿಯಾದವಳು ಹೆಣ್ಣು

ಕಣ್ಣೀರಿನ ಕಡಲನ್ನೇ ಭೇದಿಸಿ ನಗುವಿನ ಖಜಾನೆಯಾಗುತ್ತಾಳೆ
ಜಗದ ಕಣ್ಣಾಗಿ ಸೌಜನ್ಯ ಕಲಿಸಿ ಶಾಂತಿಯಾದವಳು ಹೆಣ್ಣು

ಅಬಲೆಯೆಂಬ ಕೀಳು ಮನಸುಗಳ ಯೋಚನೆ ಕಿತ್ತೆಸೆದವಳು
ಅಂಧಕಾರವ ಅಳಿಸಿ ಅರಿವಿನ ಕಣ್ತೆರೆಸಿ ಜ್ಯೋತಿಯಾದವಳು ಹೆಣ್ಣು

ಕೇವಲ ರೂಪದ ಗೊಂಬೆಯಲ್ಲ ಹೆಣ್ಣು ಜ್ಞಾನ ದೀವಿಗೆಯಿವಳು
ಹಸೀನಾ ಅರಿವಿನ ಕಿಡಿಯಾಗಿ ಮಾನವತೆಗೆ ರೀತಿಯಾದವಳು ಹೆಣ್ಣು


About The Author

1 thought on “ಡಾ.ಹಸೀನಾ ಹೆಚ್.ಕೆ ಶಿವಮೊಗ್ಗ ಅವರ ಗಜಲ್”

  1. ನಮ್ಮ ಶಿವಮೊಗ್ಗದ ಕವಯಿತ್ರಿ ಶ್ರೀಮತಿ ಎಚ್.ಕೆ.ಹಸೀನಾ ಅವರ ಗಜಲ್ ಸಮಕಾಲೀನ ಸಂದರ್ಭದ ಸನ್ನಿವೇಶ ಹೆಣೆದಿದೆ. ಅವರು ಮಿರ್ಜಾಗಾಲಿಬ್ ಅವರ ಗಜಲ್ ಓದಿ ಅಧ್ಯಯನ ಮಾಡಿದ್ದರಿಂದ ಅವರಿಂದ ಇಂತಹ ಮಹತ್ವ ಪೂರ್ಣ ಗಜಲ್ ಹೊರಬಂದಿದೆ. ರಾಯಚೂರಿನ ಶಾಂತರಸ ಅವರ ಸಾಹಿತ್ಯ ಓದಿರುವ, ಅವರನ್ನು ತುಂಬಾ ಹತ್ತಿರದಿಂದ ನೋಡಿರುವ ನಮ್ಮ ಹಸೀನಾ ಈಗ ಶಿವಮೊಗ್ಗ ನೆಲದ ಶ್ರೇಷ್ಠ ಸಾಹಿತಿ, ಕವಿ, ವಾಗ್ಮಿ. ಅವರು ಮತ್ತಷ್ಟು ಕಾವ್ಯ ಕೃಷಿ ಮಾಡಲಿ.

Leave a Reply

You cannot copy content of this page

Scroll to Top