ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಬೀದಿಯಲ್ಲಿ ಬಿದ್ದವಳು
ಟಾರು ರೋಡು ಗಲ್ಲಿಗಲ್ಲಿ
ಫುಟ್ ಪಾತ್ ಮಠ ಮಸೀದಿ
ಎಲ್ಲವೂ ಎನ್ನ ಸರ್ವಸ್ವವೆನುತ
ಕಾಲ ಕಳೆಯುತಿಹಳು
ಕಣ್ಣಲ್ಲೇ ಕಂಡವರ ಜರಿಯುತ
ಕೆಂಡದುಂಡೆ ಕಣ್ಣ ತಿರುವುತ
ಚಿಂದಿಯಲಿ ಹಂದಿಯೊಡಗೂಡಿ
ಕೇಕೆ ಹಾಕುತ
ನಿಧಿ ಸಿಕ್ಕಂತೆ ಓಡುತಿಹಳು
ಬಿಸಿಲಿನ ದಳ್ಳೂರಿ ಎಲ್ಲೋ
ಕನಸಿನ ಕಲ್ಪನೆ ಎಲ್ಲೋ
ಕತ್ತಲಿನ ಕರಾಳತೆ ಎಲ್ಲೋ
ಸುತ್ತೆಲ್ಲಾ ಜನವಿದ್ದರೂ
ಇವಳಿಗಿಲ್ಲ ಚಿಂತೆ
ಹಸಿದೊಡಲಿಗಾಗಿ ಕೈ ಹಾಕಿಹಳು
ಅಂಗಡಿಯ ಲಾಡುವಿಗೆ
ಬೆನ್ನೇರಿ ಬಂತು ಬಾಸುಂಡೆ
, ಬಾಯಿಗೆ ಸಿಕ್ಕಷ್ಟು ತುರುಕುತ್ತಾಲೋಡುವಳು
ದಿಕ್ಕು ದೆಸೆ ತಿಳದತ್ತ
ಕಂಡವರ ಕರುಣೆಗೆ
ನಿಂತವರ ನಿಂದೆಗೆ
ನಕಾರಾತ್ಮಕ ಉತ್ತರವಿತ್ತು
ಸಂಧಿ ಗೊಂದಿಗಳಲ್ಲಿ
ಸುಖನಿದ್ದೆ ಗೈಯುತುಳಿದವಳೀಕೆ
ಹಿಂದೊಮ್ಮೆ ಮೆರೆದವಳು
ಈಗೊಮ್ಮೆ ತೊರೆದವಳಾಗಿ
ಬೀದಿಯಲಿ ಬಿದ್ದವಳಾಗಿಹಳು


About The Author

1 thought on “ಪ್ರೊ. ಡಾ.ಸರಸ್ವತಿ ಕಳಸದ ಅವರ ಕವಿತೆ “ಬೀದಿಯಲಿ ಬಿದ್ದವಳು””

Leave a Reply

You cannot copy content of this page

Scroll to Top