ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್


ಯಾತಕೋ ಗೊತ್ತಿಲ್ಲ ನನ್ನ ಮೌನ ಮಾತಿಗೆ ಇಳಿದಿದೆ
ಏನೊಂದು ಅರಿತಿಲ್ಲ ನನ್ನ ಮಾತು ಮೌನವ ತಳೆದಿದೆ
ಪ್ರೀತಿಯಲ್ಲಂತೂ ಮಾತು ಮೌನಗಳದ್ದೇ ಕಾರುಬಾರು
ಮುದ್ದಿಸುವಾಗ ಸದ್ದೇ ಇಲ್ಲದೇ ಸವಿ ಸಲುಗೆ ಬೆಳೆದಿದೆ
ಲೋಕದ ಕಣ್ಣಿಗಂತೂ ಪ್ರೇಮಿಗಳೆಂದಿಗೂ ಹುಚ್ಚರೇ
ಇಂದಲ್ಲ ಹಿಂದಿನಿಂದಲೇ ಜಗದ ಹಗೆಯು ಉಳಿದಿದೆ
ಮನಸೆರಡು ಒಪ್ಪಿದರೇನು ಕುರುಡರು ಒಪ್ಪಬೇಕಲ್ಲ
ಜಗತ್ತು ಪ್ರೀತಿಯನು ಜಾತಿ ಅಂತಸ್ತಿನಿಂದ ಅಳೆದಿದೆ
ಮಹಾಂತ ಭರವಸೆಯ ಬುತ್ತಿ ಹಿಡಿದು ನಿಂತಿರುವನು
ಬರಿದೆದೆಯ ಬಾಂದಳದಿ ತಾರೆಯೊಂದು ಹೊಳೆದಿದೆ
ಎಮ್ಮಾರ್ಕೆ



