ಕಾವ್ಯ ಸಂಗಾತಿ
ಉಷಾರಾಣಿ ಗುರುಪ್ರಸಾದ್
“ಪ್ರೀತಿಯ ದೀಪ”


ಪ್ರಕೃತಿಯ ಮಡಿಲಲಿ
ಮೂಡಿದ ರಂಗು,
ಹೃದಯದ ಗೋಡೆಯ
ಮೇಲೆ ಹೊಸ ತರಂಗು.
ಮುಂಜಾವಿನ ಮಂಜಲಿ
ಅರಳಿದ ಹೂವು,
ಮರೆಸಿದೆ ಎದೆಯಲಿ
ಮೂಡಿದ ನೋವು.
ಕುಂಚದ ತುದಿಯಲಿ
ಮೂಡಿದ ರೂಪ,
ಮನದ ಕತ್ತಲಿಗೆ
ಪ್ರೀತಿಯ ದೀಪ.
ಕಣ್ಣಿನ ಭಾಷೆಗೆ
ಸಿಗದ ಅರ್ಥ,
ಭಾವನೆಗಳೆಲ್ಲವೂ
ಪೂರ್ಣ ಸಮರ್ಥ.
ಬಾನಿನ ಅಂಚಲಿ
ಕಾಮನಬಿಲ್ಲು,
ಹೃದಯ ಅಂಗಳದಿ
ನಿನ್ನ ಹೆಜ್ಜೆಯ ಸದ್ದು.
ಕನಸಿನ ಲೋಕದ
ಸುಂದರ ಮದ್ದು,
ಒಲುಮೆಯ ತೋಟದ
ಸಿಹಿ ಸವಿ ಮುದ್ದು
ಉಷಾರಾಣಿ ಗುರುಪ್ರಸಾದ್,




Excellent poem