ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ನಾ ಯಾವುದ ನಂಬಲಿ?
ಕಣ್ಣಿಗೆ ರಾಚುವ ಬಣ್ಣದ ಭ್ರಮೆಯನ್ನೋ?
ಕರ್ಣಕೆ ಅಪ್ಪಳಿಸುವ ಹುಸಿ ಪದಗಳ ಸದ್ದನ್ನೋ?
ಇವೆಲ್ಲವ ಮೀರಿ
ಆ ಎದೆಯಾಳದಿ ತುಡಿಯುವ ಪ್ರಜ್ಞೆಯ ದನಿಯನ್ನೋ?

ದಮನಿಸುವ ಸಿಂಹಾಸನದ ದರ್ಪವನ್ನೋ?
ಬೀದಿಯಲಿ ಧಗಧಗಿಸುವ ಕಿಚ್ಚಿನ ಜ್ವಾಲೆಯನ್ನೋ?
ಎದೆಯತ್ತ ಗುರಿಯಿಟ್ಟ ಬಂದೂಕಿನ ನಾಲಗೆಯನ್ನೋ?
ಅಥವಾ
ನೆಲದ ಮೇಲೆ ಹೆಪ್ಪುಗಟ್ಟಿದ ನಿಸ್ಸಹಾಯಕ ನೆತ್ತರ ಗುರುತನ್ನೋ?

ನಂಬಿಕೆ ಬೆಲೆಗೆ ಬಿಕರಿಯಾದ ಸರಕಾದಾಗ,
ನನ್ನ ನಂಬಿಕೆಗಳು ಮಾರಾಟವಾಗಿ,
ನನ್ನತನದ ಗುರುತನ್ನೇ ಕಳೆದುಕೊಂಡಾಗ…
ನಾ ಬರಿಯ ಅಧಿಕಾರದ ಗುರುತಾದೆ!
ಇಷ್ಟೆಲ್ಲದರ ನಡುವೆ ಕಳೆದುಹೋದ
ನಾನು ಯಾರು?
ನಾನು ಯಾರು?


About The Author

1 thought on “ನಿರಂಜನ ನಾಯಕ ಅವರಕವಿತೆ “ನಾ ಯಾವುದ ನಂಬಲಿ?””

Leave a Reply

You cannot copy content of this page

Scroll to Top