ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಚಿತ್ರ ಗೆರೆ ಬದುಕು
ಮೂರು ಒಂದು ಕಥೆಯ ದಾರಿ
ಯಾರೋ ನಡೆದು ಹೋದಂತೆ
ಇನ್ನಾರೋ ಹಿಂಬಾಲಿಸಿದಂತೆ
ಕೆಲವು ಚಿತ್ರಗಳು ಮುಂದೆ
ಓಡಿದಂತೆ ಕಾಲದ ಓಟಕ್ಕೆ
ತೆಗೆವ ತರತರದ ಚಿತ್ರಗಳು
ಬಣ್ಣದ ಎಳೆಗಳ ಹೊದಿಕೆ
ಕಾಣದ ಮುಖ ಪುಟ
ಅಂದುಕೊಳ್ಳುವ ಸಲಿಗೆ
ದೂರ ನಿಂತ ನಿಲುವು
ಹಸಿರಿನಿಂದ ಹುಟ್ಟಿದ
ಸಸಿಯೊಂದು ಹಸಿರು ಹರಡಿಹ
ಗೆರೆಗಳ ಚಿತ್ರ
ಮೋಡದ ಮೇಲೊಂದು ಕುಳಿತ
ಹನಿ ಮೋಡದ ಸನಿಹ
ಚಿಟ್ಟೆ ಹೆಜ್ಜೆಯ ಗುರುತು
ಹಕ್ಕಿ ಗೂಡಿನ ಹಾಡು
ಮುಳುಗುವ ದಿಗಂತದಿ
ಸಾಗುವ ಪುಟ್ಟ ದೋಣಿ
ಹುಲ್ಲು ಹೊರೆಯ ನಡುವೆ
ಮಗುವಿಗೆ ಕಟ್ಟಿಟ್ಟ
ಅಮ್ಮನ ಹಸಿವೆಯ ರೊಟ್ಟಿ
ಅಪ್ಪನ ಕಿಸೆಯಂಚಿನಲ್ಲಿ
ಕುಳಿತ ಸೊಪ್ಪು ಕಟ್ಟಿನ ಬಾಕಿ
ಯಾರಿಗೂ ಕಾಯದೇ
ಹೊರಡುವ ಬಸ್ಸಿನ ಪಯಣ
ದೂರ ದಾರಿಯ ನಡುವೆ
ಇಳಿವ ಗುರುತಿಗೆ
ಕಾಣುವ ಸಣ್ಣ ದಣಪೆಯ
ಕೇಳದ ಕಥೆಗಳು
ಎಲ್ಲವೂ ವಾಸ್ತವದ
ಚಿತ್ರದ ಕವಿತೆಗಳು


About The Author

Leave a Reply

You cannot copy content of this page

Scroll to Top