ಕಾವ್ಯ ಸಂಗಾತಿ
ಕಲ್ಪನಾ ಎಸ್ ಪಾಟೀಲ
“ಕಾವ್ಯ”


ಕಾವ್ಯ ನನ್ನಲ್ಲಿದೆ ನಿನ್ನಲ್ಲಿದೆ
ಕಾವ್ಯ ಮನದ ಮಿಡಿತಲ್ಲಿದೆ
ಹೃದಯದ ತುಡಿತದೊಳಿದೆ
ಎದೆ ಕದದ ಬಡಿತದಲ್ಲಿದೆ.
ಕಾವ್ಯ ಬೀಸುವ ಕಲ್ಲಿನ ಸದ್ದೊಳು
ಕೇರುವ ಮರದ ಕಾಳಿನಲ್ಲಿಹುದು
ಬಿಂದಿಗೆ ಬಾವಿಯೊಳು ಮುಳುಗವುದರಲ್ಲಿದೆ.
ಕಂದನ ಹಸಿವಿನ ಅಳುವಿನಲಿ
ತಾಯಿ ರಮಿಸಲು ಹಾಡುವ ರಾಗದೊಳು
ಕಾವ್ಯ ಅಪ್ಪನ ಅಗಾಧ ಪ್ರೀತಿಯಲ್ಲಿದೆ.
ರೈತನುಳುವ ನೇಗಿಲದ ಹದದಲ್ಲಿ
ಕುಂಟಿ ಕೂರಗಿಯ ತಾಳದಲಿ
ಕಾವ್ಯಕೂ ಜನನವಿಹುದಲ್ಲಿ
ಹಲ್ಲುದುರಿ ಹಣ್ಣಾದ ಅಜ್ಜ ಅಜ್ಜಿಯ ನಗುವಲಿ
ಕೈಗಾಸರೆಯಾದ ಕೋಲಿನಲಿದೆ ಕಾವ್ಯ
ಹಿರಿಯರ ಹರಕೆಯೊಳಿದೆ
ಬದುಕಿನ ಬವಣೆಯೊಳಿದೆ.
ಕಾವ್ಯದ ಕಟ್ಟುವವರ ಮನದಲಿದೆ
ಸುಪ್ತ ಮನಸ್ಸಿನಾಳದಲಿ ಹುದುಗಿದೆ
ಹುಟ್ಟಿನಲಿದೆ ಗುಟ್ಟಿನಲ್ಲಿದೆ
ಸಾವಿನಂಚಿನಲ್ಲಿಯೂ ಇದೆ.
ಕಲ್ಪನಾ ಎಸ್ ಪಾಟೀಲ
ಕಾವ್ಯಧರೆ



