ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಮುಸುಕಿದ ಮೋಡದಿ
ಗುಡುಗು ಸಿಡಿಲಿಗೆ,
ಅಂಜಿದ ಸೂರ್ಯನಿಂದು
ಬರಲಿಲ್ಲ ಹೊರಗೆ.
**
ಸಂಪೂರ್ಣ ಆಗಸವ
ಮೋಡ ಮನೆ ಮಾಡಿತು,
ದಿನಕರ ಬಾರದೆ
ದಿನವೊಂದು ಕಳೀತು.
*
ರವಿ ನೋಡದ ಚುಕ್ಕೆ
ಕವಿಗೂ ಕಾಣಲಿಲ್ಲ,
ಸಂಜೆಯ ಹೊತ್ತಾದರೂ
ಮೋಡ ಸರಿಯಲಿಲ್ಲ,
**
ಅಡಗಿರುವ ರವಿ
ಆಗಾಗ ಕಾಣಿಸುವ,
ಕೋಲ್ಮಿಂಚು ಸಿಡಿದೊಡೆ
ಮತ್ತೆ ಮರೆಯಾಗುವ.
ಜಡಿ ಮಳೆ,ಛಳಿಯು
ಬಹಳ ಬೇಜಾರಿದು,
ನವ ಜೋಡಿಗೆ ಮಾತ್ರ
ಒಲವಿನ ಉಮೇದು.
**
ಕಪ್ಪಾದ ಮೋಡಕಿಂದು
ತೂತೊಂದು ಬಿದ್ದಂತಿದೆ,
ಅತೀ ಮಳೆ, ಥಂಡಿಗೆ
ಭೂಮಿಯೇ ನಡುಗಿದೆ.
———————-
Pages
ವ್ಯಾಸ ಜೋಶಿ.