ಕಾವ್ಯ ಸುಧೆ ( ರೇಖಾ ) ಅವರ ಕವಿತೆ-ಚಂದ್ರ ಬಿಂಬ

ಗಗನದೂರ ಚಂದಿರ ಭೂಮಿಗೇಕೆ ಬಂದೆ
ತಂಪಾದ ಗಾಳಿಯೊಡನೆ ಏನಿದು ಲೀಲೆ
ಭುವಿಯ ತುಂಬೆಲ್ಲಾ ಬೆಳಕನು ಚೆಲ್ಲಿದೆ
ಜಲಜೆ ಸರಸದಿ ಮೂಡಿದೆ ಬಿಂಬದಲೆ…….

ದೂರದಿ ಇರುವ ಸುಂದರವಾದ ಚಿತ್ರಣ
ಕಂಡಿತು ಸನಿಹವೇ ಆಗಸದ ವೈಭವ
ಕಾಣುವ ಕಣ್ಣಿಗೆ ಅದುವೇ ರಸದೌತಣ
ಮನವು ಸೋತಿದೆ ಸವಿಯುತ ನಿನ್ನಂದವ…….

ಹರಿವ ಝರಿಯ ಮಾರ್ದನಿಯ ಲಹರಿ
ಮುಸ್ಸಂಜೆಯ ಒಡಲಾಳದ ತೇಜ: ಪುಂಜ
ಕಲ್ಪನೆ ಸಾಲಿಗಾದೆ ಮುನ್ನುಡಿಯ ಶಾಯರಿ
ಅರಳಿ ನಗುತಲಿದೆ ಹೊಂಗನಸ ನೀರಜ…….!!

————————————-

Leave a Reply

Back To Top