ಕಾವ್ಯ ಸಂಗಾತಿ
ಶಿಲ್ಪಾ ಮ್ಯಾಗೇರಿ
ಕಂಬಳಿ ಹುಳ ಚಿಟ್ಟೆ ಆದಂತೆ.
ಗಾಳಿಯಲ್ಲಿ ಬೆರಳು
ಗೀಚಿದ ಚಿತ್ರಕ್ಕೆ ನಿನ್ನ ರೂಪ ಬಂದರೆ
ಯಾರಿಗೂ ಹೇಳಬೇಡ
ಹರಿಯುವ ನದಿಗೆ ಇದಿರಾಗಿ
ನಿನ್ನ ಬಲದಿಂದಲೇ ನಾ ಮೇಲಾದರೆ
ಅಚ್ಚರಿ ಪಡಬೇಡ
ಕಣ್ಣು ಕುರುಡಾಗಿಸುವ ಕಾರ್ಗತ್ತಲ ದಾರಿಯಲಿ ನಾ ಅಳುಕದೆ ನಡೆದು ಬಂದರೆ
ನೀ ಬೆರಗಾಗಬೇಡ
ಸೋತ ಕಾಲುಗಳ
ಜೀವ ಹೀನ ಕಣ್ಣುಗಳ
ಬದುಕಿಗೆ ಬೆನ್ನು ಹಾಕಿದ
ಆ ಹಳೆಯ
ನಾ
ನಿನಗೆ ದೊರಕದಿದ್ದರೆ
ನೀ ಹುಡುಕಬೇಡ
ಅರಿತುಕೊ
ಕುಂಬಳಿ ಹುಳು ಚಿಟ್ಟೆಯಾಯಿತೆಂದು
ಕೊರಡೊಂದು ಮತ್ತೆ ಚಿಗುರಿತೆಂದು
ಶೂನ್ಯದಿಂದ ಸಕಲ ಉದಯಿಸಿತೆಂದು
ತಿಳಿದುಕೋ
ನೀ ಬಂದು ನಾ ಬಂದೆನೆಂದು.
ಶಿಲ್ಪಾ ಮ್ಯಾಗೇರಿ.
ಒಳ್ಳೆಯ ಕವಿತೆ
ಸತ್ಯದ ದರ್ಶನವಾದ ಭಾವ ಕವಿತೆಯಲ್ಲಿದೆ. ಉತ್ತಮ ಕವಿತೆ
ಅರ್ಥಪೂರ್ಣ ಸಾಲುಗಳು
Nice
ಅರ್ಥಪೂರ್ಣ ಕವಿತೆ ,ಮನ ಮುಟ್ಟಿತು.
ಭಾವ ತುಂಬಿದ ಸಾಲುಗಳು