ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಬಂಗಾರದ ಮನುಷ್ಯ ಚಿತ್ರದಿಂದ ಡಾ. ರಾಜ್ ಕುಮಾರ್ ಹಳ್ಳಿಯಲ್ಲೇ ಜೀವಿಸಿ ವ್ಯವಸಾಯ ಮಾಡುವ ರೈತರಿಗೆ ರೋಲ್ ಮಾಡಲ್ ಆದರು. ಆಟೋರಾಜ ಸಿನಿಮಾದಿಂದ ಆಟೋ ಚಾಲಕರಿಗೆ ರೋಲ್ ಮಾಡೆಲ್ ಆದವರು ಶಂಕರ್ ನಾಗ್. ನಾನೀಗ ಬರೆಯ ಹೊರಟಿದ್ದು ಆಟೋ ನಾಗರಾಜ್ ಕಥೆ. ಇವರು ಮೂಲತ; ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂ ಕಿನ ಮೇಗಲಪುರದವರು. ವಿದ್ಯಾರ್ಥಿ ಜೀವನದಲ್ಲಿ ಎಸ್.ಎಸ್.ಎಲ್.ಸಿ. ಒಂದು ಪ್ರಮುಖ ಘಟ್ಟ. ಇಲ್ಲಿ ಫೇಲಾದವರು ಮುಂದೆ ಓದುವ ಆಸಕ್ತಿ ಕಳೆದುಕೊಳ್ಳುವರು. ಓದು ಬಿಟ್ಟು ಕೆಲಸ ಹುಡುಕುವರು. ಅಂತೆಯೇ ನಾಗರಾಜ್ ಹೆಚ್.ಐ,ಎಸ್, ಎಂಬ ಸಿನಿಮಾ ಟೆಂಟಿನÀಲ್ಲಿ ಟಿಕೇಟ್ ಹರಿದುಕೊಡುವ ಕೆಲಸ ಹುಡುಕಿಕೊಂಡರು. ನಂತರ ಹಲಗೂರು ದೊಡ್ಡಿ ಮಂಡ್ಯ ಸುತ್ತುವ ಖಾಸಗಿ ಬಸ್ಸಿನಲ್ಲಿ ಕಂಡಕ್ಟರ್ ಕಮ್ ಕ್ಲೀನರ್ ಆದರು. ಸಿನಿಮಾದಲ್ಲಿ ನಟನಾಗಬೇಕೆಂಬ ಆಸೆ ಸಿನಿಮಾ ಟೆಂಟ್‌ನಲ್ಲಿ ಟಿಕೇಟ್ ಕೊಡುವಾಗಲೇ ತಲೆಯಲ್ಲಿ ಬೇರೂರಿದೆ. ಬಸ್ ಟಿಕೇಟ್ ಕೊಟ್ಟು ಡ್ರೆöÊವರ್‌ಗೆ ರೈಟ್ ಹೇಳಿ ನೈಟೆಲ್ಲಾ ನಟನೆಯ ಕನಸು ಕಾಣುತ್ತಾರೆ. ಸಿನಿಮಾ ಗುಂಗಿನಲ್ಲೇ ಬೆಂಗಳೂರಿಗೆ ಬರುತ್ತಾರೆ. ಆಟೋ ಸ್ಟಾö್ಯಂಡ್‌ನಲ್ಲಿ ಆಟೋ ತೊಳೆಯುತ್ತಾ ಆಟೋ ಡ್ರೆöÊವರ್ ಆಗುತ್ತಾರೆ. ತುಮಕೂರು ಮಹಾದೇವಯ್ಯ ಆಟೋ ಖರೀದಿಸಲು ನೆರವಾಗುತ್ತಾರೆ. ರಿಕ್ಷಾ ಓಡಿಸಿದ್ರೂ ಚಿನ್ನಾ ರಿಚ್ ಆಗಿ ಸಾಕ್ತೀನಿ ನಿನ್ನಾ..ಎಂದು ಆಟೋ ಹಿಂದೆ ಬರೆಸಿ ಐದು ವರ್ಷ ಯಾವುದೇ ಸಿನಿಮಾದಲ್ಲಿ ಅವಕಾಶ ಸಿಕ್ಕದೇ ಆಟೋ ಓಡಿಸಿ ಜೀವನ ನಡೆಸುತ್ತಾರೆ. ಹೀಗಿರಲು ಒಮ್ಮೆ ಇವರು ಕಂಠೀರವ ಸ್ಟುಡಿಯೋಗೆ ಬಾಡಿಗೆಗೆ ಹೋಗಿ ಅಲ್ಲಿ ನಡೆಯುತ್ತಿದ್ದ ಶೂಟಿಂಗ್ ನೋಡುತ್ತಾ ನಿಲ್ಲುತ್ತಾರೆ. ನಿರ್ದೇಶಕರು ಓಂ ಸಾಯಿ ಪ್ರಕಾಶ್ ಜನರನ್ನು ಹಿಂದೆ ಕಳಿಸಲು ಸಹಾಯಕರಿಗೆ ತಿಳಿಸಲು ಈ ತಳ್ಳಾಟದಲ್ಲಿ ನಾಗರಾಜ್ ಕೆಳಗೆ ಬೀಳುತ್ತಾರೆ. ಅಂದು ಕೆಳಗೆ ಬಿದ್ದವ ಮತ್ತೇ ಮೇಲೆದ್ದು ಇದೇ ಓಂ ಸಾಯಿ ಪ್ರಕಾಶ್ ಮಾರ್ಗದರ್ಶನದಂತೆ ಆಟೋಗಳಿಗೆ ಸಿನಿಮಾ ಪೋಸ್ಟರ್ ಅಂಟಿಸಿ ಪ್ರಚಾರ ಮಾಡುವ ಮೂಲಕ ಸಿನಿಮಾ ರಂಗದ ಸಂಪರ್ಕ ಸಾಧಿಸಿ ಪೋಷಕ ನಟರಾಗಿ ಅವಕಾಶ ಗಿಟ್ಟಿಸುತ್ತಾರೆ. ಇವರ ೨೦ ವರ್ಷಗಳ ಗತ ಇತಿಹಾಸದಲ್ಲಿ ೬೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ದರ್ಶನ್ ಅಭಿನಯದ ಸಾರಥಿ ಸಿನಿಮಾದಲ್ಲಿ ತೂಗುದೀಪ ದಿನಕರ್ ನಟನೆಗೆ ಅವಕಾಶ ನೀಡಿ ಈ ಸಿನಿಮಾದ ಹಾಡಿಗೆ ೪೦೦ ಆಟೋಗಳು ಬೇಕಾಗಿ ಇಷ್ಟೂ ಆಟೋ ಸರಬರಾಜು ಮಾಡಿದ ಸಂಘಟಕರು ಈ ಆಟೋ ನಾಗರಾಜ್.
ಈ ಪಾದ ಪುಣ್ಯಪಾದ ಹಾಗೂ ಸರ್ವಾಂತರ್ಯಾಮಿ ಚಿತ್ರಗಳಲ್ಲಿ ಇವರದು ಮುಖ್ಯ ಪಾತ್ರ. ಕಳೆದ ವರ್ಷ ಮೈಸೂರು ದಸರಾ ಫಿಲಂ ಫೆಸ್ಟಿವೆಲ್‌ನಲ್ಲಿ ಈ ಪಾದ ಪುಣ್ಯಪಾದ ಸಿನಿಮಾ ಪ್ರದರ್ಶನ ಮಾಲ್ ಆಫ್ ಮೈಸೂರು ಶಾಪಿಂಗ್ ಕಾಂಪ್ಲೆಕ್ಸ್ನ ಐನಾಕ್ಸ್ನಲ್ಲಿ ಇತ್ತು. ಇದೊಂದು ಆನೆಕಾಲು ರೋಗಿಯ ಕಥೆ. ಈ ಸಿನಿಮಾ ಪ್ರೇಕ್ಷಕನಿಗೆ ಹೊಸ ಆಯಾಮದಲ್ಲಿ ಪರಿಣಾಮ ಬೀರುತ್ತದೆ. ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ಕಾಯಿಲೆಗಳು ಬರುತ್ತವೆ. ರೋಗ ಬಂದಾಗ ರೋಗಕ್ಕಿಂತ ಮಾನಸಿಕ ಯಾತನೆಯೇ ಜಾಸ್ತಿ. ಅಂತಹ ವೇಳೆ ಎದೆಗುಂದದೆ ತಾಳ್ಮೆಯಿಂದ ಎದುರಿಸಬೇಕೆಂಬ ಸಂದೇಶ ನೀಡುವ ಚಿತ್ರದ ನಿರ್ದೇಶಕ ಸಿದ್ಧು ಪೂರ್ಣಚಂದ್ರ. ಇವರ ನಿರ್ದೇಶನದ ದಾರಿ ಯಾವುದಯ್ಯ ವೈಕುಂಠಕ್ಕೆ ಸಿನಿಮಾಕ್ಕೆ ನೂರಕ್ಕೂ ಹೆಚ್ಚು ರಾಷ್ಟಿçÃಯ, ಅಂತಾರಾಷ್ಟಿçÃಯ ಪ್ರಶಸ್ತಿ ಬಂದಿವೆ. ಸಿದ್ದು ಈ ಮೊದಲೇ ನನಗೆ ಪರಿಚಿತರಾಗಿದ್ದರು. ಇವರ ಕರೆಯ ಮೇರೆಗೆ ಅಂದು ಮೈಸೂರಿಗೆ ಹೋಗಿದ್ದ ನಾನು ಸಿನಿಮಾ ನೋಡಿ ವಿಮರ್ಶೆ ಬರೆದಿದ್ದೆ. ಮಾರನೇ ದಿನ ಬೆಳಿಗ್ಗೆಯೇ ಆಟೋ ನಾಗರಾಜು ಪೋನ್ ಮಾಡಿ ಥ್ಯಾಂಕ್ಸ್ ಹೇಳಿ ಖುಷಿ ಹಂಚಿಕೊAಡಿದ್ದರು. ಇವರ ಮುಖ್ಯ ಪಾತ್ರದ ಸರ್ವಾಂತರ್ಯಾಮಿ ಚಿತ್ರ ಬಿಡುಗಡೆಯಾಗಿದೆ. ಸರ್ವಾಂತರ್ಯಾಮಿ ಪದದ ಅರ್ಥ ಎಲ್ಲರ ಮನಸ್ಸಿನಲ್ಲಿ ಇರುವವ ಮತ್ತು ಎಲ್ಲರ ಮನದ ಮಾತನ್ನು ತಿಳಿದುಕೊಂಡಿರುವವ ಎಂದರ್ಥ. ಮೊಬೈಲ್ ಪೋನ್ ದುರುಪಯೋಗದ ದುರಂತ ಕಥೆ ಹೇಳುವ ಈ ಸಿನಿಮಾದ ನಿರ್ದೇಶಕರು ರಂಗಸ್ವಾಮಿ ಕಪನಿಪಾಳ್ಯ. ಇವರು ಈ ಮೊದಲು ಕೃಷ್ಣ ಲೀಲಾ, ಅಮ್ಮ ಐ ಲವ್ ಯು, ಶಿವಾಜಿನಗರ, ತಾಯಿಗೆ ತಕ್ಕ ಮಗ ಇರುವುದೆಲ್ಲವ ಬಿಟ್ಟು, ಕಾಟೇರ ರಾರ‍್ಟ್ ದೃಶ್ಯ, ರಸ್ತುಂ ಮೊದಲಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಯದರ‍್ಗಿ, ಗುಡ್ಡದ ಭೂತ, ವಿಚಾರಣೆ, ಬಸ್ ಕಂಡಕ್ಟರ್ ಮೈಸೂರ್ ಡಾನ್ ಇವು ಇವರ ಮುಂಬರುವ ಚಿತ್ರಗಳು. ಚಿತ್ರರಂಗದಕ್ಕೆ ಬಂದು ನಟನಾಗಿ ಗರ‍್ತಿಸಿಕೊಂಡಿದ್ದರು ನಾಗರಾಜ್ ಮುಂದೆ ಆಟೋ ಪದವನ್ನು ಬಿಟ್ಟಿಲ್ಲ. ಇದು ಬದುಕಿನ ಪಾಠ.


About The Author

Leave a Reply

You cannot copy content of this page

Scroll to Top