ಕಾವ್ಯ ಸಂಗಾತಿ
ರತ್ನರಾಯಮಲ್ಲ
ಗಜಲ್


ಚಳಿ ಹೋಗಲಾಡಿಸುವ ನೆಲೆ ನಿನಗೆ ಮಾತ್ರ ಗೊತ್ತು
ಆರುಮೆ ಝರಿ ಹರಿಸುವ ಸೆಲೆ ನಿನಗೆ ಮಾತ್ರ ಗೊತ್ತು
ಶಾಂತಿ ಕದಡುವ ಬಲೆ ಹಿಡಕೊಂಡು ಜನ ನಿಂತಿಹರು
ಮನ ಬಯಸುವ ನೆಮ್ಮದಿ ಮಲೆ ನಿನಗೆ ಮಾತ್ರ ಗೊತ್ತು
ಮಾಲೆ ಧರಿಸಿ ಎಸೆಯುವವರ ದಂಡೆ ನಮ್ಮ ನಡುವಿದೆ
ಮಲ್ಲಿಗೆಯ ಸುಮದ ಕಂಪಿನ ಬೆಲೆ ನಿನಗೆ ಮಾತ್ರ ಗೊತ್ತು
ಕಲ್ಲು ಮುಳ್ಳುಗಳ ಹಾದಿ ಕಂಡು ನಾನು ಎದೆಗುಂದಲಾರೆ
ನನ್ನ ಕೈಯ ಹಿಡಿದು ನಡೆಸುವ ಕಲೆ ನಿನಗೆ ಮಾತ್ರ ಗೊತ್ತು
ಉಸಿರ ಏರಿಳಿತಕೆ ಭಾಷೆ ಬರೆಯಲಾಗದು ಯಾರಿಂದಲೂ
ಮಲ್ಲಿಯ ಹೃದಯ ಬಡಿತದ ಅಲೆ ನಿನಗೆ ಮಾತ್ರ ಗೊತ್ತು
ರತ್ನರಾಯಮಲ್ಲ*



