ಕಾವ್ಯಸಂಗಾತಿ
ಜ್ಯೋತಿ ಮಾಳಿ ಬೆಳಗಾವಿ
ಗಜಲ್


ಕೆಲವು ಪ್ರಶ್ನೆಗಳು ಬರೀ ಕೆಲವು ಪ್ರಶ್ನೆಗಳು ಬರೀ *ಪ್ರಶ್ನೆಗಳಾಗಿಯೇ* ಉಳಿದವು
ಗಾಯದ ರುಜುಗಳು *ನೋವುಗಳಾಗಿಯೇ* ಉಳಿದವು
ಕೊನೆಯ ಪುಟಗಳಲಿ ಸೋಲಿನ ಸ್ವಾರಸ್ಯ ಅಡಗಿತ್ತು
ಓದುವ ಕೋಮಲ ಕಂಗಳು *ಹಸಿಯಾಗಿಯೇ* ಉಳಿದವು
ಅಲೆಗಳ ಶೋಕಕೆ ದಡ ಸಾಂತ್ವನ ಹೇಳುತಿದೆ ಕೇಳಬನ್ನಿ
ಮೀನಿನ ಹೆಜ್ಜೆಗಳು *ನಿಗೂಢವಾಗಿಯೇ* ಉಳಿದವು
ಹಣೆ ಬರಹ ನಾವೆ ತಿದ್ದುವಂತಿದ್ದರೆ ಚೆನ್ನಾಗಿತ್ತಲ್ಲವೇ
ಬರೆದ ಕೆಲವು ಸಾಲುಗಳು *ತಪ್ಪುತಪ್ಪಾಗಿಯೇ* ಉಳಿದವು
ಬಿರಿಯಬೇಕಿದ್ದ ಭಾವಗಳ ಕನಸ ಕತ್ತು ಕೋಯ್ಯಲಾಯಿತು
ಸುರಿದ ಕಣ್ಣೀರ ಹನಿಗಳು *ಮಡುಗಳಾಗಿಯೇ* ಉಳಿದವು
ಬೃಂದಾವನ ಮಧ್ಯ ಹೂಳಲಾಗಿದೆ ಆಚಾರದ ಅಸ್ಥಿಪಂಜರ
ಮೈ ಮನದ ಮೈಲಿಗೆಗಳು *ಮಲಿನವಾಗಿಯೇ* ಉಳಿದವು
ನಾಟಕ ಮುಗಿದರೂ ಪಾತ್ರದಿಂದ ಹೊರಬರಲಾಗಿಲ್ಲ ಎನಗೆ
ನಗುವ ಮುಖಗಳು *ಮುಖವಾಡಗಳಾಗಿಯೇ* ಉಳಿದವು
ನಡೆಗೂ- ನುಡಿಗೂ ಆಕಾಶ ಭೂಮಿಯ ಅಂತರವ ಕಂಡೆ
ಜಗದ ನಿಯಮಗಳು *ಸ್ವಾರ್ಥರಿಗಾಗಿಯೇ* ಉಳಿದವು
ಹೃದಯ ಧಮನಿಗಳ ಕಗ್ಗೊಲೆಯಾಗಿ ಉಸಿರು ಬಸಿದಿದೆ
ಪ್ರೇಮದೆದೆಯ ಬಡಿತಗಳು *ಕೃತಕವಾಗಿಯೇ* ಉಳಿದವು
ಸೃಷ್ಟಿಯನ್ನೇ ತಿರುಚುವ ಸಾಹಸ ನಡೆದಿದೆ ಜಗದಲಿ ಈಗ
ದೈವದ ನಂಬಿಕೆಗಳು *ಆಡಂಬರವಾಗಿಯೇ* ಉಳಿದವು
ಹೂತ ಹೆಣಕೆ ಗೋರಿಯಲೂ ನೆಮ್ಮದಿ ಇಲ್ಲ *ಜ್ಯೋತಿ*
ಸತ್ತ ಶವದ ಮೂಳೆಗಳು *ಸಾಕ್ಷಿಗಳಾಗಿಯೇ* ಉಳಿದವು*ಪ್ರಶ್ನೆಗಳಾಗಿಯೇ* ಉಳಿದವು
ಗಾಯದ ರುಜುಗಳು *ನೋವುಗಳಾಗಿಯೇ* ಉಳಿದವು
ಕೊನೆಯ ಪುಟಗಳಲಿ ಸೋಲಿನ ಸ್ವಾರಸ್ಯ ಅಡಗಿತ್ತು
ಓದುವ ಕೋಮಲ ಕಂಗಳು *ಹಸಿಯಾಗಿಯೇ* ಉಳಿದವು
ಅಲೆಗಳ ಶೋಕಕೆ ದಡ ಸಾಂತ್ವನ ಹೇಳುತಿದೆ ಕೇಳಬನ್ನಿ
ಮೀನಿನ ಹೆಜ್ಜೆಗಳು *ನಿಗೂಢವಾಗಿಯೇ* ಉಳಿದವು
ಹಣೆ ಬರಹ ನಾವೆ ತಿದ್ದುವಂತಿದ್ದರೆ ಚೆನ್ನಾಗಿತ್ತಲ್ಲವೇ
ಬರೆದ ಕೆಲವು ಸಾಲುಗಳು *ತಪ್ಪುತಪ್ಪಾಗಿಯೇ* ಉಳಿದವು
ಬಿರಿಯಬೇಕಿದ್ದ ಭಾವಗಳ ಕನಸ ಕತ್ತು ಕೋಯ್ಯಲಾಯಿತು
ಸುರಿದ ಕಣ್ಣೀರ ಹನಿಗಳು *ಮಡುಗಳಾಗಿಯೇ* ಉಳಿದವು
ಬೃಂದಾವನ ಮಧ್ಯ ಹೂಳಲಾಗಿದೆ ಆಚಾರದ ಅಸ್ಥಿಪಂಜರ
ಮೈ ಮನದ ಮೈಲಿಗೆಗಳು *ಮಲಿನವಾಗಿಯೇ* ಉಳಿದವು
ನಾಟಕ ಮುಗಿದರೂ ಪಾತ್ರದಿಂದ ಹೊರಬರಲಾಗಿಲ್ಲ ಎನಗೆ
ನಗುವ ಮುಖಗಳು *ಮುಖವಾಡಗಳಾಗಿಯೇ* ಉಳಿದವು
ನಡೆಗೂ- ನುಡಿಗೂ ಆಕಾಶ ಭೂಮಿಯ ಅಂತರವ ಕಂಡೆ
ಜಗದ ನಿಯಮಗಳು *ಸ್ವಾರ್ಥರಿಗಾಗಿಯೇ* ಉಳಿದವು
ಹೃದಯ ಧಮನಿಗಳ ಕಗ್ಗೊಲೆಯಾಗಿ ಉಸಿರು ಬಸಿದಿದೆ
ಪ್ರೇಮದೆದೆಯ ಬಡಿತಗಳು *ಕೃತಕವಾಗಿಯೇ* ಉಳಿದವು
ಸೃಷ್ಟಿಯನ್ನೇ ತಿರುಚುವ ಸಾಹಸ ನಡೆದಿದೆ ಜಗದಲಿ ಈಗ
ದೈವದ ನಂಬಿಕೆಗಳು *ಆಡಂಬರವಾಗಿಯೇ* ಉಳಿದವು
ಹೂತ ಹೆಣಕೆ ಗೋರಿಯಲೂ ನೆಮ್ಮದಿ ಇಲ್ಲ *ಜ್ಯೋತಿ*
ಸತ್ತ ಶವದ ಮೂಳೆಗಳು *ಸಾಕ್ಷಿಗಳಾಗಿಯೇ* ಉಳಿದವು
ಜ್ಯೋತಿ ಮಾಳಿ ಬೆಳಗಾವಿ



