ಗಝಲ್
ಗಝಲ್ ಗಝಲ್ ಕೆ.ಸುನಂದಾ. ಸುಂದರ ವದನಕೆ ಕುಂದಾಗುವ ಬಣ್ಣ ಬಳಿಯಬೇಡ ಗೆಳೆಯಅದೆಷ್ಟೋ ಅಂದದ ಕನಸುಗಳಿಗೆ ಕಲ್ಲು ಹೊಡೆಯಬೇಡ ಗೆಳೆಯ ಸಾಧಿಸಬೇಕೆಂಬ ಹಂಬಲದಿ ಆಸರೆಯ ಎಳೆ ಹಿಡಿದಿರುವೆನುಕಷ್ಟಗಳಮೆಟ್ಟಿ ಕಟ್ಟಿರುವ ಭಾವಗಳ ಭವನಕೆ ಕಿಚ್ಚಾಗಬೇಡ ಗೆಳೆಯ ಹೆಣ್ಮನ ಮೃದುವೆಂದು ಮಧುರವಾಗಿ ನುಡಿದುಮೋಸ ಮಾಡಿದಿರು ಹೃದಯ ಗೆದ್ದೆನೆಂಬ ಹಮ್ಮಿಂದ ಹದವಾದಮೇಲೆ ಒದೆಯಬೇಡ ಗೆಳೆಯ ಮುನಿಯುವ ಮೊದಲು ಒಲಿದು ಬರುವಳು ಹೆಣ್ಣು ಘಾಸಿಗೊಳಿಸದಿರುಕೂಸಿನಂತಾಕೆ ಪೊರೆದಿಹಳು ನಿನ್ನಾಸೆಗಳನು ಮನ ನೋಯಿಸಬೇಡ ಗೆಳೆಯ ತುಸು ಕಣ್ಣಲ್ಲಿ ಕಣ್ಣಾಗಿ ನೋಡು ಮಮತೆ ಹರಿದೀತು ನಿನ್ನೊಡಲೊಳುನಂದೆಯ ಆನಂದಕೆ ಮಂದಸ್ಮಿತ […]
ನೆನೆವುದೆನ್ನ ಮನಂ : ಕೆಲವು ಮಾತುಗಳು
ವಿಶೇಷ ಲೇಖನ ಪಂಪನ ಕುರಿತಾದ ವಿಶೇಷ ಲೇಖನ ಆರ್.ದಿಲೀಪ್ ಕುಮಾರ್ ನೆನೆವುದೆನ್ನ ಮನಂ : ಕೆಲವು ಮಾತುಗಳು ವಿಕ್ರಮಾರ್ಜುನ ವಿಜಯ (ಪಂಪಭಾರತ) ಕೃತಿಯ ನಾಲ್ಕನೇ ಆಶ್ವಾಸದ ಮೂವತ್ತನೇ ಪ್ರಖ್ಯಾತ ಪದ್ಯವು ಇದಾಗಿದೆ. ಈ ಪದ್ಯದ ಬಗೆಗೆ ಬೆಳ್ಳಾವೆ ವೆಂಕಟನಾರಾಯಣಪ್ಪನವರಿಂದ ಇತ್ತೀಚಿನವರವರೆಗೂ ಮಾಡಿರುವ ವಿಮರ್ಶೆ ಮತ್ತು ವ್ಯಾಖ್ಯಾನಗಳ ಅಧ್ಯಯನವೇ ಬಹಳ ವಿಸ್ತಾರವಾದದ್ದಾಗಿದೆ. ಕನ್ನಡನಾಡಿನ ಬನವಾಸಿಯ ನೆಲವು ಆಂಧ್ರನಾಡಿನಲ್ಲಿ ಕುಳಿತಿರುವ ಕವಿಯ ನೆನಪಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿರುವ ಕಾರಣದಿಂದ ಅವನ ಮೇಲೆ ಬೀರಿರುವ ಪರಿಣಾಮದ ಪ್ರತಿಫಲವೇ ಈ ಪದ್ಯದ ಆವಿರ್ಭಾವಕ್ಕೆ […]
ದಾರಾವಾಹಿ ಅದ್ಯಾಯ-10 ಸಂತಾನಪ್ಪನ ಶ್ರೀಮಂತಿಕೆಯನ್ನು ಕಂಡು ಶಂಕರ ಬೆಕ್ಕಸ ಬೆರಗಾಗಿದ್ದ! ಹಿಂದೊಮ್ಮೆ ತನ್ನೊಂದಿಗೆ ಮೂರುಕಾಸಿಗೆ ದುಡಿಯುತ್ತಿದ್ದಂಥ ಆ ಗಂಡ, ಹೆಂಡತಿ ಒಮ್ಮೆ ಹೇಳದೆ ಕೇಳದೆ ಓಡಿ ಹೋಗಿದ್ದು ಮಾತ್ರವಲ್ಲದೇ ತನ್ನ ಬದ್ಧ ವೈರಿ ರಘುಪತಿಯೊಂದಿಗೆ ಸೇರಿಕೊಂಡಿದ್ದನ್ನು ತಿಳಿದು ಅವರ ಮೇಲೆ ವಿಪರೀತ ಕುಪಿತನಾಗಿದ್ದ. ಆದರೆ ರಘುಪತಿಯೊಂದಿಗೆ ಮರಳಿ ಜಗಳವಾಡಲು ಅವನಿಗೆ ಧೈರ್ಯವಿರಲಿಲ್ಲ. ಆದ್ದರಿಂದ ತಾನು ಮನಸ್ಸು ಮಾಡಿದರೆ ಸಂತಾನಪ್ಪನಂಥ ಸಾವಿರ ಕೂಲಿಯಾಳುಗಳನ್ನು ಉತ್ತರ ಕರ್ನಾಟಕದಿಂದಲ್ಲದೇ ಉತ್ತರ ಭಾರತದಿಂದಲೂ ತರಿಸಿಕೊಳ್ಳಬಲ್ಲೆ! ಎಂದು ತನ್ನನ್ನು ತಾನೇ ಸಮಾಧಾನಿಸಿಕೊಂಡವನು ತನ್ನನ್ನು ತೊರೆದು […]
ಮಹಿಳೆ ಎಷ್ಟು ಸುರಕ್ಷಿತಳು?
ಹೆಣ್ಣು ಎಂಬ ಕಾರಣಕ್ಕೆ ಆಕೆ ಮನೆಯಿಂದ ಹೊರಗೆ ಹೋಗುವುದನ್ನು ಮತ್ತು ದೂರದ ಊರುಗಳಿಗೆ ಪಯಣಿಸುವುದನ್ನು ನಿರ್ಬಂಧಿಸಲಾಗುತ್ತದೆ. ಸಂಪ್ರದಾಯವಾದಿಗಳು ಶಾಲೆಗೆ ಹೋಗದಂತೆ ತಡೆಯುತ್ತಿದ್ದಾರೆ. ದಾಖಲಾದ ಹೆಣ್ಣು ಮಕ್ಕಳು ವಿವಿಧ ಕಾರಣಗಳಿಂದ ಶಾಲೆಯಿಂದ ಹೊರಗುಳಿಯುತ್ತಾರೆ.
ಮೊನ್ನೆ ಇಡ್ಲಿ ದಿನ ಅಂತೆ!
ಎಲ್ಲಾರಿಗೂ ಒಂದೊಂದು ದಿನ ಬರುತ್ತೆ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅಂದ ಹಾಗೆ ಮೊನ್ನೆ ಇಡ್ಲಿ ದಿನ ಇತ್ತಂತೆ.
ಗಜಲ್
ನಿನ್ನ ಕಿರಿಗೆಜ್ಜೆ ಪಾದಗಳ ಸಪ್ಪಳವನ್ನ ಕಿವಿಗಳಷ್ಟೇ ಕೇಳು ವಂತಿರು ಗೆಳತಿ
ಒಲವು ಪಲಕುಗಳ ಮಾತುಗಳ ಬೇರೆಯಾರ ಎದೆಗೂ ಕೇಳಿಸದಿರು ಗೆಳತಿ
ಕಾವ್ಯ ಕಾರುಣ್ಯ
ಒದ್ದೆ ನೆಲದ ಘಮಲಾಗುವ,
ನದಿಯಗಲದ ತಂಪಾಗುವ;
ಕಡಲೊಡಲ ಉಪ್ಪಾಗುವ ನೀರಂತೆ ..
ಸ್ವಾತಂತ್ರ್ಯದ ಪೂರ್ವಕಾಲದಲ್ಲಿಯೇ ಆರಂಭಗೊಂಡ ‘ಜೈಹಿಂದ್ ಎಜ್ಯುಕೇಶನ್ ಸೊಸೈಟಿ’ ಎಂಬ ಶಿಕ್ಷಣ ಸಂಸ್ಥೆಯು ೧೮೯೬ ರಲ್ಲಿ ಸ್ಥಾಪಿಸಿದ ‘ಎಡ್ವರ್ಡ್ ಹೈಸ್ಕೂಲು’ ಗುಣಮಟ್ಟದ ಶಿಕ್ಷಣಕ್ಕೆ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿತ್ತು
ರಂಗ ರಂಗೋಲಿ
ಹೊರಗಡೆ ಕಪ್ಪು ಇರುಳು. ತೆಂಗಿನಪಾತಿ ಕಪ್ಪಾಗಿ ಅದರ ಹಿಂಬದಿ ಚಿತ್ತಾರಗೊಂಡು ಅರಳಿದ ಚಂದಿರನನ್ನು ಆ ಮರದ ಕಿಟಕಿಯ ಸರಳುಗಳ ನಡುವಿನಿಂದ ನೋಡುತ್ತಲೇ ಇದ್ದೆ. ಮಲಗಿದ ಭಂಗಿ ಸಡಿಲಿಸಿ ಅದೇ ಹಳೆಯ ದೊಡ್ಡ ಮಂಚದ ಮೇಲೆ ಕೂತು ಕಣ್ಣಬೊಗಸೆಗೆ ದಕ್ಕುವಷ್ಟು ದೂರ ದೃಷ್ಟಿ ನೆಟ್ಟರೆ, ಎದೆಗಿಳಿಯುತ್ತಿದ್ದ ಚಂದ್ರಿಕೆಯ ಒಡಲ ರಾಗ ತುಂಡಾಗಿ ಬಿಡುವ ಅಂಜಿಕೆ
ಯಾರ ಜೀವನವೆಲ್ಲೋ…
ಕಥೆ ಯಾರ ಜೀವನವೆಲ್ಲೋ… ಟಿ.ಎಸ್.ಶ್ರವಣಕುಮಾರಿ ವನಜಾಕ್ಷಿ ಮತ್ತು ಕೃಷ್ಣಮೂರ್ತಿ ಮಗ ಪ್ರಸಾದಿಯೊಂದಿಗೆ ದೇವಪುರಿಗೆ ಹೋಗಲು ಬೆಳಗ್ಗೆ ಆರುಗಂಟೆಯ ಬಸ್ಸಿಗೆ ಬೆಂಗಳೂರಿಂದ ಹೊರಟಿದ್ದರು. ಶಿವಮೊಗ್ಗಕ್ಕೆ ಹೋಗಿ ಅಲ್ಲಿಂದ ಯಾವುದಾದರೂ ಬೇರೆ ಪ್ರೈವೇಟ್ ಬಸ್ಸಿನಲ್ಲೋ, ಇಲ್ಲವೇ ಮಿನಿಬಸ್ಸಿನಲ್ಲೋ ಅಲ್ಲಿಗೆ ತಲುಪಬೇಕಿತ್ತು. ಮಧ್ಯಾಹ್ನ ಹನ್ನೆರಡು ಗಂಟೆಗೆ ಶಿವಮೊಗ್ಗ ತಲುಪಿದರೆ, ತಕ್ಷಣವೇ ಅಲ್ಲಿಗೆ ಹೋಗಲು ವಾಹನ ಸಿಕ್ಕರೆ, ಒಂದರ್ಧ ಗಂಟೆಯ ಪಯಣವಷ್ಟೇ. ಈಗೊಂದು ವಾರದಿಂದ, ಈ ನಿರ್ಣಯ ತೆಗೆದುಕೊಂಡಾಗಿನಿಂದಲೂ ವನಜಾಕ್ಷಿಯ ಮನಸ್ಸಿಗೆ ನೆಮ್ಮದಿಯಿಲ್ಲ. ಕೃಷ್ಣಮೂರ್ತಿಗಳಿಗೆ ತಾನೇ ಏನು, ವಿಧಿಯಿಲ್ಲ, ಕಠಿಣವಾದರೂ ನಿರ್ಧಾರವನ್ನು ತೆಗೆದುಕೊಳ್ಳಲೇ […]