ಕವಿತೆ
ಕಾವ್ಯ ಕಾರುಣ್ಯ
ವಸುಂಧರಾ ಕದಲೂರು.
ಕುದಿ ನೀರೊಳಗೆ ಅರಳಿ
ಕೆಂಪಾಗುವ, ಹಬೆಯೊಳಡಗಿ
ಕಂಪಾಗುವ; ಚಹಾ ಹುಡಿಗಳಂತೆ…
ಒದ್ದೆ ನೆಲದ ಘಮಲಾಗುವ,
ನದಿಯಗಲದ ತಂಪಾಗುವ;
ಕಡಲೊಡಲ ಉಪ್ಪಾಗುವ ನೀರಂತೆ ..
ಕಾಣದ ಚೈತನ್ಯ ಬೇರಾಗಿ,
ಮರದ ಹಸಿರಾಗಿ; ಹೂ-ಕಾಯಿ-
ಮಾಗಿ ಹಣ್ಣಾಗಿ ಉಸಿರಾದಂತೆ..
ಕಾರುಣ್ಯದೊಲವು ದಣಿದ ಜೀವವ
ತಣಿಸಿ, ನವಚೈತನ್ಯವನು ಉಣಿಸಿ;
ಮಣಿಸಿ ಅಪ್ಪಿ ಸಂತೈಸಿದಂತೆ..
ಕಾವ್ಯವೂ
ಕೈ ಹಿಡಿದು ಮುನ್ನಡೆಸಲಿ…
**********************************
One thought on “ಕಾವ್ಯ ಕಾರುಣ್ಯ”