ಹೊಸ ಬಿಳಲು….!!
ಕಥೆ ಹೊಸ ಬಿಳಲು….!! ಯಮುನಾ.ಕಂಬಾರ ಚೆನ್ನವ್ವಳ ಕೈಗೆ ಹಚ್ಚಿದ BP ಮೀಟರ ತೆಗೆದು , ನರ್ಸಮ್ಮನಿಗೆ ಸುಗರ ಚೆಕ್ಕ ಮಾಡಲು ಡಾಕ್ಟರ ‘ಕಿರಣ ‘ ಹೇಳಿದ. ಚೆನ್ನವ್ವ ಬೆಡ್ಡ ಮೇ ಲಿಂದ ಗಡಬಡಿಸಿ ಎದ್ದು ನರ್ಸ್ಸಮ್ಮ ನನ್ನೇ ನೋಡತೊಡಗಿದಳು. ನರ್ಸ್ಸ ಕೈಯಲ್ಲಿ ಚಿಕ್ಕದೊಂದು ಸೂಜಿಯಿತ್ತು ಅದರ ಮೇಲೆ ಅಂಟಿಸಿದ ಹಾಳೆ ಮಾಸಿತ್ತು. ಅದರ ಮೇಲೆ ಅಲ್ಲಲ್ಲಿ ಕಂದು ಕಪ್ಪು ಕಲೆಗಳೂ ಇದ್ದವು . ಚೆನ್ನವ್ವ ತನ್ನ ಮೈಯ ಶಕ್ತಿಯನ್ನೆಲ್ಲಾ ಒಂದುಗೂಡಿಸಿಕೊಂಡು ” ಸೂಜಿ, ಹೊಸದಿದ್ದ್ರ ಚುಚ್ಚರಿ …..” […]
ಗಜಲ್
ಗಜಲ್ ಸಿದ್ಧರಾಮ ಹೊನ್ಕಲ್ ದಿನಾರಾತ್ರಿ ನೆನಪುಗಳ ಕಾಡಾಟ ಅತಿಯಾಗಿ ನಾಳೆಯಿಂದವಳ ಮರೆಯಬೇಕು ಅನ್ಕೋತೇನೆಇವಳಿಂದೆನಾಗಬೇಕಿದೆ ಈ ಮನಸಿಗರಾಯಳ ಸಹವಾಸವೇ ಬಿಟ್ಟು ಬಿಡಬೇಕು ಅನ್ಕೋತೇನೆ ಸಿಟ್ಟು ಸೆಡವು ದು:ಖ ಸೊಕ್ಕು ಸ್ವಾಭಿಮಾನ ನೆನಪಾಗಿ ಕ್ಷಣ ಹೀಗಂದುಕೊಂಡಿರುತ್ತೇನೆಅವಳು ಕೊಟ್ಟ ಕಂಫರ್ಟಲಿ ಶುಭರಾತ್ರಿ ಹೇಳಿ ಮನಸಾರೆ ಮರೆಯದಿರಬೇಕು ಅನ್ಕೋತೇನೆ ಬೆಳಿಗ್ಗೆ ಎದ್ದೊಡನೆ ಹಿಂದಿನದೇನು ನೆನಪಿಡದೆ ಹೃದಯದಿ ಶುಭೋದಯ ಹೇಳಿರುತ್ತೇನೆಮಾತು ಕಥೆ ಯಥಾ ರೀತಿ ಪ್ರೀತಿ ಮೂಗಿನ ತುದಿಯ ಕೋಪವಿರಬೇಕು ಅನ್ಕೋತೇನೆ ಅನುನಯದ ಮಾತಿಗಿಂತ ಕೋಪತಾಪದ ಮಾತು ತುಸು ಜಾಸ್ತಿ ಆಗಿದೆಯೇನೋಆದರೇಕೋ ಬಿಟ್ಟೆನೆಂದರೂ ಬಿಡದೀ […]
ಕಲ್ಪನೆಗೂ ಜೀವ ಬರುವಂತಿದ್ದರೆ
ಮುಗಿಯದ ಕನವರಿಕೆಗಳ ನಡುವೆ
ಜೀವ ಬಾರದ ಕಲ್ಪಿನೆಗಳಿಗೆ ಕಡಿವಾಣ ಹಾಕಲಾಗದೆ ಮುನಿಸಿಕೊಂಡ ರಾತ್ರಿಗಳು
ಆಗೆಲ್ಲಾ ಒದ್ದೆಯಾಗುತ್ತಿದ್ದದ್ದು ಅಮ್ಮನ ಮಡಿಲು.
ಕಡ್ಡಿ ಗೀರಿದಾಗ
ಹಸಿ ಕಟ್ಟಿಗೆಯ ರಾಶಿಯಲಿ
ನಾನೇ ಹೋಗಿ ಮಲಗಿದಂತೆ
ಪೊಟ್ಟಣದ ಕಡ್ಡಿ ಗಹಗಹಿಸಿ ಕುಣಿದಂತೆ
ನಾಡು ಮಾಸ್ಕೇರಿಯಿಂದ ನಾನು, ಹಾರು ಮಾಸ್ಕೇರಿಯ ಕುಪ್ಪಯ್ಯ ಗೌಡ, ಮುಕುಂದ ಪ್ರಭು, ಗಂಗಾವಳಿಯ ಯುಸೂಫ್, ಸದಾನಂದ ಕೂರ್ಲೆ, ಬಾವಿಕೊಡ್ಲಿನ ರಮೇಶ ಗೌಡ ಮೊದಲಾಗಿ ಆರೆಂಟು ಜನ ಸೇರಿ ದಿನವೂ ಕಾಲ್ನಡಿಗೆಯಲ್ಲೇ ಗೋಕರ್ಣಕ್ಕೆ ಹೋಗಿ ಬರುತ್ತಿದ್ದೆವು.