Day: April 15, 2021

ಗಜಲ್

ಗಜಲ್ ಸುಜಾತ ಲಕ್ಷ್ಮೀಪುರ. ಕಳಚಿಕೊಂಡು ಸೋಗು ಅಹಂಕಾರ ಮಗುವಾಗಿದ್ದರೂ ನನ್ನ ಬಳಿ ಬರಲಿಲ್ಲ ನನ್ನ ದೇವರುಮನದಲಿ ಭಯ ಆತಂಕ ನೋವು ಪರಿತಾಪವಿದ್ದರೂನನ್ನ ಬಳಿ ಬರಲಿಲ್ಲ ನನ್ನ ದೇವರು ಮಂಜಾನೆ ನೇಸರ ಇರುಳು ಚುಕ್ಕಿ ಚಂದ್ರಮ ನಡುವೆ ಬೀಸುವಗಾಳಿಯೂ ಅವನ ನೆನಪಿಸಿದೆಹಸಿವು ನಿದಿರೆ ಸನಿಹ ಸುಳಿಯದೆ ಧ್ಯಾನದಲ್ಲಿದ್ದರೂ ನನ್ನ ಬಳಿ ಬರಲಿಲ್ಲ‌ ನನ್ನ ದೇವರು ಋತುಮಾನಗಳು ಉರುಳುತ್ತಿವೆ ಚಳಿಗೆ ಚಳಿ ಕಾಣದೆ ಬೇಸಿಗೆ ಸುಡುದೆ ಕೊರಡಾಗಿದೆ ಬದುಕುಕಾಯ ಕರಗಿ ಚಿತ್ತ ಮಾಗಿ ತಾನಳಿದು ಶೂನ್ಯವಾದರೂನನ್ನ ಬಳಿ ಬರಲಿಲ್ಲ ನನ್ನ […]

ಕನಸುಗಳ ಕಮರಿಸುವವರಿಗೆ

ಕವಿತೆ ಕನಸುಗಳ ಕಮರಿಸುವವರಿಗೆ ಡಾ.ಸುರೇಖಾ ರಾಠೋಡ ಕೊಡಬೇಡಿ ಮಗಳಹಣವ ಕೇಳುವಹಣವಂತರಿಗೆ… ಕೊಡಬೇಡಿಬಂಗಾರದಂತಹ ಮಗಳಬಂಗಾರವ ಕೇಳುವವರಿಗೆ… ಕೊಡಬೇಡಿಅಧಿಕಾರಿಯಾಗುವ ಮಗಳ ;ಅಧಿಕಾರಿಗಳಾದವರಿಗೆ ಕೊಟ್ಟು ,ಅವಳು ಅಧಿಕಾರಿಯಾಗುವಅವಕಾಶವನ್ನೆಕಿತ್ತುಕೊಳ್ಳುವವರಿಗೆ…. ಕೊಡಬೇಡಿಶಿಕ್ಷಣ ಪಡೆಯುವ ಮಗಳನ್ನು ;ಅವಳಿಗೆ ಶಿಕ್ಷಣವನ್ನು ನೀಡಲುನಿರಾಕರಿಸುವವರಿಗೆ…. ಕೊಡಬೇಡಿಕನಸು ಕಾಣುವ ನಿಮ್ಮ ಮಗಳನ್ನು ;ಅವಳ ಕನಸುಗಳನ್ನೆಕಮರಿಸುವವರಿಗೆ …. ಕೊಡಬೇಡಿಹಕ್ಕಿಯಂತೆ ಹಾರ ಬಯಸುವ ಮಗಳನ್ನು ;ಅವಳ ರಕ್ಕೆಯನ್ನೆಕತ್ತರಿಸುವವರಿಗೆ… ಕೊಡಬೇಡಿಜನ್ಮ ನೀಡುವ ಮಗಳನ್ನು ;ಅವಳ ಜೀವವನ್ನೇತಗೆಯುವವರಿಗೆ…. ಕೊಡಬೇಡಿಜಗವ ರಕ್ಷಿಸುವ ಮಗಳಿಗೆಅವಳ ಜಗತ್ತನ್ನೇಕಸಿದುಕೊಳ್ಳುವವರಿಗೆ… ಕೊಡಬೇಡಿನಿಮ್ಮ ಗೌರವ,ಅಂತಸ್ತಿಗೆದಕ್ಕೆ ತರುವವರಿಗೆಹಾಗೂಅವಳ ಗೌರವವನ್ನೇನಾಶಪಡಿಸುವವರಿಗೆ… ಕೊಡಬೇಡಿ ಮಗಳಿಗೆವಿವಾಹದ ಹೆಸರಿನಲ್ಲಿಬೇರೆಯವರಿಗೆಮಾರುವವರಿಗೆ….*************************************

ಗಝಲ್

ಗಝಲ್ ಆಸೀಫಾ ಬೇವು ಬೆಲ್ಲದೊಳಿಟ್ಟು ಕಷ್ಟ ಸುಖದ ಸಾಂಗತ್ಯ ಸಾರುತಿದೆ ಯುಗಾದಿಅಭ್ಯಂಜನವ ಮಾಡಿಸಿ ನವಚೈತನ್ಯ ಚೆಲ್ಲುತಿದೆ ಯುಗಾದಿ. ಹೊಸ ಚಿಗುರಿನ ಹೊದಿಕೆಯಲಿ ಕಂಗೊಳಿಸುತಿವೆ ಗಿಡಮರಗಳುಯುಗದ ಆದಿಯ ನೆನಪಿಸಿ ಹರ್ಷ ಹಂಚುತಿದೆ ಯುಗಾದಿ ಮೈಮರೆತ ದುಂಬಿಗಳ ಝೇಂಕಾರ ಹೊಂಗೆ ಬೇವು ಮಾಮರದ ತುಂಬಾಸವಿಜೇನಿನೊಲವು ಮನದ ಗೂಡುಗಳಲಿ ತುಂಬುತಿದೆ ಯುಗಾದಿ ತಳಿರು ತೋರಣ ಚೈತ್ರದಾಗಮನಕೆ ಸೂಚನೆಯನಿತ್ತು ನಗುತಿದೆಬ್ರಹ್ಮ ಸೃಷ್ಟಿಗೆ ಶಿರಬಾಗಿ ಶತಕೋಟಿ ನಮನ ಹೇಳುತಿದೆ ಯುಗಾದಿ ಹಳೆಯ ಹಗೆಯ ಕಳಚಿ ನಿಲ್ಲೋಣ ವಸಂತನಾಗಮನಕೆ ಎಲ್ಲಾಹೊಸ ವರುಷಕೆ ಕೈಬೀಸಿ ಆಸೀಯ ಕರೆಯುತಿದೆ […]

Back To Top