Day: April 21, 2021

ಅಂಕಣ ಬರಹ “ಆಕಾಶವಾಣಿಯ ಅವಕಾಶದಾಕಾಶ” “ಬರೆದ ಕಥೆ ಹಾಗೇ ಬಿಡುವಂತಿಲ್ಲ. ವಿಳಾಸ ಕೊಡುತ್ತೇನೆ. ಆಕಾಶವಾಣಿಗೆ ಕಳುಹಿಸು. ನೋಡೋಣ! ನೀನು ಎಂತಹ  ಕಥೆಗಾರ್ತಿ”.ನಾನು ಬರೆದ ಕಥೆಯೊಂದು ಸರ್ ಗೆ ಸಿಕ್ಕಿ ಗಂಡ- ಹೆಂಡತಿ ಅದನ್ನು ಓದಿ ಮುಂದಿನ ಬಾರಿ ಅವರ ಮನೆಗೆ ಹೋದಾಗ ಇಬ್ಬರೂ ಸೇರಿ ವಿಚಾರಣೆಗೆ ಕಟಕಟೆಯಲ್ಲಿ ನಿಲ್ಲಿಸಿದ್ದರು. ತಲೆತಗ್ಗಿಸಿದವಳ ಪರ ಲಾಯರ್ ಆಗಿ ಅವರ ಶ್ರೀಮತಿ ನಿಂತಿದ್ದರು. ಕೊನೆಗೂ ತೀರ್ಪು ಹೊರಬಿದ್ದಿತ್ತು.  ಚಿಕ್ಕನಡುಕ,ಸಂಭ್ರಮ ಜೊತೆಯಾಗಿತ್ತು. ಆದರೆ ಸರ್ ಗೆ ಆಕಾಶವಾಣಿಯಲ್ಲಿ ಪರಿಚಯವಿದೆ. ಅವರು ಒಂದು ಮಾತು […]

ದಾಖಲೆಗಳಿವೆ

ಕವಿತೆ ದಾಖಲೆಗಳಿವೆ ವಸುಂಧರಾ ಕದಲೂರು ಸುಧಾರಕರನು ಹುಚ್ಚರೆಂದುಕರೆದು ಥಳಿಸಿದುದಕೆ, ಕೂಡುರಸ್ತೆಗಳ ನಡುವಲ್ಲಿ ಹೀಗಳೆದುಕಲ್ಲುತೂರಿ ಕಟುನುಡಿ ಮಳೆಗರೆದು,ತೋಯಿಸಿ ನೋಯಿಸಿದುದಕೆ. ಗಾಸೀಪು ತೂಪಾಕಿಗಳ ತೂಫಾನುಸಿಡಿಸಿ ಗಡೀಪಾರು ಮಾಡಿಸಿ; ಗುಲ್ಲೆಬ್ಬಿಸಿ ಗಲ್ಲಿಗೇರಿಸಿ, ಗುಂಪುಗುಂಪಾಗಿ ಗುಟ್ಟು ಮಾಡಿ; ಒಳಸಂಚು ಮಾಡಿ ಮೂಲೆ ಗುಂಪಾಗಿಸಲು ಕಾರ್ಯ ಗೇಯ್ದದದಕೆ. ಇದರ ನಡುವೆಯೂ ಅವರು, ಅವರ ವರ್ತಮಾನಗಳಲಿ ದಂತಕತೆಗಳಾಗಿ, ಭವಿಷ್ಯತ್ತಿನಲಿ ಹುತಾತ್ಮರಾಗಿ ಇತಿಹಾಸದ ಪುಟಗಳಲಿ ಮಹಾತ್ಮರಾಗಿ ಸೇರಿಹೋದುದಕೆ ಸಾಕ್ಷ್ಯಗಳಿವೆ.. ********************************************

ಅಂಜಿಕೆ

ನದಿ ತಾ ಪಯಣಿಸಿದ ಹಾದಿಯತ್ತ ಹಿಂತಿರುಗಿ ನೋಡುತ್ತದೆ
ಪರ್ವತದ ಶಿಖರಗಳಿಂದ
ಉದ್ದನೆಯ ಅಂಕುಡೊಂಕಾದ ರಸ್ತೆ ದಾಟಿದೆ ಕಾಡು ಮತ್ತು ಹಳ್ಳಿಗಳನು

ಅಂಕಣ ಬರಹ ಸವಡಿಯಾಗುವ ಸವತಿಯರು ಭಾರತ ಬಹುಸಂಸ್ಕೃತಿ ನಾಡು. ಅಂತೆಯೆ ಬಹು ಪತ್ನಿತ್ವ ಸಮಾಜವುಳ್ಳ ಕೇಂದ್ರಸ್ಥಾನವೂ ಹೌದು.ಒಬ್ಬ ಪುರುಷನನ್ನು ಇಬ್ಬರು ಮಹಿಳೆಯರು ಮದುವೆಯಾದರೆ ಅವರು ಒಬ್ಬರಿಗೊಬ್ಬರು ಸವತಿಯಾಗುವರು. ‘ಸವತಿ’ ಎನ್ನುವ ಈ ಶಬ್ದ ಮೂಲತಃ ಸಹವರ್ತಿ ಎನ್ನುವ ಪದದಿಂದ ಬಂದಿದ್ದು. ಇದರ ಅರ್ಥ ಇಬ್ಬರೂ ಸಮಾನ ಹಕ್ಕು ಹೊಂದಿರುವುದು ಎಂದಾಗುತ್ತದೆ. ಸಮಾನ ಹಕ್ಕುಗಳು, ಸಮಾನ ಸಕಲ ಸವಲತ್ತುಗಳನ್ನು ಸಮಾನವಾಗಿ ಪಡೆಯುವರನ್ನು ಸವತಿ ಎಂದು ಕರೆಯುವರು‌. ಈ ಸವತಿ ಎನ್ನುವ ಪದ ಹೊಟ್ಟೆಕಿಚ್ಚು, ಮತ್ಸರ, ವೈರಿ, ಅಸಹನೆ ಎಂಬ […]

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-6 ಹೌರಾ ಬ್ರಿಜ್ ಹತ್ರ ಬಂದು ನಿಂತು ಸ್ವಲ್ಪ ಹೊತ್ತು ಫೋಟೊ ಶೂಟ್ ಎಲ್ಲಾ ಆಗುವಾಗ, ಅಲ್ಲಿವರೆಗೆ ಸರ್ಕಸ್ ಮಾಡಿ ಬಂದಿದ್ದು ಸಾಕಾಗಿ ಹೋಯ್ತೇನೊ. ಇನ್ನು ಸಾಕು‌. ವಾಪಸ್ ಹೋಗೋಣ ಅಂದರು ಸತೀಶ್. ನೀರಿನಲ್ಲಿ ನಕ್ಷತ್ರ ಮೀನು, ಜೆಲ್ಲಿ ಮೀನು ಇನ್ನೇನೇನೊ ನೋಡುತ್ತಾ ಮಕ್ಕಳು ಮುಂದೆ ಹೋಗಿದ್ದರು.ನೀವು ಮುಂದೆ ಹೋಗಿ ನೋಡಿ ಬನ್ನಿ. ನಾವಿಲ್ಲೇ ಕೂತಿರ್ತೇವೆ ಎಂದು ಸರಸ್ವತಿಗೆ ಹೇಳಿದೆ. […]

Back To Top