Day: April 19, 2021

ಒಲವಿನ ಭೇಟಿ

ಕವಿತೆ ಒಲವಿನ ಭೇಟಿ ಆಸೀಫಾ ಮಂದಹಾಸದ ಮುಖವೇನೋ ಶಾಂತವಿತ್ತುಕಂಗಳು ಸಾವಿರಸಾವಿರ ಮಾತು ಹೇಳುತ್ತಿತ್ತುಮನದ ತಲ್ಲಣಗಳು ಮುಖವಾಡ ಧರಿಸಿತ್ತುಅಸಹಾಯಕತೆ ನನ್ನಲಿ ತಾಂಡವಾಡುತಿತ್ತು ಪರಿಚಿತ ಸ್ಪರ್ಷವೊಂದು ನನ್ನ ಕರೆದಂತಿತ್ತುಅಧರದ ಸಕ್ಕರೆ ಸವಿವ ಬಯಕೆಯುಇರಿದಿರಿದು ತಿವಿದು ಕೊಲ್ಲುವಂತಿತ್ತುಮತ್ತದೇ ಅಸಹಾಯಕತೆ ಕಾಡುತಿತ್ತು ನೋಡಿದಷ್ಟೂ ನೋಡಬೇಕೆನಿಸುವ ನೋಟಕಣ್ಣುಕಣ್ಣಲ್ಲೇ ಸಂಭಾಷಣೆಯ ಸವಿಯೂಟಸನಿಹ ಸರಿದುಹೋದಾಗ ಹೆಚ್ಚಿದ ಪುಳಕಜಗಕೆ ಕಾಣದು ಪ್ರೇಮದ ವಿಚಿತ್ರ ಹೋರಾಟ ಬಹುದಿನಗಳ ನಂತರದ ಮುಖಾಮುಖಿ ಭೇಟಿಹಸಿರಾಗಿಸಿತು ಕಳೆದ ಕ್ಷಣಗಳ ಅಮೃತ ಸ್ಮೃತಿತಣಿಯಿತು ಅವನ ಕೊರಗಿನ ಹಂಬಲದ ಸ್ಥಿತಿಅಂತೂ ಒಲವಿಗೆ ಆಯಿತು ಒಲವಿನ ಭೇಟಿ **********

ಗಜಲ್

ಗಜಲ್ ರೇಮಾಸಂ ಹಳೆಯ ಹೊಸತುಗಳ ಜಗಳದಲಿ ಬೆಸೆದಿರಲಿ ಸಮರಸ/ಬೆರೆತು ಅರಿತ ಬಾಳುವೆಯಲಿ ಜಿನುಗುತಿರಲಿ ಮಧುರಸ// ಹಮ್ಮು ಬಿಮ್ಮಿನ ಜಗ್ಗಾಟದಲಿ ನುಗ್ಗಾಗದಿರಲಿ ಜೀವನ/ಪ್ರೀತಿಯು ಸವೆಯಲು ಬಿಡದೆ ಚಿಮ್ಮುತಿರಲಿ ಪ್ರೇಮರಸ// ಹೂಡಿಕೆಯಾಗಲಿ ಅನುರಾಗದ ರಿಂಗಣವು ಅನುದಿನವು/ನೋವುಗಳು ಬೇವು ಬೆಲ್ಲದಂತೆ ಸುರಿಯುತಿರಲಿ ನವರಸ// ವಿರಸವು ತರುವ ಮಾತಿಗೆಲ್ಲ ವಿರಾಮದ ಚಿಹ್ನೆ ಇಡುತಿರಲಿ/ಸರಸ-ಸಲ್ಲಾಪದ ಪದಗಳು ಪುಟಿದು ಚೆಲ್ಲುತಿರಲಿ ಗಾನರಸ// ತಾಯಿಯ ಸೆರಗು ಹೊದಿಕೆಯಂತಿರಲಿ ಪ್ರೇಮದ ಚಪ್ಪರವು/ಗಂಧದಂತೆ ಜೀವಗಳು ಪಸರಿಸುತ ತೇಯುತಿರಲಿ ದ್ರವ್ಯರಸ/ ***************************

ಅಂಕಣ ಬರಹ ಕಾಲೆಳೆವ ಕೈಗಳೇ ಮೆಟ್ಟಿಲಾಗಲಿ     ಸಾಮಾನ್ಯವಾಗಿ ಕಾಲೆಳುವುದು ಅಥಬಾ ಲೆಗ್ ಪುಲ್ಲಿಂಗ್ ಎಂದರೆ ಕೀಟಲೆ ಮಾಡುವುದು ಅಥವಾ ಇಲ್ಲದ್ದನ್ನು ಇದೆ ಎಂದು ತಮಾಷೆಗಾಗಿ ನಂಬಿಸುವುದು ಎಂದರ್ಥವಿದೆ. ಆದರೆ ಇಲ್ಲಿ ಕಾಲೆಳುವುದೆಂದರೆ ಹಗುರ ಅರ್ಥದಲ್ಲಿ ಇಲ್ಲ. ಮುನ್ನಡೆವವನ ದಾರಿಗೆ ಅಡ್ಡ ಹಾಕುವುದಿ ಎಂಬರ್ಥದಲ್ಲಿ ಬಳಸಲಾಗಿದೆ. ಬಹಳ ಹಿಂದೆ ಕೇಳಿದ್ದ ಕಥೆಯೊಂದು ನೆನಪಾಗುತ್ತಿದೆ. ಒಂದು ಕಾಡಿನಲ್ಲಿ ಒಂದು ಬಾವಿ. ಆ ಬಾವಿಯಲ್ಲಿ ನೂರಾರು ಕಪ್ಪೆಗಳು. ಬಾವಿಯನ್ನೇ ಪ್ರಪಂಚವೆಂದುಕೊಂಡು ನೆಮ್ಮದಿಯಿಂದಿದ್ದವು. ಒಮ್ಮೆ ಅಲ್ಲಿದ್ದ ಒಂದು  ಕಪ್ಪೆಗೆ ಯಾಕೋ ಆ […]

Back To Top