Day: April 4, 2021

ಬಿಸಿಲ ನೆಲ ಕಂಡ ಬೆಳದಿಂಗಳ ಚೇತನ

ನೀ ಹೋದ ಮರುದಿನ ಮತ್ತ ನಂ ಬದುಕು ಮದಲಿನಂಗ ಆಗ್ಯಾದೋ ಬಾಬಾಸಾಹೇಬ!
ನಿನ್ನಂಗ ನುಡಿವಾಂವಾ,ಕಳ ಕಳಿಯ
ಪಡುವಂವ ಬರಲಿಲ್ಲೋ ಒಬ್ಬ!!
ಚನ್ನಣ್ಣ ವಾಲೀಕಾರ

ಈಗ

ಕವಿತೆ ಈಗ  ಆನಂದ ಆರ್.ಗೌಡ ತಾಳೇಬೈಲ್ ರವಿವಾರದ ಸಂಜೆಅಮಲು ಚೆಲ್ಲಿದ ಎಂಥೆಂಥಾದೋಕಸ ಪೌರ ಸೇವಕರ ಪೊರಕೆಶುಚಿಗೊಳಿಸುತ್ತಿತ್ತು ರಸ್ತೆಯ ಇಕ್ಕೆಲಗಳಲ್ಲಿಆಗ ತಾನೇ ಪ್ರಸವವಾದಹೊಂಗಿರಣ ಅವರ ವದನಕ್ಕೆಮುತ್ತನೀಯುತ್ತಿತ್ತು ಅಲ್ಲಿಯೇ ಸೃಷ್ಟಿಸಿದ ನೇರಳೆಲೆಗಳನೆರಳು ಬೆಳಕಿನಾಟ ಕಲೆಗಾರನಕುಂಚದ ಕಲೆಯ ನಾಚಿಸಿದೆ ಕಾರ್ಪೋರೇಟ್ ರಸ್ತೆ ನಡುವೆನೆಟ್ಟ ಪುಟ್ಟ ಗಿಡಗಳುಆರೈಕೆ ಮಾಡಲು ತೂಗು ಹಾಕಿದದೊಡ್ಡ ದೊಡ್ಡ ವ್ಯಕ್ತಿಗಳ ನಾಮಫಲಕರಾರಾಜಿಸುತ್ತಿದೆಚುನಾವಣೆ ಮುಗಿದರೂ ಅದರಂಚಿನಲಿ ಹಾಯ್ದುಹೋಗುವ ಚಿರಯೌವನೆಅಂಗೈ ಸೋಕಿದರೆ ಹಾಲುತೊಟ್ಟಿಕ್ಕುವ ಸೊಬಗುಇನ್ನೂ ಹೊಟ್ಟೆಕಿಚ್ಚು ತರಿಸುವತೊಟ್ಟುಡುಗೆಯ ಸಿರಿವಂತಿಕೆಮುಚ್ಚಿದೆದೆಯೊಡ್ನಿಅರಿವಿಲ್ಲದೇ ಇಳಿದುಚಿಗುರಿದೆಲೆಗಳ ಸವರಿಅಮಲೇರಿಸುವ ಆ ನೋಟಮನಸ ಕೊಲ್ಲುವ ಸಂಚಲತೆಪಡ್ಡೆ ಹೈಕಳ ಹೃದಯ ಬಡಿತಇಮ್ಮಡಿಸಿದೆ […]

ಇನ್ನೂ ಎಷ್ಟು ದೂರ?

ಕವಿತೆ ಇನ್ನೂ ಎಷ್ಟು ದೂರ? ಡಾ.ಕಾತ್ಯಾಯಿನಿ ಕುಂಜಿಬೆಟ್ಟು ನಕ್ಷತ್ರ ಕದಿಯಲುಹೊರಟಿರುವೆಮೈ ತುಂಬ ನಕ್ಷತ್ರ ಹೊಂದಿರುವಆಕಾಶದಿಂದಎರಡೇ ಎರಡು ನಾನು ಕದ್ದರೆಯಾರ ಅಪ್ಪನ ಮನೆ ಗಂಟುಹೋದೀತು ಹೇಳು?ಹೊರಟಿದ್ದೇನೆಕನ್ನ ಕೊರೆಯಲುಯಾರಿಗೆ ಗೊತ್ತು?ನಕ್ಷತ್ರಗಳು ಎನ್ನುವುದುನೀಲಿ ಗೋಡೆಯ ಅಚಿನಿಂದಇನ್ನಾರೋ ಕನ್ನ ಕೊರೆದುಇಣುಕಿದ ತೂತಿರಬಹುದುಆಚೆ ಮೂಡಿರಬಹುದುಈಚೆ ಮುಳುಗಿದ ಸೂಯ೯ತನ್ನ ಕಿರಣಗಳ ಕನ್ನದ ತೂತುಗಳಿಂದಈಚಿನ ಕತ್ತಲಿಗೆ ತೂರಿರಬಹುದುಅಬ್ಬಾ! ಅಗಣಿತ ನಕ್ಷತ್ರಗಳು!ಬಹುಶಃ ಅದು ಕಳ್ಳರದ್ದೇ ಲೋಕವಿರಬಹುದುನನ್ನಂತೆ ಎರಡೇ ಎರಡುನಕ್ಷತ್ರ ಕದಿಯಲು ಹೊರಟವರು ನಡೆಯುತ್ತಲೇ ಇದ್ದೇನೆಇನ್ನೂ ಎಷ್ಟು ದೂರ? *************************

ಗಝಲ್

ಗಝಲ್ ಗಝಲ್ ಕೆ.ಸುನಂದಾ. ಸುಂದರ ವದನಕೆ ಕುಂದಾಗುವ ಬಣ್ಣ ಬಳಿಯಬೇಡ ಗೆಳೆಯಅದೆಷ್ಟೋ ಅಂದದ ಕನಸುಗಳಿಗೆ ಕಲ್ಲು ಹೊಡೆಯಬೇಡ ಗೆಳೆಯ ಸಾಧಿಸಬೇಕೆಂಬ ಹಂಬಲದಿ ಆಸರೆಯ ಎಳೆ ಹಿಡಿದಿರುವೆನುಕಷ್ಟಗಳಮೆಟ್ಟಿ ಕಟ್ಟಿರುವ ಭಾವಗಳ ಭವನಕೆ ಕಿಚ್ಚಾಗಬೇಡ ಗೆಳೆಯ ಹೆಣ್ಮನ ಮೃದುವೆಂದು ಮಧುರವಾಗಿ ನುಡಿದುಮೋಸ ಮಾಡಿದಿರು ಹೃದಯ ಗೆದ್ದೆನೆಂಬ ಹಮ್ಮಿಂದ ಹದವಾದಮೇಲೆ ಒದೆಯಬೇಡ ಗೆಳೆಯ ಮುನಿಯುವ ಮೊದಲು ಒಲಿದು ಬರುವಳು ಹೆಣ್ಣು ಘಾಸಿಗೊಳಿಸದಿರುಕೂಸಿನಂತಾಕೆ ಪೊರೆದಿಹಳು ನಿನ್ನಾಸೆಗಳನು ಮನ ನೋಯಿಸಬೇಡ ಗೆಳೆಯ ತುಸು ಕಣ್ಣಲ್ಲಿ ಕಣ್ಣಾಗಿ ನೋಡು ಮಮತೆ ಹರಿದೀತು ನಿನ್ನೊಡಲೊಳುನಂದೆಯ ಆನಂದಕೆ ಮಂದಸ್ಮಿತ […]

ನೆನೆವುದೆನ್ನ ಮನಂ : ಕೆಲವು ಮಾತುಗಳು

ವಿಶೇಷ ಲೇಖನ ಪಂಪನ ಕುರಿತಾದ ವಿಶೇಷ ಲೇಖನ ಆರ್.ದಿಲೀಪ್ ಕುಮಾರ್ ನೆನೆವುದೆನ್ನ ಮನಂ : ಕೆಲವು ಮಾತುಗಳು ವಿಕ್ರಮಾರ್ಜುನ ವಿಜಯ (ಪಂಪಭಾರತ) ಕೃತಿಯ ನಾಲ್ಕನೇ ಆಶ್ವಾಸದ ಮೂವತ್ತನೇ ಪ್ರಖ್ಯಾತ ಪದ್ಯವು ಇದಾಗಿದೆ. ಈ ಪದ್ಯದ ಬಗೆಗೆ ಬೆಳ್ಳಾವೆ ವೆಂಕಟನಾರಾಯಣಪ್ಪನವರಿಂದ ಇತ್ತೀಚಿನವರವರೆಗೂ ಮಾಡಿರುವ ವಿಮರ್ಶೆ ಮತ್ತು ವ್ಯಾಖ್ಯಾನಗಳ ಅಧ್ಯಯನವೇ ಬಹಳ ವಿಸ್ತಾರವಾದದ್ದಾಗಿದೆ. ಕನ್ನಡನಾಡಿನ ಬನವಾಸಿಯ ನೆಲವು ಆಂಧ್ರನಾಡಿನಲ್ಲಿ ಕುಳಿತಿರುವ ಕವಿಯ ನೆನಪಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿರುವ ಕಾರಣದಿಂದ ಅವನ ಮೇಲೆ ಬೀರಿರುವ ಪರಿಣಾಮದ ಪ್ರತಿಫಲವೇ ಈ ಪದ್ಯದ ಆವಿರ್ಭಾವಕ್ಕೆ […]

ದಾರಾವಾಹಿ ಅದ್ಯಾಯ-10 ಸಂತಾನಪ್ಪನ ಶ್ರೀಮಂತಿಕೆಯನ್ನು ಕಂಡು ಶಂಕರ ಬೆಕ್ಕಸ ಬೆರಗಾಗಿದ್ದ! ಹಿಂದೊಮ್ಮೆ ತನ್ನೊಂದಿಗೆ ಮೂರುಕಾಸಿಗೆ ದುಡಿಯುತ್ತಿದ್ದಂಥ ಆ ಗಂಡ, ಹೆಂಡತಿ ಒಮ್ಮೆ ಹೇಳದೆ ಕೇಳದೆ ಓಡಿ ಹೋಗಿದ್ದು ಮಾತ್ರವಲ್ಲದೇ ತನ್ನ ಬದ್ಧ ವೈರಿ ರಘುಪತಿಯೊಂದಿಗೆ ಸೇರಿಕೊಂಡಿದ್ದನ್ನು ತಿಳಿದು ಅವರ ಮೇಲೆ ವಿಪರೀತ ಕುಪಿತನಾಗಿದ್ದ. ಆದರೆ ರಘುಪತಿಯೊಂದಿಗೆ ಮರಳಿ ಜಗಳವಾಡಲು ಅವನಿಗೆ ಧೈರ್ಯವಿರಲಿಲ್ಲ. ಆದ್ದರಿಂದ ತಾನು ಮನಸ್ಸು ಮಾಡಿದರೆ ಸಂತಾನಪ್ಪನಂಥ ಸಾವಿರ ಕೂಲಿಯಾಳುಗಳನ್ನು ಉತ್ತರ ಕರ್ನಾಟಕದಿಂದಲ್ಲದೇ ಉತ್ತರ ಭಾರತದಿಂದಲೂ ತರಿಸಿಕೊಳ್ಳಬಲ್ಲೆ! ಎಂದು ತನ್ನನ್ನು ತಾನೇ ಸಮಾಧಾನಿಸಿಕೊಂಡವನು ತನ್ನನ್ನು ತೊರೆದು […]

Back To Top