ಕೊಡಲಾಗದ್ದು – ಪಡೆಯಲಾಗದ್ದು
ಮರೀಚಿಕೆಯಾದ ಪ್ರೀತಿಗಾಗಿ ಹಂಬಲವೋ
ದೂರ ಸರಿದವರಿಗಾಗಿ ಬೇಡುವಿಕೆಯೋ
ಪ್ರಶ್ನಿಸಿದ ಮನಕೆ
ಅವಳದು ನಿರುತ್ತರ
ಸಿಲುಕಬಾರದು
ದುಡಿದು ಕಾಯಸವೆಸಿ ಕಾಲವನೂ ದೂಡಿಬಿಡಬಹುದೇನೋ
ನೆನಪುಗಳ ಅಬ್ಬರದ ಅಲೆಗಳ
ಒಳಗೆ ನುಸುಳಿಕೊಳ್ಳಬಾರದು
ಅರಣ್ಯ ರೋಧನ
ಕರೆದು ಮಣೆ ಹಾಕಿ
ಭೂರೀ ಭೋಜನ ಬಡಿಸಿ
ಕಿರೀಟವಿಟ್ಟು ಮೆರೆಸುವರೆ ಮಂದಿ
ಮುಂದಿನ ಪೀಳಿಗೆಗೂ
ಒಳಗೊಳಗೇ ದ್ವೇಷಕಾರುವವರು
ಜೊತೆಜೊತೆಯಲಿದ್ದು ವೈಷಮ್ಯ ತೋರುವರು ! //