ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ವೈ.ಎಂ.ಯಾಕೊಳ್ಳಿ

Black Metal Framed Glass Window

ಆಡಬೇಕೆಂದಿರುವ‌ ಮಾತುಗಳ ತುಟಿಯ ಅಂಚಿನಲಿ‌ ಮುಚ್ಚಿ ಹಿಡಿಯದಿರು ಗೆಳತಿ
ಚಲನ ಸ್ಥಿತಿಯೊಳಗಿರುವ ಎದೆಯ ಸ್ತಬ್ಧಗೊಳ್ಳುವಂತೆ ಮಾಡದಿರು ಗೆಳತಿ

ನಿನ್ನ ಉಸಿರ ಪಲಕುಗಳನುಸಿರಾಡಿ ಜೀವಹಿಡಿದಿರುವ ಹೃದಯ ಮರೆಯದಿರು ಗೆಳತಿ
ಕಿವಿಯ ಜುಲುಪಿಗಳ ನಾದವ ಎದೆಗಷ್ಟೆ ಕೇಳಿಸುವಂತೆ ನುಡಿಸಿ ಜಾರದಿರು ಗೆಳತಿ

ನಿನ್ನ ಕಿರಿಗೆಜ್ಜೆ ಪಾದಗಳ ಸಪ್ಪಳವ‌ನ್ನ‌ ಕಿವಿಗಳಷ್ಟೇ ಕೇಳು ವಂತಿರು ಗೆಳತಿ
ಒಲವು ಪಲಕುಗಳ ಮಾತುಗಳ ಬೇರೆಯಾರ ಎದೆಗೂ ಕೇಳಿಸದಿರು ಗೆಳತಿ

ಜನುಮಗಳ ನೇಹವಿದು ಈ ಜನುಮಕಷ್ಟೇ ಸೀಮಿತ ಗೊಳಿಸದಿರು ಗೆಳತಿ
ತೀರಲಾರದ ಬಂಧಕ್ಕೆ ಇಹದ ಉತ್ತರವ ಹುಡುಕಿ ಸೋಲದಿರು ಗೆಳತಿ

ಕಾರಣ ಅಕಾರಣಗಳ‌ ನೆವ ಹುಡುಕಿ ವ್ಯರ್ಥಮಾತು ಗಳ ಬಳಸದಿರು ಗೆಳತಿ
ನೂರೆಂಟು ನೆವವ‌ಹುಡುಕಿ ದೈವ ಜೊಡಿಸಿದ ‘ಯಯಾ’ ನ ನೇಹವ ಅಲಸದಿರು ಗೆಳತಿ

***********************************

About The Author

Leave a Reply

You cannot copy content of this page

Scroll to Top