ಕವಿತೆ
ನಂಟಿನ ಗುಟ್ಟು..
ಜ್ಯೋತಿ ಡಿ.ಬೊಮ್ಮಾ.
ನೀರೆಗೂ ಸೀರೆಗೂ ಅಂಟಿದ
ನಂಟನ್ನು ಬಲ್ಲಿರಾ..
ಪಡೆದಷ್ಟು ಹೆಚ್ಚಾಗುವ ಹಂಬಲದ
ಗುಟ್ಟೆನು ಗಮನಿಸಿದ್ದಿರಾ..
ಅಂಚು ಸೆರಗಿನ ವರ್ಣನೆ
ಬಣ್ಣಿಸುವದೆ ಒಂದು ಕಲೆ.
ಆ ವರ್ಣ ನೆ ಮುಂದೆ ಎಷ್ಟಿದ್ದರೇನು
ಸೀರೆಯ ಬೆಲೆ.
ಎಷ್ಟು ಕೊಂಡರು ತೀರದ
ಮನದ ಹಂಬಲ.
ಇನ್ನೊಂದು ಮತ್ತೊಂದು ಎಂದು
ಬಯಸುವದು ಮನ ಚಂಚಲ.
ಕಂಚಿ ಪಿತಾಂಬರ ರೇಷ್ಮೆ
ಹೆಸರಿರುವವು ಅನೇಕ.
ಕೆಂಪು ಹಳದಿ ಗುಲಾಬಿಗಳಲ್ಲಿ
ಕಂಗೊಳಿಸುವದನ್ನು ನೋಡುವದೆ ಪುಳಕ.
ಮೈಗೆ ಒಪ್ಪುವಂತೆ ಉಟ್ಟು
ಗತ್ತಿನ ಕುಪ್ಪಸ ತೊಟ್ಟು
ಚಿಮ್ಮುವ ನೀರಿಗೆಗಳನ್ನೆತ್ತಿ
ಗಾಳಿಗೆ ಹಾರುವ ಸೆರಗಿಗೆ ಪಿನ್ನಿನ ಹೂ ಮುಡಿಸಿ
ಹಂಸ ನಡಿಗೆಯಲ್ಲಿ ನಡೆವ ನೀರೆಯೆ..
ನಿನಗೂ ಸೀರೆಗೂ ಅಂಟಿದ
ನಂಟಿನ ಗುಟ್ಟು..
ಎಂಟೆದೆ ಭಂಟರಿಗೂ
ಬಿಡಿಸಲಾರದ ಕಗ್ಗಂಟು.
***********************
ಸಹಜ ಸುಂದರ ಕಾವ್ಯ ಮೇಡಂ
ನಿಜಾ.. ಸೀರೆಗೂ, ನಾರಿಗೂ ಬಿಡಿಸಲಾರದ ನಂಟು.. ಸುಂದರ ಕವನ