ಸಂಕ್ರಾಂತಿ ಕಾವ್ಯ ಸುಗ್ಗಿ
ಸಂಕ್ರಾಂತಿ.
ಜ್ಯೋತಿ ಡಿ.ಬೊಮ್ಮಾ
ಎಳ್ಳು ಬೆಲ್ಲ ಜೊತೆಗೆ ಬೆಸೆದು
ಸಮರಸದಲ್ಲಿ ಬಾಳು ಹೊಸೆದು
ನೀಗಲಿ ಮನದ ಮತ್ಸರ
ಬರುವ ಹತ್ತಿರ ಹತ್ತಿರ.
ಸುಗ್ಗಿಯ ಸೊಬಗಲಿ ಹಿಗ್ಗಿನಾಭರಣ
ಕಟ್ಟಿ ಮನೆ ಮನೆಗೂ ತಳಿರು ತೋರಣ
ಹಾಕಿ ಮನೆ ಮುಂದೆ ರಂಗವಲ್ಲಿ ಶ್ರೀಕಾರ
ಬಂತು ಬಂತು ಊರಿಗೆ ಹಿಗ್ಗಿನ ಹರಿಕಾರ.
ನವಯುಗದ ಪಥವ ಹಿಡಿದು
ಉತ್ತರಾಯಣ ಪಣ್ಯಕಾಲವ ಸೇರಲು
ಹೊಸ ಲಯಕ್ಕೆ ಬದಲಾಯಿಸಿತು ಬದುಕು ಪಥ
ಲಭಿಸಲಿ ಸಕಲರಿಗೂ ನೆಮ್ಮದಿ ಅನವರತ.
ಎಳ್ಳು ಬೆಲ್ಲ ತಿಂದು ದೂರಾಗಲಿ
ಮನಮನದಲ್ಲೂ ಬತ್ತಿದೊಡಕು
ಶಾಂತಿಯಲ್ಲಿ ನೆಟ್ಟ ಹಗೆಯ ಕನಸೂ
ಓ ಸಂಕ್ರಾಂತಿಯೆ..
ನೀ ಎಂದೆಂದಿಗೂ ಶುಭವ ಒಲಿಸು.
***************************************