ಸಾಕು ಬಳುಬಳಿ…
ಕವಿತೆ ಸಾಕು ಬಳುಬಳಿ… ಕೃಷ್ಣಮೂರ್ತಿ ಕುಲಕರ್ಣಿ ಸಾಲು ದೀಪ ಉರಿಯುವಾಗಒಂದಕಂಟಿದೆ ಸೊಡರುಮಕ್ಕು ಕವಿದು ಬಿಕ್ಕುವಾಗಅದ್ಯಾರು ನೋಡ್ವರು ಹೇಳುದೀಪಗಳು ಪ್ರಜ್ವಲತೆಯಲಿಸುತ್ತ ಬೆಳಗುವಾಗಹಬ್ಬದ ಸಡಗರ ಹಬ್ಬಿರುವಾಗಆರ್ಥ ಧ್ವನಿಯತ್ತಹರಡದು ಯಾರ ಚಿತ್ತಈ ತನಕ ಬೆಳಗಿದೆಬೇಕಿದೆ ಈಗ ವಿರಾಮಎಂದಾರುತಿದೆ ಬಸವಳಿದ ದೀಪಅದಕು ಮುನ್ನ ಬೆಳಗಿಸಿದೆಇನ್ನೊಂದು ರೂಪದೀಪದಿಂದ ದೀಪಹಚ್ಚಬೇಕು ಮಾನವಅದೆ ದೀಪ ಉಳಿಯಲೆಂಬಸೊಲ್ಲು ಬೇಡಾ ಕೇಳುವಬೆಳಕು ಮುಖ್ಯ ಬದುಕಿನಲ್ಲಿಅಂಧತೆಯ ತೊಡೆಯಲುನಾನು ನನದು ಎಂಬುದೆಲ್ಲಬತ್ತಿಯಾಗಿ ಉರಿಯಲುಶಕ್ತಿ ಕೊಡು ದೀಪಾವಳಿಸಾಕು ಇದೇ ಬಳುವಳಿ… **********************
ಬೆಳಕು
ಕವಿತೆ ಬೆಳಕು ಬಸವರಾಜ ಕಾಸೆ ಕತ್ತಲು ಎಲ್ಲೆಲ್ಲಿ ಇದೀಯೋಅಲ್ಲಿ ಎಲ್ಲಾ ಒಮ್ಮೆಯಾದರೂತೂಗಿ ಬಿಡಬೇಕು ಆಕಾಶಬುಟ್ಟಿಮಮತೆಯ ತೊಟ್ಟಿಲಂತೆ* ನಾ ಬೆಳಕು ಬಯಸಿದೆಕತ್ತಲೆಯಲ್ಲಿ ನಿಂತುಒಂದು ಹಣತೆ ಹಿಡಿದುಆದರೆ ಆ ಕತ್ತಲೆತಾನೇ ಬೆಳಗಾಗ ಬಯಸಿತ್ತು* ಮನೆಯೊಳಗಿನ ಮನಗಳ ದೀಪಹಪಾಹಪಿಸುತ್ತಿತ್ತುಹೊರಗೂ ಬೆಳಕಾಗಲುಅದಕ್ಕಾಗಿಯೇ ಹಚ್ಚಿದರುಹೆಚ್ಚು ಸಾಲುಗಳ ದೀಪ* ನಾವು ಹಚ್ಚಿದೆವೆಂದು ಹತ್ತು ದೀಪಅಲ್ಲೊಬ್ಬ ಹಚ್ಚಿದ ಇಪ್ಪತ್ತು ದೀಪ ಆದರೆ ಬೆಳಕು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆಸದ್ದಿಲ್ಲದೆ ಪ್ರಸಾರವಾಗಿಪರಸ್ಪರ ವಿನಿಮಯವಾಗುತ್ತಿತ್ತು* ಅತ್ತಿತ್ತ ಓಲಾಡಿ ಕುಲುಕುವ ದೀಪಕ್ಷಣ ಕ್ಷಣ ಚಂಚಲವಾಗಿಮತ್ತೆ ಧೃಡವಾಗುವಈ ಮನಸ್ಸಿನ ವಯ್ಯಾರದಷ್ಟೆ ಸಹಜ* ಕತ್ತಲೆಗೆ ತೋರಿಸಬೇಕು ಅಲ್ವಾಬೆಳಕು […]
ವಾರದ ಕವಿತೆ
ವಾರದ ಕವಿತೆ ಆಟ ದೀಪ್ತಿ ಭದ್ರಾವತಿ ಸಾವಿನ ಆಟವಾಡುವಾಗನಿಶ್ಯಬ್ಧ ನಿಶ್ಯಬ್ಧ ಮತ್ತು ನಿಶ್ಯಬ್ಧತೂಕದ ತೋಳುಗಳಹವಣಿಕೆಗೆ ನಿಲುಕದ್ದುಯಾವುದಿದೆ ಇಲ್ಲಿ? ಮರೆ ಮರೆವ ಆಟಬಿಟ್ಟು ಹೋಗುವ ಆಟಸುತ್ತೆಲ್ಲ ಸಮಚಿತ್ತದಲಿಕೂತ ಕೊಕ್ಕೆಗಳನೂರು ಚಿತ್ತಾರಕೆಇಹಪರದ ತರತಮವೆಲ್ಲಿ? ಜೊತೆಗಿದ್ದವರು ಕೈ ಬೀಸುವಬೆನ್ನು ಬಿದ್ದವರುಹೆಗಲು ನೀಡುವ ಸಾಕಾರ ಕ್ರಿಯೆಗಿಲ್ಲಿಸಾವಿರದ ಸಾಸಿವೆ ದೀಕ್ಷೆಬಿಟ್ಟು ಬಿಡುವ ರೆಕ್ಕೆಗಳಪೇರಿಸಿಟ್ಟುಕೊಳ್ಳುವ ಸಾಹಸಕ್ಕೆತುದಿ ಮೊದಲೇ ಭಾವ ಭಂಗಿ? ಆದಿ ಅನಾದಿಗಳ ಲಕ್ಷ ಪ್ರಶ್ನೆಗೆಉತ್ತರ ಹುಡುಹುಡುಕಿ ಸೋತವರಪಟ್ಟಿಯೊಂದೆಜಗದ ಜಂತಿಯಲಿ ನೇತುಬೀಳುವಹೊಸ ಅಂಗಿ ******************************
ಕವಲೊಡೆದ ದಾರಿ
ರಾಬರ್ಟ್ ಪ್ರಾಸ್ಟ್ ಅವರ ಕವಿತೆಯ ಕನ್ನಡಾನುವಾದ ಗಣೇಶ್ ವಿ. ಕವಲೊಡೆದ ದಾರಿ ಪಯಣಿಸುವ ದಾರಿಯಲಿ ಕವಲೆರಡು ಒಡೆದಿತ್ತುಒಂಟಿ ಪಯಣಿಗ ನಾನು ನೋಡುತ್ತ ನಿಂತೆನಾನೆರಡು ದಾರಿಯ ಚಲಿಸುವಂತಿರಲಿಲ್ಲತುದಿಕಾಣದಾ ಆ ಪಥವು ಓಡುತ್ತಲಿತ್ತುಅನತಿ ದೂರದವರೆಗೆ ಅದು ಮಿಂಚುತ್ತಲಿತ್ತು ಮತ್ತೊಂದು ಮಾರ್ಗವನು ತುಳಿಯುತ್ತ ನಾ ಹೊರಟೆಬದುಕಿನೊಳಗೊಂದು ಹೊಸತನವ ಕಾಣಲುತುಸು ತುಳಿದ ಪಥವೆಂದೆಣಿಸುತ್ತ ನಾ ಚಲಿಸಿದರೆನಡೆಯುತ್ತ ನಡೆಯುತ್ತ ಸತ್ಯವೊಂದನು ಅರಿತೆಎಲ್ಲಾ ಪಯಣದೊಳಗಿರುವ ತಿರುಳೊಂದೇ ಎಂದು. ಅಂದು ಬೆಳಗಿನ ಝಾಮ ಕವಲೊಡೆದ ಹಾದಿಯಲಿಮೊದಲನೆಯ ಮಾರ್ಗವನು ಮತ್ತೊಂದು ದಿನಕುಳಿಸಿಎರಡನೆಯ ಮಾರ್ಗವನು ತುಳಿಯುತ್ತ ನಾ ಬಂದೆಹಾದಿಗೆ ಹಾದಿ […]
ಮೌನ
ಕವಿತೆ ಮೌನ ತಿಲಕ ನಾಗರಾಜ್ ಹಿರಿಯಡಕ ನಾನು ಸುಮ್ಮನಿದ್ದೆನೀನೂ ಸುಮ್ಮನಾದೆ ನಿನ್ನೆದೆಯ ಭಾವಾಂತರಂಗದತುಡಿತಗಳ ಅರಿವತವಕ ನನ್ನೊಳಗಿತ್ತು… ದಿನ ಕಳೆಯುತ್ತಲೇ ಹೋಯಿತುಜಡಿದ ಮೌನದ ಬೀಗಬಿಚ್ಚದೆ ಅಲ್ಲೇ ತುಕ್ಕುಹಿಡಿದಿತ್ತು.. ಜತೆಗೆ ಹಿಡಿದ ಹಠವೂಕರಗದೆ ಹೆಪ್ಪುಗಟ್ಟಿತ್ತು..ನೀ ಸೋಲುವೆಯೋ?ಇಲ್ಲ ನಾನೋ?ಇಲ್ಲ ಯಾರಿಗೂ ಸೋಲುವ ಮನಸ್ಸಿಲ್ಲದೆ ಬದುಕುಕವಲು ದಾರಿಯಲ್ಲಿ ಸಾಗಿತ್ತುನೀ ಎಲ್ಲೋ… ನಾ ಇನ್ನೆಲ್ಲೋ.. *************************
ಇನ್ನೆಷ್ಟು ತ್ಯಾಗ ಮಾಡಬೇಕು.
ಕವಿತೆ ಇನ್ನೆಷ್ಟು ತ್ಯಾಗ ಮಾಡಬೇಕು. ಅನಿಲ ಕಾಮತ ಒಡಲಲ್ಲಿ ನಿನ್ನ ಕುಲದ ಕುಡಿಯನುಜತವಾಗಿಸಿಕೊಂಡಿರುವೆನಿನ್ನ ಕೆಣಕಿಸಿ ಜನರುಉಡಾಫೆಯ ನಗು ನಕ್ಕರುನಿನ್ನನ್ನು ನಾನು ಸಂತೈಸಿರುವೆ ತಾಳ್ಮೆ ಕಳೆದುಕೊಂಡುಸೋತ ಮೊಗವ ಹೊತ್ತುಮನೆಯ ಮೂಲೆ ಸಂಧಿಯಲಿಕೂತಾಗ ನಗುವಲ್ಲೇ ತೇಲಿಸಿದ್ದೇನೆ ಮದಿರೆಯಲಿ ಮಿಂದೆದ್ದಾಗನಿನ್ನ ಮರ್ಯಾದೆ ಮುಕ್ಕಾಗದ ಹಾಗೆನಟಿಸಿದ್ದೇನೆಕೋಪಾಗ್ನಿಗೆ ಬೆನ್ನ ಮೇಲಿನಬರೆಗಳು ನಿನ್ನನ್ನೇ ದಿಟ್ಟಿ ಸುತ್ತಿವೆ ನಿನ್ನ ಬರುವಿಕೆಗಾಗಿಅದೆಷ್ಟು ಇರುಳನ್ನುಏಕಾಂತದಲ್ಲೇ ಕಳೆದಿದ್ದೇನೆನಿನ್ನ ಕಾಮದ ಜ್ವಾಲಾಮುಖಿಗೆಸುಟ್ಟು ಕರಕಲಾಗಿದ್ದೇನೆನಿನಗಾಗಿ ಇನ್ನೆಷ್ಟು ತ್ಯಾಗ ಮಾಡಬೇಕು… ***********************