Category: ವಾರದ ಕವಿತೆ

ಕೂಸು ಕಾಡುತ್ತಿದೆ..

ಲಾಕ್ ಆಗಿ ನಗುವೆಲ್ಲಾ ಉತ್ಸಾಹ ಡೌನ್ ಆಗಿದೆ
ಭರ್ರನೆ ತಿರುಗುತ್ತಿದ್ದ ಕೂಸಿನ ಕೈಕಾಲು ಕಟ್ಟಿಹಾಕಿದೆ
ನಾಲ್ಕು ಗೋಡೆಯ ನಡುವೆ ಕಮಟು ನಾಥ
ಹೊಸಗಾಳಿ ಬೆಳಕಿಲ್ಲದೆ ಮಂಕು ಆವರಿಸಿದೆ

ತವರು ತಾರಸಿಯಾಗುತ್ತಿದೆ

ನನ್ನ ” ಸಿರಿದೊಂಡಲಿನ” ಮುತ್ತು ಮಣಿಗಳನ್ಬೆಲ್ಲ
ಒಂದೊಂದೂ ಬಿಡದೆ
ಆರಿಸಿ ತರಬೇಕು

ಒಡಲ ಚಿಗುರು ಕುಡಿಗಳಿಗೆ ಮಾತ್ರ ನಿಜಕ್ಕೂ
ಮರವಾಗುವುದು ಹೇಗೆಂದು ಕಿವಿಯಲ್ಲುಸುರಿ
ಪಾಠ ಮಾಡುತ್ತಿದ್ದೇವೆ.
ಸಧ್ಯ! ಯಾರೂ ಕೇಳಿಸಿಕೊಳ್ಳುತ್ತಿಲ್ಲವಷ್ಟೆ

ನಾನು ನಿನ್ನ ಉಸಿರಾಡುತ್ತಿದ್ದೇನೆ
ನೀನಲ್ಲಿ ಕುದಿಯವ ಸಾರಿಗೆ ಉಪ್ಪುಹಾಕಿ , ಕುದಿಬಿಂದುವಿನತ್ತ ದೃಷ್ಟಿ ನೆಟ್ಟಿರುವೆ

ಅವನ ಭಾವಗಳಿಗೆ ಮುಖವಿಲ್ಲ
ಅವನ ಆಸೆಗಳಿಗೆ ಕಣ್ಣಿಲ್ಲ
ಅವನ ಬಯಕೆ ಚಳಿಗಾಲದ ಬಿಸುಪು
ಬೇಸಿಗೆಯ ತಂಪು

ಪ್ರಾರ್ಥಿಸುತ್ತಲೇ ಇದ್ದೇನೆ

ಕವಿತೆ ಪ್ರಾರ್ಥಿಸುತ್ತಲೇ ಇದ್ದೇನೆ ವಿಜಯಶ್ರೀ ಹಾಲಾಡಿ ಭುಜದ ಮೇಲೊಂದು ನವಿರುರೆಕ್ಕೆ ಮೂಡಿದ್ದರೆ ಹಾರಿಬರುತ್ತಿದ್ದೆ ಬೆಟ್ಟಗಳ ದಾಟಿ….ಗುಟುಕು ತಿನಿಸಿ ಕೊಕ್ಕಿನಮೊನೆಯಿಂದ ಗರಿಗರಿಗಳನೇವರಿಸಿ ಹಿತಗೊಳಿಸಿಹಗಲ ಹಾಡು ಕತ್ತಲ ಪಾಡಿಗೆಕಿವಿಯಾನಿಸಿ ಎದೆಯಾನಿಸಿನಿರಾಳಗೊಳ್ಳುತಿದ್ದೆ ಕತ್ತಿಗೆಕತ್ತೂರಿ, ಹದ್ದಿನ ಕಣ್ಣು ತಪ್ಪಿಸಿ ಮನಸಿನ ರೆಕ್ಕೆಗಳೋಪಟಪಟನೆ ಬಡಿಬಡಿದುದೂರ ದೂರ ತೇಲಿಹೋಗಲುಹವಣಿಸುತ್ತವೆ- ಕ್ರಮಿಸುತ್ತವೆಅರೆದಾರಿ, ಬಿರುಬೇಸಗೆಯವಸಂತದ ಹೂ ನೆರಳಿನಲಿಗಪ್ಪನೆ ಮರಳುತ್ತವೆಕಸಿವಿಸಿಯ ತಂಗಾಳಿಯಲಿ ಅಲ್ಲಿ ನಿನ್ನೂರಿನಲೂ ಕೋಗಿಲೆಕೂಗಿ ಕೂಗಿ ದಣಿದಿರಬಹುದುಸಂಜೆಯ ಏಕಾಂತ ನಡಿಗೆಯಲಿಹೂಗಳು ಬಾಡಿ ಉದುರಿರಬಹುದುಅರಳಲಾರದ ಮರಳಲಾರದಹುಸಿಮೊಗ್ಗುಗಳ ಚಡಪಡಿಕೆನಿನ್ನನೂ ತಾಕುತ್ತಿರಬಹುದು… ಈ ಇರುಳು ಧುತ್ತನೆರೆಕ್ಕೆಗಳು ಹುಟ್ಟಿ ಬಿಡಬಾರದೇಕೆನಿನಗೊಂದು ನನಗೊಂದುಪ್ರಾರ್ಥಿಸುತ್ತಲೇ ಇದ್ದೇನೆಎಂದಿನಿಂದಲೂಕಡಲಕಣ್ಣ ಬುವಿಯ […]

ಜೈಲಿನಂತಿರುವ ಕೋಣೆಯಲಿ
ಮಾಂಸದಂಗಡಿಯ ಮಟನ್ ನಂತೆ
ನೇತುಬಿಟ್ಟಿರಬೇಕಿತ್ತು
ಹೊತ್ತಿಗೊಂದು ಕೈಗೆ ಸಿಕ್ಕು
ಧರಿಸಬಹುದಿತ್ತು

ಒಲವಾಗಿ ಬಿಡೋಣ ನಳಿನ ಡಿ. ಎಲ್ಲದರಂತಲ್ಲದ ಈ ರೋಸುಆತ್ಮಕೆ ಅಂಟಿಸಿದವರ್ಯಾರು?ಗುಡಿಸಿದಷ್ಟೂ ಕಾಮದ ಕಸ,ತೊಳೆದಷ್ಟೂ ಪ್ರೇಮದ ನೊರೆ,ಉಳಿ ಪಿಡಿದು ಕೆತ್ತಿಸಿದವರ್ಯಾರು?ನಿನ್ನೆದೆಯಲಿ ನನ್ನ? ಬಹು ಜೋಕೆ ಹುಡುಗಾ,ನೀ ನಡೆಯುತಿರುವುದುಕತ್ತಿಯಂಚಿನ ಮೇಲೆ..ಸೀರೆಯ ಸೆರಗ ಮೇಲೆಲ್ಲಾ,ನಿನ್ನ ಹೆಸರಿನ ಕಸೂತಿಉಟ್ಟ ಮೈ ಜುಂ ಅಂದಾಗನಿನ್ನಲ್ಲೂ ತಲ್ಲಣ ಬುದ್ದ ಇದಿರಾದಂತೆ,ತೆವಲಿನ ಜಗತಿಗೆಪ್ರೇಮ ತೆರೆದಿದೆಕಾಮದ ಕೊರಳಿಗೆ..ಎಲ್ಲೆಲ್ಲೂ ಜಯಿಸಿದಬುದ್ದನಂತೆ,ಪ್ರೇಯ ಜಯಿಸಿರಲುನೀನೂಸುಮ್ಮನೇ ಕಾರಣ ಹೇಳದೆಬಂದುಬಿಡಬಹುದುಕಾದವಳ ಅಗ್ನಿಪರೀಕ್ಷೆಗೆವರವಾಗಿ.. ಬಲ್ಲಂಥವರ ಮಾತಲ್ಲಪ್ರೇಮ?ಮೂಗನ ಹಾಡಿನಂತೆ..ಬಾ ದೂರದ ಮರಳುನಾಡಿನಪಯಣಕೆ ಓಯಸಿಸ್ ನಂತೆನಿಂತ ಜಲವಾಗಿಒಲವಾಗಿ ಬಿಡೋಣ.. **********************************************

ವಾರದ ಕವಿತೆ ಜೋಕಾಲಿ ಚೈತ್ರಾ ಶಿವಯೋಗಿಮಠ ಮೇಲೆ ಮೇಲೆ ಮ್ಯಾಗಜೂರಿ ಜೀಕಬೇಕು ನಾನುಹಳ್ಳ ಹೊಳಿ ಕಡಲು ಕಾಣಬೇಕಹಸುರ ಹೊದ್ದ ಕಾನು ಮಗುವಿನ್ಹಾಂಗ ಕ್ಯಾಕಿ ಹಾಕಿಹಾರಬೇಕ ಮ್ಯಾಲೆಕಾಣಬೇಕ ಮನಿ ಮಾಳಿಗಿಹಬ್ಬಿದ ಹೂ ಬಳ್ಳಿ ಅಲ್ಲೆ ಜೋಕಾಲಿ ಕಟ್ಟಿ ಜೀಕಿದರರೆಕ್ಕಿ ಬ್ಯಾಡ ಪುಕ್ಕಾ ಬ್ಯಾಡಬೆಳ್ಳಿ ಮುಗಲ ಅನಾಯಾಸಹಂಗ ಮುಟ್ಟಬೋದು ನೋಡ ಬರ್ರಿ, ಬೆಟ್ಟ ಕಣವಿ ಗುಡಿ ಬಯಲದಾಟಿ ಮುಂದಕ ಜೀಕೋಣುಸ್ವಚ್ಛಂದ ಆಕಾಶದಾಗ ಹಕ್ಕಿಹಂಗಹಾಡಾ ಹಾಡಿ ಸಿಳ್ಳಿ ಹಾಕೋಣು ಹಾರಿದ್ಹಂಗ ಏರಿದ್ಹಂಗ ಚಂದಗಾಳಿ ಜೋಡಿ ಮುಂಗುರುಳ ಸರಸಚಂದವದು, ಸ್ವರ್ಗದ ಬಾಗಿಲು ತಟ್ಟಿಮತ್ತ […]

ಈ ಸಂಜೆ ಗಾಯಗೊಂಡಿದೆ

ವಾರದ ಕವಿತೆ ಈ ಸಂಜೆ ಗಾಯಗೊಂಡಿದೆ ನಾಗರಾಜ ಹರಪನಹಳ್ಳಿ ಈ ಸಂಜೆ ದುಃಖಗೊಂಡಿದೆಆಕಾಶದ ಕೆನ್ನೆ ಮೇಲಿನ‌ ಕಣ್ಣೀರು ಸಾಗರವಾಗಿದೆ ಸಂಜೆ ದುಃಖದ ಜೊತೆ ಗಾಯಗೊಂಡಿದೆಅಲೆಯ ದುಃಖದ ಕೆನ್ನೀರು ದಂಡೆಗೆ ಸಿಡಿದಿವೆ ಕಣ್ಣೀರನುಂಡ ದಂಡೆ ಹಸಿಯಾಗಿದೆನಿನ್ನ ಭಾವಚಿತ್ರ ಕಡಲಹಾಯಿ ದೋಣಿಯಲ್ಲಿ ‌ಮೂಡಿ ಬಂದಿದೆ ಈ ಸಂಜೆ ಯಾಕೋ ಏನೋ ಕಳೆದು ಕೊಂಡಿದೆ , ಮೌನ ಸಾಗರದ ನಡುವಿನ ದ್ವೀಪ ತಬ್ಬಿದೆ ಕಡಲು ಪಶ್ಚಿಮಕ್ಕೆ ದೀಪ ಮಿಣಕುತ್ತಿದೆಅವು ನಿನ್ನ ಕಣ್ಣುಗಳೇ ಆಗಿವೆ ಸಂಜೆಯ ದುಃಖ ಅಳಿದುಅದರೊಡಲಿಗೆ ಆದ ಗಾಯ ಮಾಯುವ […]

Back To Top