Day: November 11, 2020

ಸ್ವೀಕರಿಸುವೆಯಾ?

ಕವಿತೆ ಸ್ವೀಕರಿಸುವೆಯಾ? ಚಂದ್ರು ಪಿ ಹಾಸನ್ ಇಂದ್ರನ ಬನದಲ್ಲಿ ಅರಳಿದಓ ಅಂದದ ಚೆಂದದ ಹೂವೆಚಂದ್ರನ ಬರುವಿಕೆಗೆ ಕಾದಿರುವೆಯಾ? ಚಿಟ್ಟೆಗಳು ಒಟ್ಟೊಟ್ಟಾಗಿ ಒಮ್ಮೆಲೆಹಿಗ್ಗುತಲಿ ನುಗ್ಗುತಿರಲಿ ಬಗ್ಗದೆಮುಖ ಮರೆಮಾಚಿ ನಿಂತೆಯಾ? ಮುಂಜಾವ ಭಾಸ್ಕರನು ಬೆಳ್ಳಿರಥವೇರಿಚೆಲ್ಲಿಹನು ಅವನ ಹೊನ್ನ ಬೆಳಕನ್ನುಚೆಲುವ ತೋರದೆ ಹೋಗುವೆಯಾ? ರವಿ ರಶ್ಮಿಯನ್ನು ಸ್ವೀಕರಿಸದೆತಮವನ್ನೇ ತನ್ನಲ್ಲಿ ಆವರಿಸಿಕೊಂಡುಯಾರಿಗಾಗಿ ಅರಳುತ್ತಿರುವೆಯಾ? ನನಗಾಗಿ ನೀ ಕಾದಿದ್ದರೆ ಸಾಕುಬೇರೇನು ನಿನ್ನಿಂದ ಬೇಡೆನಗೆಪ್ರೀತಿಗಾಗಿ ಹುಡುಕಿದೆ ನೀಡುವೆಯಾ? ನೆಲೆಸುವೆ ಹೃದಯದಲ್ಲಿ ಸ್ವೀಕರಿಸುವೆಯಾ? ********************************

ಆಕಾಶದೀಪದ ಪ್ರಾಧಾನ್ಯತೆ

ಲೇಖನ ಆಕಾಶದೀಪದ ಪ್ರಾಧಾನ್ಯತೆ ವೀಣಾ. ಎನ್. ರಾವ್. ದೀಪಾವಳಿ ಬಂತೆಂದರೆ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ವಿನೂತನವಾದ ಸಂತಸ. ಹಾಗೆಯೇ ದೀಪಾವಳಿಯ ಸಮಯದಲ್ಲಿ ಅದರಲ್ಲೂ ವಿಶೇಷವಾಗಿ ಹಳ್ಳಿಗಳಲ್ಲಿ “ಆಕಾಶದೀಪ”ವನ್ನು ಮನೆಯ ಮುಂದೆ ತೂಗು ಹಾಕುತ್ತಾರೆ.  ಈ ‘ಆಕಾಶದೀಪ’ವು, “ಗೂಡುದೀಪ”,”ನಕ್ಷತ್ರದೀಪ”,ಎಂದು ಪರಿಚಿತವಾದರೆ, ಹಳ್ಳಿಗಳಲ್ಲಿ “ಯಮದೀಪ”,”ವ್ಯೋಮದೀಪ”  ಎಂದು ಕೂಡಾ ಕರೆಯುತ್ತಾರೆ.            ಬಿದಿರಿನ ಕಡ್ಡಿಗಳಿಂದ ಎಂಟು ಮೂಲೆಗಳಿರುವಂತೆ ಯಾವ ಆಕಾರಕ್ಕೆ ಬೇಕೊ ಆ ರೀತಿಯಾಗಿ ಕಟ್ಟಿ ಅದರ ಸುತ್ತಲೂ ಬಣ್ಣದ ಪೇಪರನ್ನು ಅಂಟಿಸಿ ಬಾಲಂಗೋಚಿಯನ್ನು ಇಳಿಬಿಟ್ಟು ಮನೆಯಲ್ಲೆ ತಯಾರಿಸುವ ಈ […]

ಕಾದಂಬರಿ ಕುರಿತು ಮರಳಿ ಮಣ್ಣಿಗೆ ಡಾ.ಶಿವರಾಮ ಕಾರಂತ ಮರಳಿ ಮಣ್ಣಿಗೆ  ಲೇಖಕರು :ಡಾ. ಕೆ‌. ಶಿವರಾಮ ಕಾರಂತ ನಾನು ಶಿವರಾಮ ಕಾರಂತರ ಎಲ್ಲಾ ಕಾದಂಬರಿಗಳನ್ನು ಓದಿಲ್ಲವಾದರೂ ಕೆಲವೊಂದನ್ನು ಓದಿದ್ದೇನೆ.  ಅದರಲ್ಲಿ ನನಗಿಷ್ಟವಾದ ಕಾದಂಬರಿ ” ಮರಳಿ ಮಣ್ಣಿಗೆ”    ಈ ಕೃತಿಯನ್ನು ಓದುವಾಗ ಓದಿ ಮುಗಿಸುವ ತನಕ ಪುಸ್ತಕ ಮುಚ್ಚಿಡಲು ಆಗದಷ್ಟು ಆಸಕ್ತಿ ನಮ್ಮನ್ನು ಓದಿಸಿ ಕೊಂಡು ಹೋಗುತ್ತದೆ. ಇಡೀ ಕಥೆಯೆ ನಮ್ಮ ಕಣ್ಮುಂದೆ ಹಾದು ಹೋಗುವ ಅನುಭವವಾಗುತ್ತದೆ. ಇದಕ್ಕೆ ಕಾರಣ ಅಲ್ಲಿನ ಘಟನೆಗಳು, ಮಾತುಕತೆಗಳು ಹಾಗು […]

ದೀಪಗಳ ಸಾಲು

ಕವಿತೆ ದೀಪಗಳ ಸಾಲು ಸುವಿಧಾ ಹಡಿನಬಾಳ ಹಚ್ಚೋಣ ಸುತ್ತೆಲ್ಲಾ ದೀಪಗಳ ಸಾಲುಹೊದೆಸೋಣ ಎಲ್ಲರಿಗೂ ಪ್ರೀತಿಯ ಶಾಲು ಬೆಳಕಿಂದೆ ಜಗವು ಬೆಳಗುತಿಹುದುಅನ್ಯಾಯ ಹಿಂಸೆಯಲಿ ದಹಿಸುತಿಹುದುಜ್ಞಾನದ ಬೆಳಕಿನಲಿ ತೆರೆಯಲಿಕಣ್ಣುವಾಸಿಯಾಗಲಿ ಮನದ ಕಲ್ಮಶದ ಹುಣ್ಣು ಜಗವ ಹಿಂಡುತಿಹ ‌ಅನಾರೋಗ್ಯ ದೂರಾಗಲಿಎಲ್ಲರೂ ತಿಂದುಂಡು ನೆಮ್ಮದಿಯಾಗಿರಲಿ ನೆಲಕಚ್ಚಿದ ಆರ್ಥಿಕತೆ ಮತ್ತೆ ಚೈತನ್ಯಗೊಳ್ಳಲಿದುಡಿಯುವ ಕೈಗಳಿಗೆ ಕೆಲಸವು ಲಭಿಸಲಿ ದಿನವೂ ಮೊರೆವ ಬಾಂಬು ಗುಂಡುಗಳ ಸದ್ದಡಗಲಿಆತಂಕವಾದಿಗಳ ಹೃದಯದ ಕತ್ತಲೆ ಕಳೆಯಲಿ ಬದುಕೆಂಬ ಅನಿಶ್ಚಿತ ಪಯಣದಲಿಸಕಲರ ಸಹಕಾರ ಋಣಭಾರವಿದೆಏಕೆ ವ್ಯಾಜ್ಯ, ಕಲಹ ಜೀವನದಲಿಪಯಣ ಸಾಗಲಿ ಹೊಂದಾಣಿಕೆ ಸಮರಸದಲಿ ಒಂದು […]

ದಿವ್ಯ ಅನಿಕೇತನ

ಕವಿತೆ ದಿವ್ಯ ಅನಿಕೇತನ ನೂತನ ದೇಹ ಆತ್ಮಗಳು ಮಾತಾಡಿಕೊಂಡವುನನ್ನೊಳಗೆ ನೀನೊನಿನ್ನೊಳಗೆ ನಾನೊ? ಯಾರೊಳಗೆ ಯಾರಿದ್ದರೇನುಇದ್ದೂ ಇರದಂತೆ ಇರುವವರೆಷ್ಟಿಲ್ಲ !ರೇಷಿಮೆಯ ಸಣ್ಣ ಅಂಚಿನ ಪತ್ತಲನಿಟ್ಟುಸಿರ ಬಿಡುವುದ ಕಾಣದಂತೆ ನಾವೀರ್ವರು ಒಂದಾದ ಕ್ಷಣಕ್ಕೆಹುಣ್ಣಿಮೆಯೇ ಸಾಕ್ಷಿಛಾಯೆ ಕನವರಿಸುತ್ತಾಳೆನೂರ್ಕಾಲದ ಬಾಳಿಗೆ ಹೊರನೋಟಕ್ಕೆ ಒಂದಾದರೆಒಳ ಹರಿವಿಗೆ ಒಂದು ನಾನು ನೀನೆಂಬಗಡಿಯಿರದ ಗೂಡಿನಲಿಜೇನು ಸವಿ ಹೀರಲುದೇಹದೊಲುಮೆಯಲಿಆತ್ಮಜ್ಯೋತಿ ಬೆಳಗಬೇಕು ಸದಾ ಆತ್ಮ ಬಿರಿದು ಕಣಕಣದಲಿ ಬೆಳೆದುಮಿಲನವ ಮೀರಿ ನಿಂತುಈಗ ಸರ್ವವ್ಯಾಪಿಬೇಧವಿರದ, ಬಂಧವೂ ಇರದದಿವ್ಯ ಅನಿಕೇತನ **************************

ಅಂಕಣ ಬರಹ ಒಮ್ಮೊಮ್ಮೆ ಪಾತ್ರೆ ತಿಕ್ಕುವಾಗಲೂ ಕವಿತೆಯ ಹೊಳಹುಗಾಣುತ್ತದೆ ಹೇಮಲತಾ ವಸ್ತ್ರದ. ಪರಿಚಯ: ಎಂಎ, ಎಂಇಡಿ, ಪಿಜಿ ಡಿಪ್ಲೋಮಾ ಇನ್ ಇಂಗ್ಲಿಷ್. ವಿಜಯಪುರ ಗ್ರಾಮೀಣ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿದ್ದಾರೆ. ಊರು: ಸಿಂದಗಿ.  ಜಿಲ್ಲೆ: ವಿಜಯಪುರ. ಕೃತಿಗಳು: ಅವ್ವನಿಗೊಂದು ಪತ್ರ (ಕವನಸಂಕಲನ). ಪೃಥ್ವಿಯೊಡಲು(ಕಥಾಸಂಕಲನ)(ಅಚ್ಚಿನಲ್ಲಿದೆ). ಗಜಲ್ ಸಂಕಲನಅಚ್ಚಿನಲ್ಲಿದೆ. ಅಕ್ಕನಾಗಮ್ಮ (ನಾಟಕ)(ಅಚ್ಚಿನಲ್ಲಿ) ಶೈಕ್ಷಣಿಕ, ಸಾಹಿತ್ಯಕ ಲೇಖನಗಳು. ಮಕ್ಕಳ ಕಥೆಗಳು, ಕವನಗಳು. ಕ್ರೀಯಾಸಂಶೋದನೆ (ಬಾಲಕಾರ್ಮಿಕಪದ್ಧತಿ). ಗುಲ್ಬರ್ಗಾ ವಿಶ್ವವಿದ್ಯಾಲಯ ದ ಎಂಎ ಮೂರನೇ ಸೆಮ್ (ಆಧುನಿಕ ಕಾವ್ಯ ಸಂಗ್ರಹ-೨೦೧೨) ಗೆ ಕನ್ನಡಗಜಲ್ಗಳು, ಕವನಗಳು ಪಠ್ಯವಾಗಿವೆ. […]

Back To Top