ಹಾಯ್ಕುಗಳು ಭಾರತಿ ರವೀಂದ್ರ ಸ್ವರ್ಗ ತಾಯಿ ಸ್ವರೂಪ :ಅಕ್ಕನ ಮಡಿಲದು,ಇದುವೇ ಸ್ವರ್ಗ. ಮನ ಹಸಿದ ಹೊಟ್ಟೆ :ನಿದ್ರೆಗೆ ಜಾಗವೆಲ್ಲಿ,ಜಾಗ್ರತ ಮನ. ನೆಮ್ಮದಿ ಇರೆ ನೆಮ್ಮದಿ :ಒಬ್ಬರಿಗೊಬ್ಬರದು,ಚಿಂತೆ ಮಾತೆಲ್ಲಿ. ಹೃದಯ ಶಿಲೆ ಹೃದಯ :ಈ ಜಗ, ಮಮತೆಯಸೆಲೆ ಸಿಗದು. ಸ್ನೇಹ ತುಂಟು ಮನಸ್ಸು :ಬಳಲಿದ ತೃಷೆಗೆ,ಸ್ನೇಹ ಸಿಂಚನ. *************************
ಅಂಕಣ ಬರಹ ದಂಗೆಯ ದಿನಗಳುಇಂಗ್ಲಿಷ್ ಮೂಲ : ಮನೋಹರ ಮಳಗಾಂವ್‌ಕರ್ ಕನ್ನಡಕ್ಕೆ : ರವಿ ಬೆಳಗೆರೆಪ್ರ : ಭಾವನಾ ಪ್ರಕಾಶನಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೧೮೫ಪುಟಗಳು : ೩೦೪ ಪ್ರಸಿದ್ಧ ಭಾರತೀಯ ಆಂಗ್ಲ ಲೇಖಕ ಮನೋಹರ ಮಳಗಾಂವ್‌ಕರ್ ಅವರ ಐತಿಹಾಸಿಕ ಕಾದಂಬರಿಯ ಅನುವಾದವಿದು. ಬ್ರಿಟಿಷರು ಭಾರತವನ್ನು ಆಕ್ರಮಿಸಿಕೊಂಡ ನಂತರ ಈಸ್ಟ್ ಇಂಡಿಯಾ ಕಂಪೆನಿಯು ವ್ಯಾಪಾರದ ಹೆಸರಿನಲ್ಲಿ ಭಾರತದ ಒಂದೊಂದೇ ರಾಜ್ಯಗಳನ್ನು ಕಬಳಿಸಿಯಾದ ಮೇಲೆ ಭಾರತೀಯರನ್ನು ಹಿಂಸಿಸ ತೊಡಗಿದಾಗ ಅವರ ವಿರುದ್ಧ ಸೇಡು ತೀರಿಸಿ ಅವರನ್ನು ಭಾರತದಿಂದ […]
ಕವಿತೆ ಗೆಜ್ಜೆನಾದ ಅಕ್ಷತಾ ಜಗದೀಶ್ ಸಾವಿರ ಸಾಲಿನ ಪದಗಳಲಿಅಡಗಿ ಕುಳಿತವಳು….ಯಾರಿಗೂ ಕಾಣದಂತೆನಾ ಬರೆವ ಕವನಗಳಲಿ ಮೂಡುತಿರುವಳು…….. ಕವನದ ಸಾಲುಗಳುಅವಳ ಗೆಜ್ಜೆಯನಾದದಹೆಜ್ಜೆಯ ಗುರುತುಗಳು..ಹಾಡಿನ ಪಲ್ಲವಿಯೂಅವಳು ಬಿರುವ ಕಿರುನಗೆಯೂ….ಆಕೆಯ ಸಿಹಿ ಮುತ್ತುಗಳೇ..ಮಳೆಯ ಆ ತುಂತುರು ಹನಿಗಳು.. ಬಾನಲ್ಲಿ ಬಂದು ಹೋಗುವಕಾಮನಬಿಲ್ಲಿನಂತೆ ನೀನು..ಬಣ್ಞಬಣ್ಣದ ನೆನಪು ಬಿತ್ತಿ ಹೋದೆಯೇನು….? ನನ್ನ ಹಾಡಿನ ಅಂತರಾಳ ಅವಳುನನ್ನ ಬಾಳಿನ ಒಡತಿ ಇವಳು..ಹಾಡಿಗೆ ಸ್ಪೂರ್ತಿಯಾಗಿ….ಪದಗಳಿಗೆ ಭಾವವಾಗಿ…ನನ್ನೊಡನೆ ಸೇರು ಮೆಲ್ಲಗೆ.. *********************************
ಅಂಕಣ ಬರಹ ದೇವರಮನೆಯಲ್ಲಿ ಕುರಿಂಜಿ (ಬಿಸಿಲನಾಡಾದ ಬಳ್ಳಾರಿ ಸೀಮೆಯಲ್ಲೂ ಕುರಿಂಜಿಯಿದೆ ಎಂಬ ಖಬರಿಲ್ಲದೆ,ಎರಡು ವರ್ಷದ ಹಿಂದೆ ಬರೆದ ಲೇಖನವಿದು.) ತರೀಕೆರೆ ಸೀಮೆಗೆ ಸೇರಿದ ಕೆಮ್ಮಣ್ಣುಗುಂಡಿ, ಬಾಬಾಬುಡನಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕಲ್ಹತ್ತಿಗಿರಿ ಮುಂತಾದ ಶೋಲಾ ಬೆಟ್ಟಗಳಲ್ಲಿ ಬಾಲ್ಯದಿಂದಲೂ ಅಲೆದಿದ್ದೇನೆ. ಆಗ ಕಳೆಯಂತೆ ಬೆಳೆದಿರುತ್ತಿದ್ದ ಅನಾಮಿಕವಾದ ಹಸಿರು ಗಿಡಗಳು ಕಣ್ಣಿಗೆ ಬೀಳುತ್ತಿದ್ದವು. ಆದರೆ ಅವು 12 ವರ್ಷಕ್ಕೊಮ್ಮೆ ಹೂಬಿಟ್ಟು ಗಿರಿಕಣಿವೆಗಳನ್ನು ಹೂವಿನ ತೊಟ್ಟಿಲಾಗಿ ಮಾಡಬಲ್ಲ ಕುರಿಂಜಿಗಳೆಂದು ಗೊತ್ತಿರಲಿಲ್ಲ. ತಿಳಿಯುತ್ತ ಹೋದಂತೆ, ನಮ್ಮ ಆಸುಪಾಸಿನಲ್ಲೇ ಇರುವ ಅವನ್ನು ಗಮನಿಸದೆ ಹೋದೆನೆಲ್ಲ ಎಂದು […]
ನದಿ. ವಾರದ ಕವಿತೆ ಪೂರ್ಣಿಮಾ ಸುರೇಶ್ ಕಿರಿಕಿರಿಕೊಡಲು ಆರಂಭಿಸಿವೆಈ ಸಂಖ್ಯೆಗಳುಇಸವಿ,ಮಾಸ,ದಿನತಳದಲ್ಲಿ ಅದೆಷ್ಟುಮಧು ಉಳಿದಿದೆಋತುಸುತ್ತು ಸುತ್ತಿಚೈತ್ರದ ಎಳೆಹಸಿರುಪಚ್ಚೆಹಳದಿಯಾಗಿ ಮಾಗಿಗೊಣಗಿಕ್ಷೀಣ ಆಕ್ರಂದನ ಚೀರಿ ಕಳಚುವತರಗೆಲೆಯ ನಿಟ್ಟುಸಿರುನಿರಂತರ ಮರ್ಮರ ಹೆಜ್ಜೆ,ದನಿ,ಗಾಳಿಯಸ್ಪರ್ಶಕ್ಕೆಒಡಲ ಹಾಡು ನಿಟ್ಟುಸಿರುಒಣ ಶಬ್ದ ಸೂತಕವಾಗಿ ತೊಡೆಯಲ್ಲಿ ತರಚಿಉಳಿದುಹೋದಕಲೆಗಳೂಆಪ್ತ ಪಳೆಯುಳಿಕೆ ನೀರಾಗುವ ಪುಳಕಿತಘಳಿಗೆಯಲ್ಲೂಬಚ್ಚಲಿನ ಹಂಡೆಇಣುಕಿಉಳಿದಿರಬಹುದಾದಬೆಚ್ಚಗಿನ ನೀರಿನಲೆಕ್ಕಾಚಾರಒದ್ದೆ ತಲೆಗೂದಲಿನ ಸಂದಿಯಲಿಜಲಬಿಂದುಗಳಪಿಸು ಒಂದು ಕುಂಭದ್ರೋಣಮಳೆಯಾಗಿಒಣಗಿ ಬಿರುಕು ಬಿಟ್ಟ ,ಬೆಟ್ಟ, ಬಯಲು, ತೊರೆ,ತೊಯ್ದುಒದ್ದೆ ಒದ್ದೆಯಾಗಿಹೆಣ್ಣಾಗಬೇಕುಹರಿಯುತ್ತಲೇ ಇರಬೇಕು *************************************************