ಹಾಯ್ಕುಗಳು
ಹಾಯ್ಕುಗಳು ಜಯಶ್ರೀ ಭ.ಭಂಡಾರಿ ಬಂದರೆ ನೀನುಬಾಳಿಗೆ ಬೆಳಕಾಗಿಬಾಳುವೆನು ನಾ. ದೂರಾಗಿ ಹೋದೆ.ನಡುನೀರಲಿ ಬಿಟ್ಟು.ಪ್ರಿಯತಮೆಯ. ಅಲೆಗಳಲ್ಲಿಸಾಗರದಿ ನಲಿವುತೀರದ ಮೋಹ. ಕಾಡಬೇಡ ನೀಈ ಹೃದಯ ನಿನ್ನದುತೋರು ಕರುಣೆ. ಮುಂಗಾರು ಮಳೆನಿಲ್ಲದೇ ಸುರಿತಿಹೆಕಾಡುತಿಹೆ ನೀ. ರಾಧೆಯ ನೋವುಕೊಳಲ ನಾದದಿಂದದೂರವಾಯಿತು. ಕೃಷ್ಣ ಸನಿಹಇದ್ದರೆ ಮರೆವಳುರಾಧೆ ತನ್ನ ತಾ ಗೋಪಾಲನಿಗೆಗೋಪಿಕೆಯರ ಆಟಯಮುನೆಯಲಿ ******************
ಗಜಲ್
ಗಜಲ್ ವತ್ಸಲಾ ಶ್ರೀಶ ಕೊಡಗು ಕಲೆಯ ನೆಲೆಗೆ ಒಲವ ಬಳಸಿ ಸೆಳೆದೆಯಲ್ಲ ಗೆಳೆಯಹಲವು ಮಾತು ಗುನುಗಿ ದೂರ ನಿಂತೆಯಲ್ಲ ಗೆಳೆಯ ಕಿವಿಯ ಜುಮುಕಿ ಮುತ್ತಿನಲ್ಲಿ ಹೆಸರ ಬರೆದೆ ಗುಟ್ಟಲಿತುಂಟತನದಿ ಕೆನ್ನೆ ಮುಟ್ಟಿ ಮತ್ತೇರಿದೆಯಲ್ಲ ಗೆಳೆಯ ದೂರದಲ್ಲಿ ಹಾಡನೊಂದು ಕೇಳೆ ಮನವು ಪುಳಕವಿಲ್ಲಿಹಣೆಯ ಮುತ್ತ ನೆನಪು ನೀಡಿ ಕಾಡಿದೆಯಲ್ಲ ಗೆಳೆಯ ಬೆರಳಿಗೊಂದು ಬೆರಳು ಸೇರಿಸಿ ನಾಲ್ಕು ಹೆಜ್ಜೆ ಇರಿಸಿದೆನೂರು ಜನ್ಮ ಜೊತೆಯ ಬೇಡಿ ನಿಂತೆಯಲ್ಲ ಗೆಳೆಯ ಬಿಸಿಯುಸಿರು ಕೊರಳ ತಾಗಿ ಪ್ರೀತಿ ಕವನ ಗೀಚಿದೆಕಣ್ಣಿನಲ್ಲಿ ಪ್ರೇಮ ಬಿಂಬ ಪ್ರತಿಷ್ಠೆಯಾಗಿದೆಯಲ್ಲ […]
ಗಜಲ್
ಗಜಲ್ (ಸಂಪೂರ್ಣ ಮತ್ಲಾ ಗಜಲ್) ಸಿದ್ಧರಾಮ ಹೊನ್ಕಲ್ ಮನಸ್ಸೇಕೋ ಮತ್ತೆ ನೊಂದು ಮೌನದಿ ಕಮರಿಹೋಗಿದೆಯಾಕೋ ಸುಮ್ಮನೇ ಮನಸಲ್ಲೆ ಬೆಂದು ಲೀನವಾಗಿದೆ ಯಾಕೆ ಏನು ಯಾರಿಗಾಗಿ ಇದೆಲ್ಲ ಒಂದು ತಿಳಿಯದಾಗಿದೆಕಾರಣವಿಲ್ಲದೇ ಸಂಕಟ ಆಗುವದೇಕೋ ಅರಿಯದಾಗಿದೆ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರುಚಿ ಸಿಗದಾಗಿದೆಭರಪುರ ಬೆಳೆದ ರೈತನ ಫಸಲು ಹೊಲವೇ ಕದ್ದಂತಾಗಿದೆ ಬಿತ್ತುವದು ಅವನ ಧರ್ಮ ಬೆಳೆ ಪಡೆವುದು ಕರ್ಮವಾಗಿದೆಉಂಡು ಕೊಂಡು ಹೋದ ಲಂಡರದೇ ಬಲು ಹಿತವಾಗಿದೆ ಕೊಚ್ಚೆಯಲ್ಲಿ ಬಿದ್ದ ಮಾಣಿಕ್ಯಕ್ಕೆ ತನ್ನ ಬೆಲೆ ತಿಳಿಯದಾಗಿದೆಹೊನ್ನಸಿರಿ’ ಇರಲಿ ನೋಯಬೇಡ […]
ಅಕಾರಣ ಅಕಾಲ
ಕವಿತೆಯ ಕುರಿತು ಅಕಾರಣ ಅಕಾಲ ನಾಗರೇಖಾ ಗಾಂವಕರ್ ಸಾಹಿತ್ಯದ ನಿಲುವುಗಳು ಭಿನ್ನ ರೀತಿಯಲ್ಲಿ ಎಂದಿಗೂ ಅಭಿವ್ಯಕ್ತಿಗೊಳ್ಳುತ್ತಲೇ ಇರುವುವು. ಸಮಾಜದ ಓರೆಕೋರೆಗಳಿಗೆ ಕನ್ನಡಿ ಹಿಡಿಯುವ ಸಾಹಿತಿಗಳು, ಕವಿಗಳು ತಮ್ಮ ವ್ಯಕ್ತಿತ್ವವನ್ನು ಅಷ್ಟೇ ಶುದ್ಧ ಪಾರದರ್ಶಕತೆಗೆ ಒಗ್ಗಿಕೊಂಡು, ನಡೆದಂತೆ ನುಡಿಯುವ ಛಾತಿಯುಳ್ಳವರಾಗಿರಬೇಕು. ಇಲ್ಲವಾದಲ್ಲಿ ಅದು ಅಪಹಾಸ್ಯಕ್ಕೆ ಗುರಿಯಾದ ಸಂದರ್ಭಗಳಿವೆ. ಹಾಗೇ ಕವಿತೆಯಲ್ಲಿ ಕವಿಯನ್ನು ಹುಡುಕುವ ಪ್ರಯತ್ನ ಸಲ್ಲ ಎಂಬ ವಾದವೂ ಇದೆ. ಆದರೆ ಇದು ಕೂಡಾ ಎಲ್ಲ ಸಂದರ್ಭಗಳಿಗೆ ಸರಿಯಾಗದು. ಕವಿತೆ ಭಾವನೆಗಳ ಪದಲಹರಿ. ಹಾಗಾಗಿ ಅನ್ಯರ ಅನುಭವಗಳ ಮೇಲೆ […]
ಮಧ್ಯಕಾಲ
ಕವಿತೆ ಮಧ್ಯಕಾಲ ಸ್ಮಿತಾ ಭಟ್ ಈ ಶರತ್ ಕಾಲವೆಂದರೆನೆನಪಾಗುವುದುಮದುವೆಯಾಗಿ ವರ್ಷಗಳು ಸಂದಮಧ್ಯಕಾಲದ ಜೋಡಿ . ಇತ್ತ ಪ್ರೇಮವೂ ಇಲ್ಲಅತ್ತ ಪಕ್ವತೆಯೂ ಇಲ್ಲಬರೀ ಒಣ ಹವೆ. ಶರವೇಗದಲಿ ಸರಿದೇ ಹೋದಮಳೆ ಮತ್ತದರ ಸೆಲೆರೆಂಬೆಗಂಟಿದ ಎಲೆಗಳಅಮಾಯಕ ನೋಟಕಳೆದ ಕಿಲ ಕಿಲ ಪ್ರೇಮದ್ದೂ. ಮುಂಜಾವಿಗೆ ಹೊದ್ದ ಶೀಕರಮುದುಡಿಯೇ ಕುಳಿತ ಅಲರುಬಿಸುಪಿಲ್ಲದ ವಿಷಾದ ನಸುಕು. ಕೈ ಚಾಚಿದ ತರುಹಕ್ಕಿ ಕುಳಿತ ಒಲವುಕೊಟ್ಟ ಪುಟ್ಟ ಕಾವು ಅಪ್ಪಿದ ಆಪ್ಯಾಯತೆಗಳಿಗೆಸುಳಿಗಾಳಿಯ ಪರೀಕ್ಷೆಕೊನರದ ಕಾಲದಸ್ಥಬ್ಧ ಭಾವಗಳ ನಕ್ಷೆ.ಹಗೂಽರ ರೂಢಿಯಾಗೇ ಬಿಡುತ್ತದೆಉದುರುವದು ಮತ್ತುಚಿಗುರಿಕೊಳ್ಳುವುದೂ… ******************************
ಹಾಯ್ಕು
ಕವಿತೆಗಳು ಹಾಯ್ಕು ಭಾರತಿ ರವೀಂದ್ರ. 1) ನೆನಪುಮೊದಲ ಮಳೆನೆನಪುಗಳ ಧಾರೆಮನಸ್ಸು ಒದ್ದೆ. 2) ಸ್ವಾಗತಮೂಡಣ ದೊರೆಹಕ್ಕಿಗಳ ಸ್ವಾಗತಹೊಸ ಬದುಕು. 3) ನೆಪಬೀಸೋ ಗಾಳಿಗೆಅವಳದೇ ಧ್ಯಾನವು,ಸೋಕಿದ ನೆಪ. 4) ನಾಚಿಕೆಇಳೆ ನಾಚಿಕೆ :ಕದ್ದು ನೋಡಿದ ರವಿ,ಶಶಿ ಮುನಿಸು 5) ಸೋನೆನವಿಲು ನೃತ್ಯ :ಬೆರಗಾದ ಮುಗಿಲು,ಸುರಿದ ಸೋನೆ. 6) ಗೆಜ್ಜೆಮನ ಮಯೂರ:ನಿನ್ನ ನಗು ಕಂಡಾಗ,ಗೆಜ್ಜೆ ನಾಚಿತು. 7) ಕನ್ನಡಿಕಣ್ಣ ಕನ್ನಡಿ:ತುಂಬೆಲ್ಲ ನಲ್ಲ ನೀನೇ,ಮೌನ ಪ್ರೀತಿಗೆ. 8) ಹರ್ಷಭೂ ತಾಯಿ ಹರ್ಷ:ಹೂವಾಗಿ ಅರಳೈತಿ,ಮಧು ಸಂಭ್ರಮ. 9) ಮುತ್ತುನೀನಿತ್ತ ಮುತ್ತುಮಿಂಚೈತಿ ನೋಡು,ನನ್ನಕಣ್ಣ ಕಾಡಿಗೆ. […]