ಕಾದಂಬರಿ ಕುರಿತು ಚೋಮನ ದುಡಿ ಡಾ.ಶಿವರಾಮ ಕಾರಂತ ತಿಲಕ ನಾಗರಾಜ್ ಹಿರಿಯಡಕ ಚೋಮನ ದುಡಿಯ ಮೋಡಿಗೆ ಮನಸೋತಿರುವೆ… ಯಾವುದೇ ಕೃತಿ ಓದಿದರೂ ನನ್ನನ್ನು ಮತ್ತೆ ಮತ್ತೆ ಕಾಡುವುದು ನೆಚ್ಚಿನ ಸಾಹಿತಿ ಕಾರಂತಜ್ಜರ ‘ಚೋಮನ ದುಡಿ’ ಅಂದಿನ ಕಾಲದ ಕಾರ್ಗತ್ತಲ ಸ್ವರೂಪ, ಆ ಕತ್ತಲನ್ನು ಲೆಕ್ಕಿಸದೆ ಜನರು ಊರ ಜಾತ್ರೆಯನ್ನು ಸಂಭ್ರಮಿಸುತ್ತಿದ್ದ ಪರಿ, ಇಂದು ಹಗಲಿನಂತೆ ಬೆಳಗುವ ರಾತ್ರಿಯ ಕಾಣುವ ನಮನ್ನು ಬೇರಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ. ಚೋಮನ ದುಡಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಮನಸ್ಸಿಗಿಳಿಯುತ್ತವೆ. ನಮಗಿವತ್ತು ಕೇವಲವೆನಿಸುವ ಇಪ್ಪತ್ತು […]
ಕಾದಂಬರಿ ಕುರಿತು ಮಲೆಗಳಲ್ಲಿ ಮದುಮಗಳು ಕುವೆಂಪು ಚಂದ್ರಿಕಾ ನಾಗರಾಜ್ ಹಿರಿಯಡಕ ಮಲೆಯ ಝೇಂಕಾರಗಳಿಗೆ ಕಿವಿಯಾಗುತ್ತಾ… ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅನೇಕ ಕಾದಂಬರಿಗಳು ಜೀವಂತಿಕೆ ಪಡಕೊಂಡಿವೆ. ಅನೇಕ ಸಾಹಿತಿಗಳು ತಮ್ಮ ಕೃತಿಗಳ ಮೂಲಕಾನೇ ಉಸಿರಾಡುತ್ತಿದ್ದಾರೆ. ಅಂತಹ ಮೇರು ಸಾಹಿತಿಗಳಲ್ಲಿ ಪ್ರಮುಖರು ಕುವೆಂಪು. ಪ್ರಕೃತಿಯೊಂದಿಗಿನ ನಂಟಿನಲ್ಲೇ ಸಂಬಂಧಗಳನ್ನು ಅರಳಿಸುತ್ತಾ ಸಾಗಿಸುವ ಶ್ರೇಷ್ಠ ಕವಿ ಕುವೆಂಪು. ಅವರ ಕೃತಿಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ್ದು “ಮಲೆಗಳಲ್ಲಿ ಮದುಮಗಳು”. ಕಣ್ಣಿಗೆ ದಣಿವೇ ನೀಡದೆ ಓದಿಸಿಕೊಂಡು ಹೋಗುವ ಕಾದಂಬರಿ. ಮಲೆಗಳಲ್ಲಿ ಕಾಡುವ ಮದುಮಗಳ ಬರಹ ಕಾವ್ಯವಿದು.ಕಾದಂಬರಿಯ […]
ಪುಸ್ತಕ ವಿಮರ್ಶೆ
ಪುಟ್ಟ ಗೌರಿ ಪುಟ್ಟ ಗೌರಿ : ಕುರಿತು ಕೆಲವು ಮಾತುಗಳು ಹೊಟ್ಟೆಯೊಳಗಡೆ ಗೋರಿ ಕಟ್ಟಿಕೊಂಡಿರುವವರೆ, ಹೊಡೆಯಲೆತ್ತಿರುವ ಕೈ ಹೊತ್ತಿ ಹೊಗೆಯುವೆದೆ, ವಿಷವುಗುಳಿ ನಗುವ ನಾಲಿಗೆ, ಎಲೆಲೇ, ತಡೆಯಿರಿ, ತಡೆಹಿಡಿಯಿರಿ: ಮಗು ನಗುತ್ತಿದೆ, ಮಗು ಆಡುತ್ತಿದೆ. ( ಒಳ್ಳೆತನ ಸಹಜವೇನಲ್ಲ – ಎಂ ಗೋಪಾಲಕೃಷ್ಣ ಅಡಿಗ ) ಮೇಲಿನ ಸಾಲುಗಳು ಪ್ರತೀಕ್ಷಣವೂ ಎಚ್ಚರಿಸುವ, ಒಂದಷ್ಟು ಅಸಹಜ ಕಾರ್ಯಗಳನ್ನು ಒಳಗಿಂದ ತಡೆವಂತೆ ಮಾಡುವ ಕಾರ್ಯವನ್ನು ಮಾಡುತ್ತಾ ಜಾಗೃತವಾಗಿಟ್ಟಿದೆ. ದುಷ್ಟ ಮನಸ್ಥಿತಿ ಅಡಿಗರು ಬರೆದು ಹಾದಿ ಕಾಣಿಸಿಕೊಟ್ಟ ನಂತರೂ ಬದಲಾಗದಿರುವುದು […]
ಕಾದಂಬರಿ ಕುರಿತು ಕರ್ವಾಲೊ ಪೂರ್ಣಚಂದ್ರ ತೇಜಸ್ವಿ ಅರುಣಾ ರಾವ್ [10:21 AM, 11/7/2020] ARUNA RAO: ಪೂರ್ಣ ಚಂದ್ರ ತೇಜಸ್ವಿ ನನ್ನ ಯಾವತ್ತಿನ ಫೇವರೇಟ್ ರೈಟರ್. ಅವರ ಎಲ್ಲ ಕಾದಂಬರಿಗಳೂ ನನ್ನ ಬಳಿ ಇವೆ ಎಂದು ಹೇಳಿಕೊಳ್ಳಲು ನನಗೆ ಖುಷಿ. ಪ್ಯಾಪಿಲಾನ್, ಚಿದಂಬರ ರಹಸ್ಯ, ಅಬಚೂರಿನ ಫೋಸ್ಟ ಆಫೀಸ್, ತಬರನ ಕತೆ, ಅಡ್ವೆಂಚರ್ ಸೀರೀಸ್, ಅಲೆಮಾರಿ ಅಂಡಮಾನ್ ಎಲ್ಲವೂ ನನ್ನ ಪುಸ್ತಕ ಖಜಾನೆಯನ್ನು ಶ್ರೀಮಂತಗೊಳಿಸಿವೆ.ತೇಜಸ್ವಿಯವರ ಕಾದಂಬರಿಗಳು ಕೇವಲ ಮನರಂಜನಾ ಸಾಧನವಾಗಿರದೆ ಬುದ್ದಿಗೆ, ಮಂಥನಕ್ಕೆ ಆಹಾರವನ್ನು ಒದಗಿಸುತ್ತದೆ.ತೀರ ಇತ್ತೀಚೆಗಷ್ಟೇ […]
ಲಹರಿ ಅಕ್ಕ , ನೀನು ಯಾರಿಗೆ ಮಗಳಾಗಿದ್ದೆ ? ವೀಣಾ ದೇವರಾಜ್ ಮಗಳೇ ನೀನು ಯಾರಿಗೆ ಮಗಳಾಗಿದ್ದೆ. ಮಗಳ ಪ್ರೀತಿ ನಿನಗೆ ಗೊತ್ತೇ. ಅದನ್ನು ಎಂದಾದರೂ ಅನುಭವಿಸಿದ್ದೀಯಾ. ಹೇಗಿರಬಹುದೆಂದು ಯೋಚಿಸಿದ್ದೀಯ ಅಥವಾ ಬಯಸಿದ್ದೆಯ? ಒಮ್ಮೆ ಯೋಚಿಸಿ ನೋಡೋಣ… ಹಾಂ,ಸಿನೆಮಾದಲ್ಲಿ,, ಪುಟಾಣಿ ಪಾಪು , ಅದೇನು ಚೆಂದ,ಅಪ್ಪ ಅಮ್ಮನ ಮುದ್ದು ಮಗು ತಮ್ಮಿಷ್ಟದಂತೆ ಅದನ್ನು ಸಿಂಗರಿಸಿದ್ದಾರೆ ನೋಡಿದವರೆಲ್ಲಿ ಕಣ್ಣುಬಿಟ್ಟು ದೃಷ್ಟಿ ತಾಗುವುದೋ ಎಂದು ದೃಷ್ಟಿಬೊಟ್ಟನ್ನೂ ಇಟ್ಟಿದ್ದಾರೆ. ಒಂದು ನಿಮಿಷವೂ ಒಂಟಿಯಾಗಿ ಬಿಟ್ಟಿಲ್ಲ. ಇನ್ನೇನು ಶಾಲೆಗೆ ಸೇರಿಸುವ ವಯಸ್ಸು […]
ಕಾದಂಬರಿ ಕುರಿತು` ಬೆಟ್ಟದ ಜೀವ ಡಾ.ಶಿವರಾಮ ಕಾರಂತ ಶಾಂತಲಾ ಮಧು ನನ್ನ ನೆಚ್ಚಿನ “ಬೆಟ್ಟದ ಜೀವ”ಕಾದಂಬರಿಯ ಒಂದು ನೋಟ” “”ಬಾನಿನಲ್ಲಿ ಸೂರ‍್ಯನು ತುಸುವಾಗಿ ಮೇಲಕ್ಕೇರುತ್ತಾನೆ- ಎಂದಂತೆ ಒಮ್ಮೆಗೇ ಅವನ ರಶ್ಮಿಗಳು ಬೆಟ್ಟದ ತೆಂಕು ಮಗ್ಗುಲಿನ ಹಸುರನ್ನೆಲ್ಲ ಬೆಳಕಿಂದ ತೊಯ್ಯಿಸಿಬಿಟ್ಟವು! ಆ ಅಪೂರ್ವದ ನೋಟವು ಎಂದೂ ಮರೆಯುವಂಥದಲ್ಲ. ಆ ತನಕ- ಕಠಿಣವೂ ನಿರ‍್ದಾಕ್ಷಿಣ್ಯವೂ ಆಗಿ ನಿಂತ ಬೆಟ್ಟಕ್ಕೆ ಒಂದು ಬದಿಯಲ್ಲಿ ಮೃದುವಾದ ಹೃದಯವಿದ್ದಂತೆ ಕಂಡಿತು. ನೋಡುತ್ತಾ ನಿಂತಂತೆ, ಕೆಂಪಡರಿದ ಬಾನಿನ ಕಣ್ಣು ಕ್ರೂರವಾಗುತ್ತ ಬೆಂದ ಕಬ್ಬಿಣವನ್ನು ಕರಗಿಸಲು ಬಂದಂತೆ […]
ಕಾದಂಬರಿ ಕುರಿತು ಕರ್ವಾಲೊ ಪೂರ್ಣಚಂದ್ರ ತೇಜಸ್ವಿ ಚೈತ್ರಾ ಶಿವಯೋಗಿಮಠ “ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ!” ಬರವಣಿಗೆ ಕೊಡುವ ಆನಂದಕ್ಕಿಂತ ಓದು ಕೊಡುವ ಸುಖವೇ ಆಪ್ಯಾಯಮಾನ. ಅಗಾಧವಾದ ಪ್ರಕಾರಗಳನ್ನು ಹೊಂದಿರುವಂತಹ ಸಾಹಿತ್ಯ, ಕನ್ನಡ ಸಾಹಿತ್ಯ. ಜನರಿಂದ ಹೆಚ್ಚು ಓದಲ್ಪಡುವ ಪ್ರಕಾರವೆಂದರೆ ಅದು ಕಾದಂಬರಿಗಳು. ಸಮಯ ಸವೆಸುವುದಕ್ಕೊ, ಜ್ಞಾನಾರ್ಜನೆಗೊ, ಮನೊರಂಜನೆಗೋ ಹೀಗೇ ವಿವಿಧ ಕಾರಣಕ್ಕಾಗಿ ಜನ ಕಾದಂಬರಿಗಳನ್ನು ಓದುತ್ತಾರೆ. ತೇಜಸ್ವಿಯವರ ಕಾದಂಬರಿಗಳ ವೈಶಿಷ್ಟ್ಯವೆಂದರೆ ಮನೋರಂಜನೆಯ ಜೊತೆಗೆ ವಿಜ್ಞಾನವನ್ನು, ಪ್ರಪಂಚ ಜ್ಞಾನವನ್ನು ವಿಫುಲವಾಗಿ ನೀಡುತ್ತವೆ. ತೇಜಸ್ವಿಯವರ ಕಾದಂಬರಿಗಳಲ್ಲಿ ಎಲ್ಲರೂ ಸಾಮಾನ್ಯವಾಗಿ ಮೊದಲು […]