ಫಕೀರ್ ಸೂಫಿ ಸಂತ ಸೈಯದ್ ಹಜರತಶಾ ಕಾದರಿ..!

ಲೇಖನ

ಫಕೀರ್ ಸೂಫಿ ಸಂತ ಸೈಯದ್ ಹಜರತಶಾ ಕಾದರಿ..!

ಸೈಯದ್ ಹಜರತಶಾ ಕಾದರಿಯವರು ಸೂಫಿ ಸಂತರಲ್ಲೊಬ್ಬರು. ಇವರು ಆಗಿನ ಧಾರವಾಡ ಜಿಲ್ಲೆಯ ಈಗಿನ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹುಲಗೂರಲ್ಲಿ ನೆಲೆ ಕಂಡುಕೊಂಡವರು. ಇವರ ಜನನ, ಬಾಲ್ಯ, ಬದುಕು ಹಾಗೂ ಈ ಸಂತರ ಮರಣಗಳೆಲ್ಲವೂ ಪೂರ್ಣ ವಿಶಿಷ್ಠವಾದವುಗಳು ಆಗಿದ್ದವು…

ಸೈಯದ್ ಹಜರತಶಾ ಕಾದರಿಯವರು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಬಂಕಾಪುರದಲ್ಲಿ ಜನಿಸಿದವರು. ಇವರ ತಂದೆಯ ಹೆಸರು ಸೈಯದ್ ಖಾದರಬಾಶಾ ಕಾದರಿ ಬಿಜಾಪೂರ. ತಾಯಿಯ ಹೆಸರು ಸೈಯದಾ ವಲಿಮಾಬೀಬಿ. ಸೈಯದ್ ವಲಿಮಾಬೀಬಿಯವರು ಅಲ್ಲಾವುದ್ದೀನಶಾ ಕಾದರಿಯವರ ಹಿರಿಮಗಳು. ಸೈಯದ್ ಹಜರತಶಾ ಕಾನರಿಯವರು ಇನ್ನೂ ತಾಯಿಯ ಹೊಟ್ಟೆಯಲ್ಲಿ ಇರುವಾಗ ತಂದೆ ಸೈಯದ್ ಖಾದರಬಾಶಾ ತೀರಿಕೊಂಡರು. ತಾಯಿ ಸೈಯದ್ ವಲಿಮಾಬೀಬಿಯವರು ಸೈಯದ್ ಹಜರತಶಾ ಕಾದರಿಯವರಿಗೆ ಜನ್ಮ ಕೊಟ್ಟು ಅವರೂ ತೀರಿದರು. ಹೀಗೆ ಸೈಯದ್ ಹಜರತಶಾ ಕಾದರಿಯವರು ಇನ್ನೂ ಕೂಸು ಇರುವಾಗಲೇ ತಂದೆ-ತಾಯಿ ತೀರಿದರು. ಇಂತಹ ಕಡು ದೃಶ್ಯಗಳನ್ನು ಕಂಡು ಕೂಸು ಸೈಯದ್ ಹಜರತಶಾ ಕಾದರಿಯವರ ತಾಯಿಯಾದ ಸೈಯದ್ ವಲಿಮಾಬೀಬಿಯವರ ತಂಗಿಯರು ಮತ್ತು ಅಣ್ಣತಮ್ಮಿಂದಿರು ಬಹು ದುಃಖತರಾದರು. ಅವರ ಮನೆಯೆಲ್ಲ ಶೋಕಸಾಗರದಲ್ಲಿ ಮುಳುಗಿತು…

ಆದರೆ ಕೂಸು ಅಂದರೆ ಸೈಯದ್ ಹಜರತಶಾ ಕಾದರಿಯವರು ಬಹು ಸುಂದರವಾಗಿದ್ದರೂ ಈ ಮಗುವಿನ ಕಡೆಗೆ ಈ ಲಕ್ಷ್ಹವಹಿಸದೇ ಹೋದರು ಸೈಯದ್ ವಲಿಮಾಬೀಬಿಯವರ ತಂಗಿಯರು ಮತ್ತು ಅಣ್ಷತಮ್ಮಂದಿರು…

ಮೇಲಿಂದ ಮೇಲೆ ಒದಗಿ ಬರುತ್ತಿದ್ದ ದುಃಖ-ದುಮ್ಮಾನ ಮತ್ತು ದುರ್ಘಟನೆಗಳಿಂದ ಬೇಸತ್ತು ಬೆಂಡಾಗಿ ಹೋಗಿದ್ದರು ಸೈಯದ್ ಹಜರತಶಾ ಕಾದರಿಯವರ ತಾಯಿಯ ತಂಗಿಯರು ಮತ್ತು ಅಣ್ಣತಂಮ್ಮಂದಿಯರು.

ಹೀಗಿರುವಾಗ ಕೂಸಾದ ಸೈಯದ್ ಹಜರತಶಾ ಕಾದರಿಯವರನ್ನು ಸೈಯದ್ ವಲಿಮಾಬೀಬಿಯವರ (ಸೈಯದ್ ಹಜರತಶಾ ಕಾದರಿಯವರ ತಾಯಿ) ಅಣ್ಣನಾದ ಒಬ್ಬ ಸೈಯದ್ ಹಜರತಶಾ ಕಾದರಿಯವರವರನ್ನು ಇನ್ನೂ ಕೂಸು ಇರುವಾಗಲೇ ಹಿತ್ತಲದಲ್ಲಿದ್ದ ಒಂದು ಸೀತಾಫಲದ ಗಿಡದ ಬುಡದಲ್ಲಿ ಮಲಗಿಸಿ ಬಂದು ಬಿಟ್ಟ. ತದನಂತರ ಇವರ ಅಂದರೆ ಸೈಯದ್ ಹಜರತಶಾ ಕಾದರಿಯವರ ತಾಯಿ ದಿವಸಕಾರ್ಯ ಮುಗಿಸಿದರು. ಅಲ್ಲಿಯವರೆಗೂ ಈ ಸೈಯದ್ ಹಜರತಶಾ ಕಾದರಿ ಕೂಸು ಅಲ್ಲಿಯೇ ಸೀತಾಫಲದ ಗಿಡದ ಬುಡದಲ್ಲಿಯೇ ಮಲಗೇ ಇತ್ತು. ವಲಿಮಾಬೀಬಿಯವರ ದಿವಸ ಕಾರ್ಯವೆಲ್ಲ ಮುಗಿದು ಎರಡು-ಮೂರು ದಿನಗಳಾದರೂ ಆ ಕೂಸಿನತ್ತ ಇವರ ಗಮನವೇ ಇರಲೇ ಇಲ್ಲ. ನಾಲ್ಕನೇ ದಿನ ಫಾತೀಮಾಬೀಬಿ ಎಂಬವರು ಹಿತ್ತಲಿಗೆ ಹೋದರು. ಅಲ್ಲಿ ಹಸುಗೂಸು ಸೈಯದ್ ಹಜರತಶಾ ಕಾದರಿಯವರ ನೆಲವನ್ನೇ ಹಾಸಿಗೆ, ಆಕಾಶವೇ ಹೊದುಗೆ ಮಾಡಿಕೊಂಡು ಸೃಷ್ಟಿಕರ್ತನ ಆಶ್ರಯ ಪಡೆದು ನಸುನಗುತ್ತ ಮಲಗಿತ್ತು. ಆಗ ಆ ಸೈಯದ್ ಫಾತೀಮಾಬೀಬಿ ದೃಷ್ಟಿ ಆ ಮಗುವಿನತ್ತ ಹೊರಳಿತು. ಆಗ ಆ ಫಾತೀಮಾಬೀಬಿ ಲಗುಬಗೆಯಿಂದ ಆ ಮಗುವನ್ನು ಎತ್ತಿಕೊಂಡು ಎದೆಗೆ ಅವಚಿಕೊಂಡು ಮೇರೆ ಲಾಲ (ನನ್ನ ಕಂದ) ಎಂದು ಹೃದಯದಿಂದಲೇ ಉಕ್ಕೇರಿ ಬಂದ ಕಣ್ಣೀರನ್ನು ಸುರಿಸುತ್ತಾ ನಿನ್ನ ತಾಯಿ ಇದ್ದಿದ್ದರೆ ಇಂತಹ ಸ್ಥಿತಿಯಲ್ಲಿ ಬಿಡುತ್ತಿದ್ದಳೆ ಎಂದು ಗೋಳಾಡುತ್ತ ಒಳಗೊಯ್ದಳು ಮಗುವನ್ನು.

ಮಗು ಅಂದರೆ ಸೈಯದ್ ಹಜರತಶಾ ಕಾದರಿಯು ಮೂರ್ನಾಲ್ಕು ದಿನಗಳಿಂದ ಹಾಲಿಲ್ಲದೇ ಹಾಗೇ ನಸುನಗುತ್ತ ಹಿತ್ತಲಲ್ಲೇ ಮಗಿತ್ತು.

ಆದರಿಂದ ಹಾಲುಣಿಸಲು ಫಾತೀಮಾಬೀಬಿ ಪ್ರಯತ್ನ‌ ಮಾಡಿದಳು. ಹುಹುಂ ಹಾಲನ್ನು ಮಗು ಸೈಯದ್ ಹಜರತಶಾ ಕಾದರಿಯು ಹಾಲುಣುಲೇ ಇಲ್ಲ. ಮತ್ತೆ ಒಂದಿಬ್ಬರು ಪ್ರಯತ್ನಿಸಿದರು. ಆದರೂ ಮಗುವಿಗೆ ಹಾಲು ದಕ್ಕಲೇ ಇಲ್ಲ.

ಆಗ ಎಲ್ಲರೂ ಚಿಂತಾಕ್ರಾಂತರಾದರು ಮಗುವಿಗೆ ಹಾಲುಣಿಸಲು ಯಾರನ್ನು ತರಬೇಕೆಂದು. ಹೀಗೆಯೇ ಮಗುವಿನ ಮಾವ ಅಂದರೆ ಸೋದರಮಾವ ಮಗುವನ್ನು ಎತ್ತಿಕೊಂಡನು. ಮಗು ಮಾವನ ಮೊಲೆಗೆ ಬಾಯಿಹಚ್ಚಿತು. ಆಗ ಲೊಚಲೊಚನೆ ಹಾಲು ಮಾವನ ಮೂಲೆಗಳಿಂದ ಬರಲಾರಂಭಿಸಿತು. ಇಂತಹ ವಿಚಿತ್ರ ಘಟನೆ ನಡೆಯಿತು. ಹೀಗೆಯೇ ಮಗು ಮಾವನ ಮೊಲೆಹಾಲನ್ನು ಕುಡಿದೇ ಬೆಳೆಯತೊಡಗಿದ್ದು ವಿಚಿತ್ರವಾದ ಘಟನೆ ನಡೆಯಿತು…

ಪ್ರಾರಂಭದಿಂದಲೂ ಹೀಗೆಯೇ ವಿಲಕ್ಷಣವಾಗಿ ಬೆಳೆದು, ದೊಡ್ಡವನಾದ ಸೈಯದ್ ಹಜರತಶಾ ಕಾದರಿಯು. ಸೋದರ ಮಾವಂದಿರಾದ ಸೈಯದ್ ಆಬ್ದುರ್ರಜಾಕ ಕಾದರಿಯವರ ಆಶ್ರಯದಲ್ಲೇ ಮಗುವಿನ ಬಾಲ್ಯದ ದಿನಗಳುರುಳಿದವು. ಸೋದರ ಮಾವಂದಿರಿಂದ ಮುಂದೆ ಪಾಠ ಕಲಿಯತೊಡಗಿದ ಸೈಯದ್ ಹಜರತಶಾ ಕಾದರಿಯವು. ಪ್ರಾಥಮಿಕ ಮತ್ತು ಧಾರ್ಮಿಕ ಶಿಕ್ಷಣವನ್ನು ಸೋದರ ಮಾವಂದಿರಿಂದ ಕಲಿತು ಪೂರ್ಣಗೊಂಡ. ಯಾವಾಗ ಹನ್ನೆರಡು ವರ್ಷದವನಾದನೋ ಆವಾಗ ಸೈಯದ್ ಹಜರತಶಾ ಕಾದರಿಯು ಆಟ-ಪಾಠ ನಿತ್ಯದ ಕೆಲಸವಾಯಿತು.

ಒಂದು ದಿನ ಸೈಯದ್ ಹಜರತಶಾ ಕಾದರಿಯು ಬೀದಿಯಲ್ಲಿ ಸುತ್ತುತ್ತಿರುವಾಗ ಅಲ್ಲಿ ಹಾಯ್ದು ಹೋಗುವ ಸೀಪಾಯಿಗಳನ್ನು ನೋಡಿದ. ಅವರು ಖಾಕಿ ಉಡುಪು ಧರಿಸಿ ತಲೆಯ ಮೇಲೆ ಮುಂಡಾಸು ಧರಿಸಿ ಅವರು ಹೋಗುವುದು ಶೋಭಿಸುತ್ತಿತ್ತು. ಅವರ ಉಡುಪಿನ ಮೇಲೆ ಶತ್ತ್ರಸ್ತಗಳೊಂದಿಗೆ ಆಡಂಬರದಿಂದ ಹೆಜ್ಜೆ ಹಾಕುತ್ತಿರುವುದನ್ನು ಕಂಡ ಸೈಯದ್ ಹಜರತಶಾ ಕಾದರಿಗೆ ಆಡಂಬರದ ಕಡೆಗೆ ಮನಸ್ಸು ಹೊರಳಿತು. ಆ ಸಿಪಾಯಿಯವಂತಯೇ ಪೋಷಕು ಧರಸಿ ಊರನ್ನೆಲಾ‌ ಸುತ್ತಿ ಬಂದ ಸೈಯದ್ ಹಜರತಶಾ ಕಾದರಿಯು. ಮನೆಗೆ ಬಂದೊಡನೆ ಸೋದರಮಾವ ಅಬ್ದುರ್ರಜಾಕ ಕಾದರಿಯವರು ಸೈಯದ್ ಹಜರತಶಾ ಕಾದರಿಯವರ ಆ ಪೋಷಾಕು ನೋಡಿ ಬೆರಗಾದರು. ಆಗ ಅವರ ಕಣ್ಣಿನಿಂದ ಕಂಬನಿ ಉದುರತೊಡಗಿತು.

ಆಗ ಸೈಯದ್ ಹಜರತಶಾ ಕಾದರಿಯು ಕೇಳಿದ ಮಾವನವರೆ ಏಕೆ ಅಳತೊಡಗಿದಿರಿ ಎಂದು.

ಆಗ ಮಾವ ಅಬ್ದುರ್ರಜಾಕ ಕಾದರಿಯವರು ಹೇಳುತೊಡಗಿದರು. ಮಗನೇ ನಮ್ಮಂತಹ ಫಕೀರ್ ರರಿಗೆ ಈ ತರದ ಉಡುಪು ಭೂಷಣವಲ್ಲ.ನಮಗೆ ಕಂಬಳಿಯೇ ಲೇಸು. ಲೆಪ್ ರೈಟ್ ನಮಗೆ ಬೇಡ. ಸರಳತೆಯ ಉಠ್ ಬೈಠ್ ನಮಗೆ ಬೇಕು. ಇದರಲ್ಲಿಯೇ ನಮಗೆ ತೃಪ್ತಿ ಇದೆ. ಆಡಂಬರದ ಉಪಕರಣ, ಸಾಮಗ್ರಿಗಳು ಬೇಡ. ಫಕೀರರಂತಹ ಸುಗಮ ವರ್ತನೆ ನಮಗೆ ಬೇಕಾಗಿದೆ. ನಮ್ಮ ಸಲುವಾಗಿ ನಾವೇ ಧಾನ್ಯ ಸಂಗ್ರಹಿಸಬೇಕು. ನಮಗೆ ಈ ಭೂಮಿಯೇ ಹಾಸಿಗೆ, ಗಿಡದೆಲೆಯೇ ಹೊದಿಗೆ. ಅಡವಿ ಗಿಡಮೂಲಿಕೆಯೇ ನಮ್ಮ ಆಹಾರ. ಇದರ ಹೊರತು ಅದ್ಯಾವುದೂ ನಮಗೆ ಬೇಡ. ಹೀಗೆಯೇ ಫಕೀರ್ ನ ಬದುಕಿನ ಲಕ್ಷಣಗಳನ್ನು ತಿಳಿಹೇಳಿದರು ಮಾವ ಅಬ್ದುರ್ರಜಾಕ ಕಾದರಿಯವರು.

ನೀವು ಹಜರತ್ ಪೈಗಂಬರ್ ರ ಮಗಳ ಸಂತತಿ. ಆದರೆ ಹಜರತ್ ಮೌಲಾ ಅಲಿಯವರ ಮಕ್ಕಳ ಸಂತತಿಯಲ್ಲಿದ್ದೀರಿ. ಅವರ ಪಕ್ಷ ವಹಿಸಬೇಕಾಗಿತ್ತು. ಪರಂತು ನೀವು ನನ್ನ ಹತ್ತಿರ ನಿರಾತಂಕವಾಗಿ ಬಂದಿರುವಿರಲ್ಲ ಎಂದು ದುಃಖಿತ ಹೃದಯದಿಂದ ಅಂದರು. ಆ ಮರುಕ್ಷಣದಲ್ಲಿಯೇ ಸೈಯದ್ ಹಜರತಶಾ ಕಾದರಿಯವರು ತಮ್ಮ ಆಡಂಬರದ ದಿರಿಸು ತೆಗೆದೊಗೆದರು. ನಮ್ರತೆಯಿಂದ ಮಾವ ಅಬ್ದುರ್ರಜಾಕ ಕಾದರಿಯವರಿಗೆ ಹೇಳಿದರು. ಮಾವನವರೇ ನನಗೆ ಜ್ಞಾನನೋದಯ ಮಾಡಿಸಿದಿರಿ. ನಿಮ್ಮ ಉಪದೇಶದಂತೆಯೇ ನಡೆಯುವೆ. ಹಾಗೆ ಸೈಯದ್ ಹಜರತಶಾ ಕಾದರಿಯವರು ಜ್ಞಾನೋದಯಗೊಳ್ಳುತ್ತಿದಂತೆಯೇ  ಅವರಿಗೆ ಆಗಲೇ ಸೈಯದ್ ಅಬ್ದುರ್ರಜಾಕ ಕಾದರಿಯವರು ಖಿಲಾಫತ್ ಅಂದರೆ ದೀಕ್ಷೆ ಕೊಟ್ಟರು. ಹಾಗೂ ಕಾದರಿಯವರನ್ನು ಆಶೀರ್ವದಿಸಿದರು ಅಬ್ದುರ್ರಜಾಕ ಕಾದರಿಯವರು…

ಮಾವ ಅಬ್ದುರ್ರಜಾಕ ಕಾದರಿಯವರು ಸೈಯದ್ ಹಜರತಶಾ ಕಾದರಿಯವರ ಧರ್ಮ ಗುರು…

ಹೀಗೆಯೇ ಸೈಯದ್ ಹಜರತಶಾ ಕಾದರಿಯರಿಗೆ ತಮ್ಮ ಆತ್ಮ ಮತ್ತು ಪರಮಾತ್ಮನ ಅರಿವು ಆಯಿತು.

ಯಾವನು ತನ್ನ ಆತ್ಮವನ್ನು ಗುರುತಿಸುವನೋ‌ ಅವನೇ ದೇವರನ್ನೂ ಗುರುತಿಸುವನು.

ಯಾವನು ಅರಿಷಡವರ್ಗಗಳನ್ನು ಅಂದರೆ ಕಾಮ, ಕ್ರೋಧ, ಮೋಹ, ಲೋಭ, ಮದ ಮತ್ತು ಮತ್ಸರಗಳನ್ನು ಮೆಟ್ಟಿ ನಿಲ್ಲುವುನೋ ಆವಾಗ ಮಲಿನ‌ ಪದಾರ್ಥಗಳಿಂದ ದೂರವಾಗಿ ನಿರ್ಮಲವಾಗುವುನು. ಮಾನವ ಜನ್ಮದ ಮುಖ್ಯ ಉದ್ದೇಶಗಳಾದರೂ ಹೀಗಿರುವುವು– ೧) ತನ್ನನ್ನು ತಾನು ಅರಿಯುವುದು, ೨) ಜನರ ಹಕ್ಕುಬಾದ್ಯಗಳನ್ನು ಅರಿತುಕೊಂಡು ಜೀವನ ನಡೆಸುವುದು, ೩) ತನ್ನನ್ನು ನಿರ್ಮಾಣ ಮಾಡಿದ ಜಗದೀಶನನ್ನು ಅರಿಯುವುದು. ಇವುಗಳನ್ನು ಪಾಲಿಸಿದರೆ ಸತ್ಯಜ್ಞಾನದ ಅರಿವು ಸುಗಮವಾಗುವುದು. ಹೀಗೆಯೇ ಹೇಳುತ್ತಲೇ ಹೋಗಿದ್ದಾರೆ ಸೈಯದ್ ಹಜರತಶಾ ಕಾದರಿಯವರು…

ಮುಂದೆ ಸೈಯದ್ ಹಜರತಶಾ ಕಾದರಿಯವರು ತಮ್ಮ ಮಾವನವರಾದ ಸೈಯದ್ ಅಬ್ದುರ್ರಜಾಕ ಕಾದರಿಯವರ ಮಗಳು ಸೈಯದ್ ಮರಿಯಂ ಬೀಬಿಯವರನ್ನು ಮದುವೆ ಆಗುತ್ತಾರೆ. ಮಾವ ಸೈಯದ್ ಅಬ್ದುರ್ರಜಾಕ ಕಾದರಿಯವರು ಇವರಿಗೆ ಸೋದರಮಾವನೂ ಹೌದು. ಧರ್ಮ ಗುರುವೂ ಹೌದು. ಅಲ್ಲದೇ ಮಗಳು ಮರಿಯಂ ಬೀಬಿಯವರ ತಂದೆ ಅಂದರೆ ಸೈಯದ್ ಹಜರತಶಾ ಕಾದರಿಯವರಿಗೆ ಮಗಳು ಕೊಟ್ಟವರೂ ಹೌದು.

ನಂತರ ಸೈಯದ್ ಹಜರತಶಾ ಕಾದರಿಯವರಿಗೆ ತಮ್ಮ ಕಕ್ಕಂದಿರ ಸಂದರ್ಸಿಸಿ ಬರುವ ಅಪೇಕ್ಷೆಯಂತೆ ಮಾವನವರ ಅಪ್ಪಣೆಯಂತೆ ಬಿಜಾಪುರಕ್ಕೆ ಹೋಗಿ‌ ಬರುವ ಅನುವಾಗಿ ತಮ್ಮ ಕಕ್ಕಂದಿರ ಕಂಡು ಬರುತ್ತಾರೆ. ಹಾಗೆಯೇ ಮತ್ತೊಬ್ಬ ಕಕ್ಕನಾದ ಸೈಯದ್ ದಸಾವಲಿ ಕಾದರಿಯವರನ್ನು ಭೇಟಿ ಮಾಡಲು ಅದೇ ಬಿಜಾಪೂರ ಜಿಲ್ಲೆಯ ಉಕ್ಕಲಿ ಎಂಬ ಗ್ರಾಮಕ್ಕೆ ಹೋಗಿ ಬರುವರು…

ಅಲ್ಲಿಂದ ಮುಂದೆ ತಿರುಗಿ ಶಿಗ್ಗಾವಿ-ಸವಣೂರ ತಾಲೂಕು ಬಂಕಾಪುರಕ್ಕೆ ಬರುವರು. ಬಂಕಾಪುರಕ್ಕೆ ಬಂದು ತಮ್ಮ ಮಾವನವರಾದ ಸೈಯದ್ ಅಬ್ದುರ್ರಜಾಕ ಕಾದರಿಯವರಿಗೆ ಭೇಟಿಯಾಗುವರು…

ಅಲ್ಲಿಂದ ಮುಂದೆ ಸೈಯದ್ ಹಜರತಶಾ ಕಾದರಿಯವರು ಹೇಳದೇಕೇಳದೇ ಕಾಣೆಯಾಗುತ್ತಾರೆ. ಯಾವಾಗಲೂ ದೇವರ ಧ್ಯಾನದಲ್ಲಿ ಇರುತ್ತಿದ್ದ ಸೈಯದ್ ಹಜರತಶಾ ಕಾದರಿಯವರು ತಮ್ಮ ವಾಸಸ್ಥಳವನ್ನು ಬಿಟ್ಟು ಬಂಕಾಪುರ ಮತ್ತು ಸವಣೂರ ನಡುವೆ ಬರುವ ಹುರುಳಿಕೊಪ್ಪಿ ಬೆಟ್ಟಕ್ಕೆ ತೆರಳುವರು. ಬೆಟ್ಟದ ಗುಹೆಯೇ ತಮ್ಮ ಏಕಾಂತಕ್ಕೆ ಯೋಗ್ಯವಾದ ಸ್ಥಳವೆಂದು ಅಲ್ಲಿಯೇ ತಮ್ಮ ಬಿಡಾರವನ್ನು ಹೂಡುವರು. ಸೈಯದ್ ಹಜರತಶಾ ಕಾದರಿಯವರು ಹುರಳಿಕುಪ್ಪಿ ಬೆಟ್ಟದ ಗುಹೆಯಲ್ಲಿ ಕೂತುಕೊಂಡಿದ್ದ ಸಂಗತಿ ಯಾರಿಗೂ ತಿಳಿಯಲಿಲ್ಲ. ಅವರ ಶಿಷ್ಯರು ಸೈಯದ್ ಹಜರತಶಾ ಕಾದರಿಯವರನ್ನು ಗುಡ್ಡ, ಬೆಟ್ಟ, ಕಾಡು-ಮೇಡನ್ನೆಲ್ಲ ಹುಡುಕಿ ಸುಸ್ತಾದರು. ಕಡೆಗೆ ಶಿಷ್ಯರೆಲ್ಲ ತಮ್ಮ ಮನೆಗೆ ಮರಳಿದರು.

ಹೀಗೆಯೇ ಈ ಆಂದೋಲನದಲ್ಲಿ ಪೂರ್ಣ ಏಳು ವರ್ಷಗಳು ಗತಿಸಿದವು. ತದನಂತರ ಹುರುಳಿಕುಪ್ಪಿಯ ಗುಹೆಯಿಂದ ಸೈಯದ್ ಹಜರತಶಾ ಕಾದರಿಯವರು ಹೊರಬಂದರು. ಕೈಕಾಲಿನ ಉಗುರುಗಳು ಬೆಳೆದಿದ್ದವು. ತಲೆ ಮೇಲಿನ ಕೂದಲು ಚದುರಿದ್ದವು.ಇವರು ಗುಹೆಯಿಂದ ಹೊರಗೆ ಬಂದಾಗ ಸಮೀಪದಲ್ಲಿಯೇ ಒಬ್ಬ ಹಿಂದೂವೊಬ್ಬಳು ದನ ಕಾಯುತ್ತಿದ್ದಳು. ಸೈಯದ್ ಹಜರತಶಾ ಕಾದರಿಯವರನ್ನು ಕಂಡು ವಿಧೇಯತೆಯಿಂದ ಅವಳು ನಮಸ್ಕರಿಸಿದಳು. ಸೈಯದ್ ಹಜರತಶಾ ಕಾದರಿಯವರು ಆಕೆಯ ಮೇಲೆ ಕೃಪೆ ತೋರಿದರು. ತಾಯಿ ನನಗೆ ಬಹಳ ಹಸಿವೆಯಾಗಿದೆ ಮಜ್ಜಿಗೆ-ಅಂಬಲಿ ತಂದು ಕೊಡುವೆಯಾ ಎಂದು ಕೇಳಿದರು.

ಆಗ ಆ ಹೆಣ್ಣು ಮಗಳು ಊರಿಗೆ ಹೋಗಿ ಎರಡು ಬಟ್ಟಲು ತುಂಬಾ ಮಜ್ಜಿಗೆ-ಅಂಬಲಿಯನ್ನು ತಂದುಕೊಟ್ಟಳು. ಸೈಯದ್ ಹಜರತಶಾ ಕಾದರಿಯವರು ಅದನ್ನು ಸೇವಿಸದರು. ಆಗ ಸೈಯದ್ ಹಜರತಶಾ ಕಾದರಿಯವರು ಆಕೆಗೆ ಮತ್ತು ಆಕೆಯ ವಂಶದವರಿಗೆ ಆಶೀರ್ವಾದ ಮಾಡಿದರು. ಅಂದಿನಿಂದ ಅವರು ಸುಖಶಾಂತಿಯಿಂದ ಇರತೊಡಗಿದರು…

ಸೈಯದ್ ಹಜರತಶಾ ಕಾದರಿಯವರು ಹುರಳಿಕುಪ್ಪಿ ಬೆಟ್ಟದ ಗವಿಯ ಮುಂಭಾಗದಲ್ಲಿ ಇರತೊಡಗಿದರು. ಅನೇಕ ಜನ ಭಕ್ತರು ಬಂದು ದರ್ಶನ ಪಡೆಯುತ್ತಿದ್ದರು. ಆ ಭಕ್ತರ ಪೈಕಿ ಸವಣೂರ ನವಾಬ್ ನೂ ಸೇರಿಕೊಂಡ. ಪರಸ್ಪರ ಮಾತುಕತೆಯಾದ ತರುವಾಯ ಆ ನವಾಬ್ ಹಕೀಮ್ ಖಾನಸಾಹೇಬನು ಸೈಯದ್ ಹಜರತಶಾ ಕಾದರಿಯವರನ್ನು ಬೇಡಿಕೊಂಡ ತಾವು ಸವಣೂರಿಗೆ ಬರಬೇಕೆಂದು ಹಲಬತೊಡಗಿದ. ಮೊದಲು ಕಾದರಿಯವರು ಒಪ್ಪಲಿಲ್ಲ. ಕಡೆಗೆ ಆ ನವಾಬ್ ಬಹಳ ಬೇಡಿಕೊಂಡಿದ್ದರಿಂದ ನವಾಬ್ ನ ಸಂಗಡ ಸವಣೂರಿಗೆ ಹೋದರು. ಅಲ್ಲಿಯ ಜನರು ಕಾದರಿಯವರನ್ನು ಕಂಡು ಬಹು ಸಂತೋಷಗೊಂಡರು. ಭಕ್ತಿಯಿಂದ ಬೇಡಿಕೊಂಡರು. ಇಂತಹ ಸನ್ನಿವೇಶದಲ್ಲಿ ಅನುಚಿತ ಘಟನೆಯೊಂದು ನಡೆಯಿತು.

ಅದು ಹೀಗಿದೆ– ಒಂದು ದಿನ ನವಾಬ್ ಹಕೀಮ್ ಖಾನಸಾಹೇಬನಿಂದ ಒಂದು ದುರ್ಘಟನೆ ನಡೆಯಿತು. ಅದೇನೆಂದರೆ ನವಾಬ್ ಹಕೀಮ್ ಖಾನ್ ಸಾಹೇಬ ತಮ್ಮ ಸೇವಕರಿಗೆ ಹೀಗೆ ಅಪ್ಪಣೆ ಮಾಡಿದನು. ರೂಪವತಿ ತರುಣಿಯರನ್ನು ಹಿಡಿದು ತರಲು ಆಜ್ಞೆ ಮಾಡಿದನು. ಆ ‌ಪ್ರಕಾರ ಅನುವಾರ್ಯವಿಲ್ಲದೇ ಸೇವಕರು ಹುಡುಕುತ್ತ, ಹುಡುಕುತ್ತಾ ಕಾದರಿಯವರ ಶಿಷ್ಯಳಾದ ಸೈಯದ್ ವಂಶದ ಒಬ್ಬ ಅಬಲೆಯ ಮನೆಗೆ ಬಂದರು. ಅವಳ ಮಗಳನ್ನು ಒತ್ತಾಯದಿಂದ ಸ್ವಾಧೀನ ಪಡಿಸಿಕೊಂಡರು. ಆಕೆ ಅಳುತ್ತ ಹೀಗೆ ಮಾಡಬೇಡರೆಂದು ಎಷ್ಟು ಕೇಳಿದರೂ ಆ ಪಿಶಾಚಿಗಳು ಆಕೆಯನ್ನು ಎಳೆದೊಯ್ಯತೊಡಗಿದರು. ಆಕೆಯ ತಾಯಿ ಮೈಮೇಲೆ ಒಂದರ ಮೇಲೊಂದು ಬಟ್ಟೆಗಳನ್ನು ತೊಡಸಿ-ಮಗಳೇ ನಿನ್ನನ್ನು ಆ ದೇವರೇ ಕಾಪಾಡಬೇಕು. ನಿನ್ನನ್ನು ಆ ಕಾದರಿಯವರೇ ಕಾಪಾಡಲಿ ಎಂದು ಅನುತಾಪದಿಂದ ಬಾಗಿಲಲ್ಲಿ ಅಳುತ್ತಾ ನಿಂತಿದ್ದಳು ಆ ಬಾಲೆಯ ತಾಯಿ. ನವಾಬ್ ನ ಸೈನಿಕರು ಆ ಬಾಲೆಯನ್ನು ಹೊತ್ತು ಯೊಯ್ದಿದ್ದರು. ಅಷ್ಟರಲ್ಲಿ ಕಾದರಿಯವರು ಬಂದರು. ಸಮಾಚಾರವನ್ನೆಲ್ಲ ತಿಳಿದರು. ನವಾಬ್ ಹಕೀಮ್ ಸಾಹೇಬ್ ನ ಈ ದುರ್ವಾಸನೆ ತಳಿದು, ನೆಟ್ಟಗೆ ಹಕೀಮ್ ಸಾಹೇಬನ ಅರಮನೆಯ ಬಾಗಿಲಲ್ಲಿ ನಿಂತು ಸಾಹೇಬಾ ಆ ಬಾಲೆಯನ್ನು ಬಿಟ್ಟುಬಿಡು ಆಕ್ರೋಶಭರಿತರಾಗಿ ಹೇಳಿದರು. ಆ ಮಾತಿಗೆ ನವಾಬ್ ಸಾಹೇಬ್ ಹೀಗಂದನು.– ಆ ಬಾಲೆಯು ನನ್ನ ಸರ್ಕಾರದಲ್ಲಿ ಖರ್ಚಾದಳು‌ ಎಂದು ಹೇಳಿದ ನವಾಬ್. ಅದಕ್ಕೆ ಪ್ರತಿಯಾಗಿ ಕಾದರಿಯವರು ಹೀಗಂದರು– ನೀನಾದರು ನನ್ನ ದೇವರ ದರ್ಬಾರಿನಲ್ಲಿ ಖರ್ಚಾಗಿರುವೆ ಎಂದು. ಕಾದರಿಯವರ ನುಡಿಗಳನ್ನು ಕೇಳಿ ಕಾದರಿಯವರ ಆ ನುಡಿಗಳನ್ನು ಕೇಳಿ ಗಾಬರಿಗೊಂಡು ಆ ನವಾಬ್ ಹಿಂದೆಯೇ ಓಡಿ ಬಂದು ಕಾದರಿಯವರ ಮುಂದೆ ನಿಂತು ಬೇಡತೊಡಗಿದ ನವಾಬ್. ಆಗ ಕಾದರಿಯವರು ನವಾಬ್ ನಿಗೆ ಹೇಳಿದರು–  ಬಿಟ್ಟ ಬಾಣ ಮರಳಿಪಡೆಯಲು ಸಾಧ್ಯವೇ? ಎಂದು.

ಸವಣೂರಿಂದ ಹೊರಟು ಕಾದರಿಯವರು ಬಂಕಾಪುರಕ್ಕೆ ಬಂದು ತಮ್ಮ ಗುರುವಿನ ಮುಂದೆ ಹೇಳಿದರು ಎಲ್ಲ ವಿವರವನ್ನು. ಆಗ ಗುರು ಹೇಳಿದರು– ಮಗನೇ ಎಲ್ಲ ಸಮಾಚರವೂ ದೇವರ ರೆಜಿಸ್ಟರ್ ನಲ್ಲಿ ದಾಖಲಾಗಿದೆ ಎಂದು.

ನವಾಬ್ ಹಕೀಮ್ ಖಾನ್ ಸಾಹೇಬ್ ನು ಸಂಕಟದೊಳಗೆ ಸಿಲುಕಿ ತನ್ನ ದಳವನ್ನು ತೆಗೆದುಕೊಂಡು ಬಿಜಾಪೂರಕ್ಕೆ ಓಡಿಹೋಗಬಾಯಿತು. ಐದು ವರ್ಷಗಳ ನಂತರ ಅಲ್ಲಿಂದ ಹಿಂತಿರುಗಿ ಪಶ್ಚಾತ್ತಾಪ ಪಟ್ಟು ಆತುರಾತುರವಾಗಿ ಹುಲಗೂರಿಗೆ ಬಂದ. ಅಲ್ಲಿ ಕಾದರಿಯವರನ್ನು ಕಂಡು ಕೂಡಲೇ ತನ್ನ ಅಪರಾಧವನ್ನು ಕ್ಷಮಿಸಬೇಕೆಂದು ಪರಿಪರಿಯಾಗಿ ಹಲಬತೊಡಗಿದ. ಆಗ ಕಾದರಿಯವರು ಆ ಸವಣೂರು ನವಾಬ್ ಹಕೀಮ್ ಖಾನ್ ನನಿಗೆ ಹೀಗೆ ಹೇಳಿದರು.– ಬಿಟ್ಟ ಬಾಣಗಳು ತಿರುಗಿ ಕೈಸೇರುವುದು ಅಸಂಭವ. ಆದರೆ ಇಷ್ಟು ಮಾತ್ರ ಆಗಬಲ್ಲದು ಧನ, ಸಂಪತ್ತು ಹೋದರೂ ಕೂಡ ಮಿಣಿಕು ಮಿಣಕು ದೀಪ ಮಾತ್ರ ಇದ್ದೀತು. ಇಷ್ಟಕ್ಕೆ ನವಾಬ್ ರು ಸಂತುಷ್ಟರಾಗಿ ಸಹಸ್ರ ಎಕರೆ ಇನಾಮು ಕೊಟ್ಟರು. ಆಗ ಕಾದರಿಯವರು ಅಲ್ಲಿಯೇ ಆ ಕಾಗದವನ್ನು ಹರಿದು ಹಾಕಿದರು. ಆಗ ನವಾಬ್ ದುಪ್ಪಟ್ಟು ಇನಾಮು ಹಾಕಿಕೊಟ್ಟರು. ಇದಕ್ಕೂ ಅನುಮತಿ ಕೊಡಲಿಲ್ಲ ಕಾದರಿಯವರು. ಬಳಿಕ ಹೀಗಂದರು ನಿನಗೆ ಕೊಡುವ ಮನಸ್ಸಿದ್ದರೆ ನನಗೆ ನನ್ನ ಅಫನವಾಗುವಷ್ಟು ಸ್ಥಳಾವಕಾಶ ಮಾತ್ರ ಕೊಟ್ಟರೆ ಸಾಕು. ಇಷ್ಟು ಅಂಗೈಯಗಲದ ಜಾಗೆಯನ್ನು ಕೊಡುವುದು ಏನು ದೊಡ್ಡ ಮಾತೆಂದು ಕೂಡಲೇ ನವಾಬ್ ನು ಕಾಗದವನ್ನು ಬರೆದುಕೊಟ್ಟು ಕಾದರಿಯವರಿಂದ ಆಶೀರ್ವಾದ ಪಡೆದು ಸವಣೂರಿಗೆ ಹಿಂದಿರುಗಿದ…

ಸೈಯದ್ ಹಜರತಶಾ ಕಾದರಿಯವರು ಬಂಕಾರದಿಂದ ಹುಲಗೂರಿಗೆ ಬಂದಾಗ ಹುಲಗೂರ ಊರಿನಿಂದ ಪೂರ್ವ ದಿಕ್ಕಿನ ತುದಿಲ್ಲಿರುವ ಒಂದು ಯೋಗ್ಯವಾದ ಸ್ಥಳವನ್ನು ಆರಿಸಿಕೊಂಡು ಅಲ್ಲಿಯೇ ಇರತೊಡಗಿದರು. ಈಗ ಆ ಸ್ಥಳಕ್ಕೆ ಗಂಧದ ಮನೆಯೆಂದು ಕರೆಯುವುದುಂಟು. ಕೆಲಕಾಲದ ನಂತರ ಬಂಕಾಪುರದಿಂದ ತಮ್ಮ ಧರ್ಮ ಪತ್ನಿಯನ್ನು ಕರೆಯಿಸಿಕೊಂಡು ಸೌಖ್ಯದಿಂದ ಈಶ ಸೇವೆಯಲ್ಲಿ ಕಾಲ ಕಳೆಯಲಾರಂಭಿಸಿದರು.

ಮೆಲ್ಲಮೆಲ್ಲಗೆ ಊರಿನ ಒಬ್ಬ ಮುಸಲ್ಮಾನ ಮನೆತನಕ್ಕೆ ಸೇರಿದ ಬಾಲಕನಲ್ಲಿ ಇವರೆಲ್ಲರೂ ಗಾಢವಾದ ಪ್ರೀತಿಯುಂಟಾಯಿತು. ಆ ಬಾಲಕನ ಹೆಸರು ಮಹಮ್ಮದ್ ಅಕ್ಬರ್ ಎಂದಿತ್ತು. ಕಾದರಿಯವರು ಈ ಬಾಲಕನನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಏಕೆಂದರೆ ಈ ಬಾಲಕ ಆಚಾರ-ವಿಚಾರಗಳಲ್ಲಿ ಸುಶೀಲಮೂರ್ತಿಯಾಗಿದ್ದ. ಕಾದರಿಯವರ ಮತ್ತು ಅವರ ಪತ್ನಿಯವರ ಆದೇಶದ ಮೇರೆಗೆ ಪ್ರತಿಯೊಂದು ಕೆಲಸವನ್ನು ಉತ್ಸಾಹದಿಂದ ಮಾಡಿಕೊಡುತ್ತಿದ್ದ ಆ ಬಾಲಕ ಮಹಮ್ಮದ್ ಅಕ್ಬರ್. ಕಾದರಿಯವರು ಈತನನ್ನು ಮಗನೆಂದೇ ಭಾವಿಸಿಬಿಟ್ಟಿದ್ದರು. ಕಾದರಿಯವರು ಈ ಬಾಲಕನನ್ನು ಅಕ್ಬರ್ ಷಹೀದ್ ಎಂದು ಕರೆತಿದ್ದರು. ಈ ಪ್ರಕಾರ ಕರೆಯುವದನ್ನು ಕೇಳಿ ಕೆಲವರು ಕಾದರಿಯವರನ್ನು ಪ್ರಶ್ನಿಸಿಸಿದರು. ಮೂಲ ಹೆಸರಿನ ಮುಂದೆ ಷಹೀದ್ ಎಂಬ ಶಬ್ದವನ್ನು ಏಕೆ ಹೆಚ್ಚು ಉಪಯೋಗಿಸುವುದು ಎಂದು ಪ್ರಶ್ನಿಸಿದರು. ಆಗ ಕಾದರಿಯವರು ಉತ್ತರಿಸುತ್ತಾ ಷಹೀದ್ ಮರ್ತಬಾ (ಮಾನವತಾಭಿಮಾನಿ) ಸಿಕ್ಕುವುದು. ಅಂದಿನಿಂದ ಆ ಶಬ್ದದ ಗೊಡುವೆಗೆ ಯಾರೂ ಹೋಗಲಿಲ್ಲ…

ಒಂದು ದಿವಸ ಊರಿನ ಸಮೀಪದಲ್ಲಿದ್ದ ಬಾವಿಯೊಂದರಲ್ಲಿ ಷಹೀದ್ ಈಸುತ್ತಿದ್ದರಂತೆ. ಅಕಸ್ಮಾತ್ತಾಗಿ ಎದೆಯ ಮೇಲೆ ಒಂದು ಕಲ್ಲು ಬಂದು ಬಿದ್ದಿತು. ಇದೇ ಅವರ ಸಾವಿಗೆ ಕಾರಣವಾಯಿತು.

ಎದೆಯ ಮೇಲೆ ಕಲ್ಲು ಬೀಳುವುದೊಂದೇ ತಡ ಅವರು ನೀರಿನಲ್ಲಿ ಮುಳುಗಿಬಿಟ್ಟರು. ಈ ಸುದ್ದಿ ಊರಲೆಲ್ಲ ಹಬ್ಬಿತು. ಕಾದರಿಯವರಿಗೂ ಸುದ್ದಿ ತಿಳಿದು ಬಾವಿಯ ಹತ್ತಿರ ದಾವಿಸಿದರು ಕಾದರಿಯವರು. ಮತ್ತು ಆಕ್ಬರ್ ಷಹೀದ್ ಎಂದು ಕೂಗಿದರು ಕಾದರಿಯವರು. ಹಾಗೆ ಕೂಗುತ್ತಿದ್ದಂತೆ ಮಾರನೆಯ ಕೂಗಿಗೆ ಶವವು ನೀರಿನಲ್ಲಿ ತೇಲಾಡತೊಡಗಿತು. ನೆರೆದಿದ್ದ ಜನರು ಆಶ್ಚರ್ಯ ಪಟ್ಟರು. ಶವವನ್ನು ಹೊರಗೆ ತೆಗೆದರೆಂದು. ಧರ್ಮಶಾಸ್ತ್ರದ ಪ್ರಕಾರ ಗಂಧದ ಮನೆಯ ಎದುರು ದಫನಮಾಡಿದರು. ಈಗ ಆ ಸ್ಥಳಕ್ಕೆ ಅಕ್ಬರ್ ಷಹೀದರ ದರ್ಗಾ ಎಂದು ಕರೆಯುದುಂಟು…

ಮುಂದೆ ಸಯ್ಯದ್ ಹಜರತಶಾ ಕಾದರಿಯವರು ಮೂರು ಕುಣಿಗಳನ್ನು ಅಣಿಗೊಳಿಸಿದರು. ಒಂದು ತಮ್ಮ ಧರ್ಮಪತ್ನಿಯನ್ನು ದಫನ ಮಾಡಲು, ಮತ್ತೊಂದರಲ್ಲಿ ತಮ್ಮ ಕಕ್ಕನವರಾದ ಸೈಯದ್ ಶಾ ಹಸನ್ ಸಾಹೇಬ್ ಹುಸೇನಿಯವರನ್ನು ದಫನ ಮಾಡಲು ಮತ್ತು ಮೂರನೆಯದು ತಮ್ಮದೆಂದು ಹೀಗೆಯೇ ಮೂರು ಕುಣಿಗಳನ್ನು ಸಿದ್ದಪಡಿಸಿದ್ದರು.

ಹೀಗೆಯೇ ಸಯ್ಯದ್ ಹಜರತಶಾ ಕಾದರಿಯವರ ಪತ್ನಿಯವರು ತೀರಿದರು. ಸಯ್ಯದ್ ಹಜರತಶಾ ಕಾದರಿಯವರ ಧರ್ಮಪತ್ನಿಯನ್ನು ಮೊದಲೇ ಸಿದ್ದಪಡಿಸಿಟ್ಟುಕೊಂಡಿದ್ದ ಕುಣಿಯಲ್ಲಿ ಸಂಸ್ಕಾರ ಮಾಡಿದರು.

ಅಂದಿನಿಂದ ಎರಡು ವರ್ಷಗ ನಂತರ ಕಾದರಿಯವರ ಕಕ್ಜನವರು ಬಿಜಾಪುರದಿಂದ ಹುಲಗೂರಿಗೆ ಬಂದರು. ಪರಂತು ಕಾದರಿಯವರ ಮನೆಗೆ ಬರಲಿಲ್ಲ. ಒಂದು ಗಿಡದ ಕೆಳಗೆ ಕುಳಿತು ದಣಿವನ್ನು ಆರಿಸಿಕೊಂಡರು. ಕಾದರಿಯವರಿಗೆ ಇದರ ಅರಿವು ಆಯಿತು. ಯಾವ ಸ್ಥಳದಲ್ಲಿ ಕಕ್ಕ ಕುಳಿತುಕೊಂಡಿದ್ದರೋ ಆ ಸ್ಥಳಕ್ಕೆ ಹೋಗಿ ವಿನಯದಿಂದ ನಮಸ್ಕಾರಿಸಿ ಮನೆಗೆ ಬರಲು ಕೇಳಿಕೊಂಡರು. ಆಗ ಕಾದರಿಯವರ ಮನೆಗೆ ಬಂದರು.

ಕಕ್ಕನವರು ಕಾದರಿಯವರ ಮನೆಗೆ ಬಂದ ಹನ್ನೊಂದನೆಯ ದಿನಗಳಲ್ಲಿ ತೀರಿದರು. ಕಾದರಿಯವರು ಎಷ್ಟು ಸಹನಶೀಲರೆಂದು ಇದರಿಂದ ವ್ಯಕ್ತವಾಗುತ್ತದೆ. ಮೊದಲೇ ಸಿದ್ಧಗೊಳಿಸಿದ ಕುಣಿಯಲ್ಲಿ ಕಕ್ಕನವರನ್ನು ದಫನ ಮಾಡಿದರು. ಸಯ್ಯದ್ ಹಜರತಶಾ ಕಾದರಿಯವರ ನುಡಿಯು ಅಕ್ಷರಶಃ ನಿಜವಾಯಿತು. ಕಾದರಿಯವರು ತಮ್ಮ ಜೀವನದಲ್ಲಿ ಐದು ಉರುಸುಗಳನ್ನು ತುಂಬಿಸಿದ್ದರು.ಇವು ಭವಿಷ್ಯ ಕಾಲಕ್ಕೆ ಮಾರ್ಗದರ್ಶಕವಾದವು…

ಸಯ್ಯದ್ ಹಜರತಶಾ ಕಾದರಿಯವರು ಗತಿಸುವ ಕಾಲವೂ ಹತ್ತಿರಬಂದಿತು. ಕಾದರಿಯವರು ಸಾಯುವ ಪೂರ್ವದಲ್ಲಿ ೪೦ ದಿನಗಳ ವರೆಗೂ ಊಟ ತೊರೆದರು. ಒಂದು ಗುಟುಕು ನೀರು ಮಾತ್ರ ಕಾದರಿಯವರ ಆಹಾರವಾಗಿತ್ತು. ಹಾಗೆಯೇ ತಮ್ಮ ಶಿಷ್ಯರಿಗೆ ತಮ್ಮ ಮರಣದ ವಿವರವಾದ ಮಾಹಿತಿಯನ್ನು ನೀಡಿದರು. ತಮ್ಮ ಮರಣವು ಗುರುವಾರ ದಿವಸವಾಗುವುದು. ಯಾವಾಗ ನನ್ನ ಗುರುವಿನ ಕಾಂತಿಯನ್ನು ನೋಡುವಿನೋ ಆವಾಗ ನನ್ನ ಭೂಮಿಗೆ ಬಂದ ಕೆಲಸ ಮುಗಿದಂತಾಯಿತು ಎಂದು ‌ತಮ್ಮ ಶಿಷ್ಯಂದರಿಗೆ ಹೇಳಿದರು.

ಅದೇ ಪ್ತಕಾರ ಸಯ್ಯದ್ ಹಜರತಶಾ ಕಾದರಿಯವರ ಮರಣವು ಆಯಿತು…

ಈ ಪ್ರಕಾರ ಸಯ್ಯದ್ ಹಜರತಶಾ ಕಾದರಿಯವರು ಈ ಲೋಕದ ಯಾತ್ರೆ ಕೈಗೊಂಡು ಪೂರ್ಣಗೊಳಿಸಿದರು…

ಹೀಗೆ ಫಕೀರ್ ಸಯ್ಯದ್ ಹಜರತಶಾ ಕಾದರಿಯವರ ಬದುಕಿನ ಪೂರ್ಣ ವಿವರವು ಇದೆ ಎಂದು ಹೇಳಿ ನನ್ನ ಮಾತು ಮುಗಿಸುತ್ತೇನೆ..!

                        *********************************

ಕೆ.ಶಿವು.ಲಕ್ಕಣ್ಣವರ

Leave a Reply

Back To Top