ಯುವ ಗಜಲ್ ಕವಿ

ಅಕ್ಷತಾ ಕೃಷ್ಣಮೂರ್ತಿ

ಅಕ್ಷತಾ ಕೃಷ್ಣಮೂರ್ತಿ
ವಯಸ್ಸು : ೩೯
ವೃತ್ತಿ: ಶಿಕ್ಷಕಿ
ಶಿಕ್ಷಣ: ಕನ್ನಡ ಸ್ನಾತಕೋತ್ತರ ಪದವಿ

ಕೃತಿಗಳು:

ಹನ್ನೆರಡು ದಡೆ ಬೆಲ್ಲ
ಹಾಲಕ್ಕಿ ಒಕ್ಕಲಿಗರು
ಮಧುರಚನ್ನ
ಕೋಳ್ಗಂಬ
ಹಾಲಕ್ಕಿ ಕೋಗಿಲೆ
ಕೇದಿಗೆಯ ಕಂಪು
ನಾನು ದೀಪ ಹಚ್ಚಬೇಕೆಂದಿದ್ದೆ

ಅಕ್ಷತಾ ಕೃಷ್ಣಮೂರ್ತಿಯವರ ಒಂದು ಗಜಲ್ ತಮ್ಮ ಓದಿಗಾಗಿ

Tic Tac Toe, Love, Heart, Play

ಒಂದೆಒಂದು ಸಾರಿ ಪ್ರೀತಿಸುವೆ ಎಂದ್ಹೇಳಿ ಬಿಡು ಮಳೆಯಾಗಿ ಸುರಿದುಬಿಡುವೆ
ಒಲವ ಪರಿಮಳವಾಗಿ ಬೀರಿ ಬಿಡು ತಂಗಾಳಿಯಾಗಿ ನಿನ್ನ ಸುತ್ತುವರಿಯುವೆ

ಒಂದೆರಡು ಪದಗಳಿಗೆ ನೀ ಪ್ರೀತಿತುಂಬಿದರೆ ನಾ ಮಾತಾಡಿಬಿಡುವೆ
ಉಸಿರು ಬಿಗಿಹಿಡಿದು ನಿನಗಾಗಿ ಕಾಯುವುದೇ ಪುಣ್ಯವೆಂದುಜೀವಿಸುವೆ

ಒಂದೆಒಂದು ನೋಟಕೊನೆಯ ಬಾರಿಎಂಬಂತಾದರೂ ನೋಡಿಬಿಡುವೆ
ನೀನು ಬಂದು ಮಾತನಾಡುವಕ್ಷಣಕೆ ಹಾತೊರೆಯುವುದನು ಮುಂದೂಡುವೆ

ಒಂದುಕ್ಷಣ ನಿನ್ನ ಮುಂಗುರುಳು ತೀಡಲು ಬಿಡು ಸಿಕ್ಕಿದ್ದೆ ಪುಣ್ಯಎನ್ನುವೆ
ಆ ನಿನ್ನ ಮೆತ್ತನೆಕೆನ್ನೆ ನಿಧಾನಒತ್ತಿಒಂದೆಒಂದು ಮುತ್ತನಿಡುವೆ

ಎಷ್ಟು ಕಾಡುವೆಯೆ ನಿನ್ನ ಪಡೆಯುವಆಸೆಯನ್ನೆ ನೀನೆ ಮೆಟ್ಟಿರುವೆ
ಹೃದಯ ಬಲು ನಾಜೂಕು, ಚುಚ್ಚಿ ನೋವಾಗಿ ಪ್ರತಿ ದಿನ ಸಾಯುತಿರುವೆ

************************************

Leave a Reply

Back To Top