Day: November 6, 2020

ಲಂಕೇಶ್ ಮೋಹಕ ರೂಪಕಗಳ ನಡುವೆ

ಪುಸ್ತಕ ಪರಿಚಯ ಲಂಕೇಶ್ ಮೋಹಕ ರೂಪಕಗಳ ನಡುವೆ ಲೇಖಕರು:-ಶೂದ್ರ ಶ್ರೀನಿವಾಸ,ಪ್ರಕಟನೆ-ಪಲ್ಲವ ಪ್ರಕಾಶನ,೯೪೮೦೩೫೩೫೭,ಪುಟ-೨೮೨,ಬೆಲೆ-೨೫೦/- ..     ನಾನು ಪಿಯುನಲ್ಲಿ ಓದುವಾಗಲೇ ಲಂಕೇಶ್ ಪತ್ರಿಕೆ ಗುಂ ಬಂ ಎಂಬ ಹೊಸ ನುಡಿಗಟ್ಟಿನೊಂದಿಗೆ ಕನ್ನಡದ ಜಾಣ ಜಾಣೆಯರಿಗಾಗಿ ಎಂಬ ಟ್ಯಾಗ್ ಲೈನ್ ದೊಂದಿಗೆ ಅದೇ ಆರಂಭವಾಗಿತ್ತು.ಪ್ರಥಮ ಸಂಚಿಕೆಯಿಂದ ಆರಂಭಿಸಿ ಕೊನೆಯ ಸಂಚಿಕೆಯವರೆಗೂ ಬಿಟ್ಟು ಬಿಡದೇ ಓದಿದ ನನಗೆ ಅತ್ಯಂತ ಬೆಳೆಯುವ ವಯಸ್ಸಿನಲ್ಲಿ ಪ್ರಭಾವ ಬೀರಿದವರು ಲಂಕೇಶ್ ಹಾಗೂ ಅವರ ಪತ್ರಿಕೆಯ ಬಳಗದ ಆಗಿನ ಎಲ್ಲ ಲೇಖಕರು,ವರದಿಗಾರರು.ಇಡೀ ಪತ್ರಿಕೆಯ ಒಂದಕ್ಷರವು ಬಿಡದೇ ಓದುತ್ತಿದ್ದೆ.ಲಂಕೇಶ, […]

ಏನು ಬರೆಯಲಿ ……!

ಕವಿತೆ ಏನು ಬರೆಯಲಿ ……! ಅಕ್ಷತಾ ಜಗದೀಶ. ಬರೆಯೆಂದೊಡನೆ‌ ಏನುಬರೆಯಲಿ ನಾನುಕವನದ ಸಾಲುಗಳಿವುತಾವಾಗಿ‌ ಸಾಗುತಿಹವು… ಎಂದೂ ಕಾಣದ ಮೊಗವಜೊತೆಯಲಿ ಕಳೆಯದ ದಿನವಆ ಕ್ಷಣಗಳ ಕುರಿತು….ಏನೆಂದು‌ ಬರೆಯಲಿ ನಾನು… ದೂರದ ಕಾನನದೊಳಿರುವತೊರೆಯ‌ ಮೇಲಿನ ಬುಗ್ಗೆನಾ ಕಾಣ ಹೊರಟಾಗ…ಮಾಯವಾಗಿ‌ ಹೋದಾಗ….ಆ ಬುಗ್ಗೆಯ ಕುರಿತು‌ ನುಡಿಯೆಂದರೆಏನು‌ ನುಡಿಯಲಿ ನಾನು…. ಬಾನಲಿ ಮೂಡಿದ‌ ಮಿಂಚೊಂದುಕ್ಷಣದಲಿ ಮೂಡಿ ಮಾಯವಾಗಿಇರುಳ ದಾಟಿ ನಾ ಬಂದಾಗಹಗಲಲಿ ಏನು‌ ಹೆಳಲಿ ನಾನು.. ಬರೆಯೆಂದೊಡನೆ ಏನು‌ಬರೆಯಲಿ ನಾ‌ನು…….***

ಲಂಕೇಶ-೭೮

ಲಂಕೇಶ-೭೮ ಸಿದ್ಧರಾಮ ಹೊನ್ಕಲ್ ಯಾರಿಗೂ ಏನನ್ನೂ ಬೇಡಲಿಲ್ಲ,ಬಯಸಲಿಲ್ಲ ಈ ಲಂಕೇಶಎಲ್ಲರಿಗೂ ಪಾಪಪ್ರಜ್ಞೆಯಾಗಿ ಕಾಡದೇ ಬಿಡಲಿಲ್ಲ ಈ ಲಂಕೇಶ ತಾನು ನಡೆದದ್ದು ಬರೀ ದಾರಿಯಲ್ಲ ಈ ಲಂಕೇಶನಿಗೆಅದು ರಾಜಮಾರ್ಗವೆಂದು ತೋರಿದನಲ್ಲ ಈ ಲಂಕೇಶ ಕನ್ನಡದ ಮೇರು ಲೇಖಕ ಮೇಲಾಗಿ ನಿರ್ಭೀತ ಪತ್ರಕರ್ತಶತಮಾನದ ದೃಷ್ಟಿಕೋನ ಬದಲಿಸಿದನಲ್ಲ ಈ ಲಂಕೇಶ ಕಥೆ,ಕವಿತೆ,ಪತ್ರಿಕೆ,ಸಿನೆಮಾ ನಿರ್ದೇಶನ ಹೀಗೆ ನಡೆದಂತೆಲ್ಲಾ ದಾರಿಗಳುನಡೆದ ದಾರಿಯಗುಂಟ ಬರೀ ಮುಳ್ಳುಗಳೇ ಹಸನಾದವಲ್ಲ ಈ ಲಂಕೇಶ ಯಾರಿಗೂ ಅಂಜಲಿಲ್ಲ ಅಳುಕಲಿಲ್ಲ ಯಾರ ಬಿಢೆಗೂ ಬೀಳಲಿಲ್ಲ“ಹೊನ್ನಸಿರಿ”ಕರ್ನಾಟಕಕ್ಕೆ ಹೊಸ ಮನ್ವಂತರ ಸೃಷ್ಟಿಸಿದರಲ್ಲ ಈ ಲಂಕೇಶ […]

ಕಾದಂಬರಿ ಕುರಿತು ಬಂಡಾಯ ವ್ಯಾಸರಾಯ ಬಲ್ಲಾಳ ಒಳ್ಳೆಯ ಓದುಗ ವಿಮರ್ಶಕನಾಗುತ್ತಾನೆ ನಿನ್ನೆ ಮೊನ್ನೆ  ಎಲ್ಲಿಯೋ ಓದಿದ ನೆನಪು. ಬಹುಶಹ ಗಂಗಾಧರ್ ಸರ್ ‘ನನ್ನ ಪುಟ’ದಲ್ಲಿ?  ನಾನೋ ವಿಮರ್ಶೆ ನನಗೆ ಒಗ್ಗಲ್ಲ ಎನ್ನುತ್ತಲೇ ಹಾಗೆ ಓದಿ ಹೀಗೆ ತಲೆ ಕೊಡವಿಕೊಳ್ಳುವ ಜಾತಿ. ಆದರೆ ಓದಿ ಬದಿಗಿಟ್ಟಮೇಲೂ ಬಿಡದಲೇ  ಬೆನ್ನಿಗೆ ಬಿದ್ದು ದನಿಯಾಗಿ ಕಾಡಿದ ಕ್ರತಿಗಳ ಕಾರಣದಿಂದಲೇ ಒಮ್ಮೊಮ್ಮೆ ನೋಡೋಣವೆಂತಲೇ ಕಚ್ಚಿ ಕೂತಿದ್ದಿದೆ. ಅಂಥ ಕ್ರತಿಗಳಲ್ಲೊಂದು ಇತ್ತೀಚೆಗೆ ಕೈಗೆ ಬಂದ ಪುಸ್ತಕ ಬಲ್ಲಾಳರ ‘ಬಂಡಾಯ’.  ತಮ್ಮ ಕೊನೆಯ ದಿನಗಳಲ್ಲಿ ಬೆಂಗಳೂರಿನಲ್ಲಿದ್ದು […]

ಅಂಕಣ ಬರಹ ಋಗ್ವೇದ ಸ್ಫುರಣ ಅನುವಾದ : ಹೆಚ್.ಎಸ್.ವೆಂಕಟೇಶಮೂರ್ತಿ ಋಗ್ವೇದ ಸ್ಫುರಣಅನುವಾದ : ಹೆಚ್.ಎಸ್.ವೆಂಕಟೇಶಮೂರ್ತಿಪ್ರ : ಅಭಿನವ ಪ್ರಕಟಣೆಯವರ್ಷ : ೨೦೧೭ಬೆಲೆ : ರೂ.೨೦೦ಪುಟಗಳು : ೧೬೦ ಪ್ರಾಚೀನ ಭಾರತದ ಅತ್ಯಂತ ಪ್ರಮುಖ ಭಾಷಿಕ ದಾಖಲೆಯಾದ ಋಗ್ವೇದ ಸೂಕ್ತಗಳಲ್ಲಿರುವ ಋಕ್ಕುಗಳೊಳಗಿನ ಬಿಡಿ ಪದ್ಯಗಳ  ಸರಳ ಅನುವಾದ ಈ ಕೃತಿಯಲ್ಲಿದೆ.  ಮೂಲ ಸಂಸ್ಕೃತದಲ್ಲಿರುವ ಈ ಪದ್ಯಗಳನ್ನು  ಆರಂಭದಲ್ಲಿ ಸೂಕ್ತ ವ್ಯಾಖ್ಯಾನಗಳ ಮೂಲಕವೂ ನಂತರ ತಿಳಿಗನ್ನಡದಲ್ಲಿ ವ್ಯಾಖ್ಯಾನಗಳಾಗಿಯೂ ನೀಡಲಾಗಿದೆ.  ಋಗ್ವೇದದ ಋಕ್ಕುಗಳು ಪ್ರಕೃತಿಯ ಮಹಾಶಕ್ತಿಗಳು.  ವಾಸ್ತವದ ನೆಲೆಯಲ್ಲಿ ಗ್ರಹಿಸುವಂಥವು.  ವಿಶ್ವಭ್ರಾತೃತ್ವವನ್ನು […]

Back To Top