Day: November 22, 2020

ಮರಳಿ ತವರಿಗೆ

ಸಣ್ಣ ಕಥೆ ಮರಳಿ ತವರಿಗೆ ನಾಗರಾಜ್ ಹರಪನಹಳ್ಳಿ ಕರೋನಾ ಕಾರಣವಾಗಿ ತವರು ಮನೆಗೆ ಕೊಲ್ಲಾಪುರ ದಿಂದ ಬಂದಿದ್ದ ರೋಶನಿ ತನ್ನೆರಡು‌ ಮಕ್ಕಳೊಂದಿಗೆ ಹೈಸ್ಕೂಲ್ ಗೆಳತಿ ಶರ್ಮಿತಾಳನ್ನು ಕಾಣಲು ಹೊರಟಳು.ಮಲೆ ‌ನಾಡಿನ ಒಂಟಿ ಮನೆಗಳು ಅಡಿಕೆ ತೆಂಗು ಹಾಗೂ ಕಾಡಿನ ಮರಗಳ ಮಧ್ಯೆ ಅಡಗಿರುವುದೇ ಹೆಚ್ಚು. ಶರ್ಮಿತಾಳ ತಾಯಿ ಮನೆ ಎದುರು ದನಗಳಿಗೆ ಕರಡ ಬೆಳೆಯಲು ಬಿಟ್ಟಿದ್ದ ಬಯಲು ಭೂಮಿ , ಜೂನ್  ತಿಂಗಳು ಎರಡು ವಾರ  ಸುರಿದ  ಮಳೆಯ ಕಾರಣ , ಅದಾಗಲೇ ಹಸಿರಾಗಿ ಇತ್ತು.‌‌  ಮೊದಲ […]

ಕರೋನ ಅಬ್ಬರದಲ್ಲಿ ಕುಸಲಾಳ ಮನಸ್ಸಿನ ಏಕಾಂತ ಹೊಯ್ದಾಟ..!

ಪ್ರಸ್ತುತ ಕರೋನ ಅಬ್ಬರದಲ್ಲಿ ಕುಸಲಾಳ ಮನಸ್ಸಿನ ಏಕಾಂತ ಹೊಯ್ದಾಟ..! ಕೆ.ಶಿವು.ಲಕ್ಕಣ್ಣವರ ಹೌದಾ.. ನಿಜಾನಾ.. ಇದು ಹೇಗೆ ಸಾಧ್ಯ..? ನಿಜಕ್ಕೂ ಕೊರೊನಾ ವೈರಸ್‌ ಹಿಂದಿರೋ ಕರಾಳ ಸತ್ಯ ಇದೇನಾ..? ಇಡೀ ಜಗತ್ತನ್ನೇ ಕಿರುಬೆರಳಲ್ಲಿ ಆಡಿಸ್ತಿರೋ ಕೊರೊನಾ ವೈರಸ್‌ ಹುಟ್ಟಿನ ಹಿಂದೆ ದೊಡ್ಡ ಷಡ್ಯಂತ್ರವೇ ಇದ್ಯಾ..? ಸೋಶಿಯಲ್ ಮೀಡಿಯಾದಲ್ಲಿ ಕಳೆದೊಂದು ವರ್ಷದಿಂದ ವೈರಲ್ ಆಗ್ತಿರೋ ಒಂದು ವಿಡಿಯೋನ ನೋಡಿದವರ ತಲೆಯಲ್ಲಿ ಇಷ್ಟೊಂದು ಪ್ರಶ್ನೆಗಳು ಹರಿಡಾದ್ತಿವೆ. ಕೊರೊನಾ ವೈರಸ್‌ ಕಾಣಿಸಿಕೊಂಡ ಆರಂಭದಲ್ಲಿ ಶುರುವಾಗಿದ್ದ ಚರ್ಚೆಯೊಂದಕ್ಕೆ ಈ ವಿಡಿಯೋದಿಂದ ಮತ್ತೆ ಪುಷ್ಟಿ ಪುಷ್ಟಿ […]

ಗಜಲ್

ಗಜಲ್ ರವಿ.ವಿಠ್ಠಲ. ಆಲಬಾಳ. ತುಸು ಹೊತ್ತು ಕಳೆದೆ ,ತುಸು ದೂರ ನಡೆದೆ ,ಸಾಕಿಂದಿಗೆ ಈ ಪ್ರೀತಿಮೋಹಕ ನಗುವಿನಲಿ ಚೆಲುವೆಲ್ಲ ನೋಡಿದೆ ,ಸಾಕಿಂದಿಗೆ ಈ ಪ್ರೀತಿ. ಭಣಗುಡುವ ಎದೆಯಿಂದು ಉಲ್ಲಾಸವನು ತುಂಬಿ ತುಳುಕಿಸಿದೆತುಟಿಕೆಂಪಿನಲಿ ಹೊಸ ಮಿಂಚು ಕಾಣುತಿದೆ ,ಸಾಕಿಂದಿಗೆ ಈ ಪ್ರೀತಿ. ಕಳೆಕಟ್ಟಿಕೊಂಡು ಕಾಣುವ ಕನಸುಗಳಿಗೆ ಸಾವಿರದ ನೆನಕೆ ತಿಳಿಸುವೆಸವಿ ದಿನಗಳ ಕ್ಷಣವನು ತಿರುವಿ ಹಾಕುತಿದೆ ಸಾಕಿಂದಿಗೆ ಈ ಪ್ರೀತಿ . ಏನೆಲ್ಲ ಹೇಳಿದೆ,ಏನೆಲ್ಲ ಕೇಳಿದೆ ,ಬರೀ ಮಾತುಗಳಾಗೇ ಉಳಿದಿವೆದೂರವಿದ್ದರೂ ಸರಿಯೇ ,ನಿನ್ನ ಬಿಂಬ ಇಲ್ಲಿದೆ ಸಾಕಿಂದಿಗೆ ಈ […]

ದನ ಕಾಯೋದಂದ್ರ ಏನ ಮ್ಮ

ಕಿರುಗಥೆ ದನ ಕಾಯೋದಂದ್ರ ಏ‌ನಮ್ಮ ರಶ್ಮಿ .ಎಸ್. ಅರ್ನಿ, ಹೋಂವರ್ಕ್‌ ಮಾಡಿಲ್ಲ… ಇಲ್ಲಮ್ಮ… ಮಾಡಾಂಗಿಲ್ಲ? ಇಲ್ಲಮ್ಮ… ಆಯ್ತು ಹಂಗಾರ… ನಾಳೆಯಿಂದ ಸಾಲೀಗೆ ಹೋಗಬ್ಯಾಡ… ದನಾ ಕಾಯಾಕ ಹೋಗು… ದನಾ ಕಾಯೂದಂದ್ರೇನಮ್ಮ.. ದನಾ ಕಾಯೂದಂದ್ರ ಒಂದು ನಾಲ್ಕು ಎಮ್ಮಿ ಕೊಡಸ್ತೀನಿ. ಎಮ್ಮಿ ಎಲ್ಲೆಲ್ಲಿ ಅಡ್ಡಾಡ್ತಾವ ಅಲ್ಲೆಲ್ಲ ಅದರ ಹಿಂದ ಹಿಂದೇ ಅಡ್ಯಾಡಬೇಕು. ಶಗಣಿ ಹಾಕಿದ್ರೂ, ಸುಸು ಮಾಡಿದ್ರೂ ಅದರ ಜೊತಿಗೇ ಇರಬೇಕು. ಶಗಣಿ ಹಾಕೂದಂದ್ರ? ಎಮ್ಮಿ ಕಕ್ಕಾ ಮಾಡೂದು.. ಅವಾಗೂ ಬಿಟ್ಟು ಹೋಗೂಹಂಗಿಲ್ಲಾ? ಇಲ್ಲ… ಓಹ್‌… ಆಸಮ್‌…ನಾ ಎಮ್ಮೀ […]

ಗಜಲ್

ಗಜಲ್ (ಸಂಪೂರ್ಣ ಮತ್ಲಾ ಗಜಲ್) ಸಿದ್ಧರಾಮ ಹೊನ್ಕಲ್ ನನ್ನ ಸಖಿ ಈ ಜಗದಿ ಅಪರೂಪ ಏನನೂ ಬೇಡಳುಕೊಡುವೆ ಅಂದಾಕ್ಷಣವೇ ಕೋಪದಿ ಕ್ಷಣ ಮುನಿವಳು ಏನು ಕೊಟ್ಟರು ಕಡಿಮೆ ಅವಳಿಗೆ ಅಂತಹ ಗುಣದವಳುಮುಳ್ಳು ತರಚುವ ಮೃದು ಮಧುರ ಗುಲಾಬಿ ಅಂಥವಳು ಬೇಡ ಕೊಟ್ಟಷ್ಟು ಆಸೆ ಬೆಳಿವವು ಅಂದು ಕೊಂಡಿಹಳುಆಸೆಯೇ ಇಲ್ಲದ ಅಪ್ಪಟ ಬಂಗಾರು! ನನಗೆ ಸಿಕ್ಕಿಹಳು ತಾ ಕೊಡುವದರಲು ಹೀಗೆ ಬಲೂ ಕಂಜೂಸಿ ಮನದವಳುಮಾತೇ ಮುತ್ತಾಗಿಸಿದವಳು ಬೇಗ ಮುತ್ತು! ಸಹ ನೀಡಳು ಅಭಿಮಾನದಿ ಪ್ರೀತಿ ಪ್ರೇಮದ ಹೊಳೆಯ ಹರಿಸುವಳುಹೊಟ್ಟೆ […]

ನಿರುತ್ತರ

ಕಥೆ ನಿರುತ್ತರ ಚಂದ್ರಿಕಾ ನಾಗರಾಜ್  ಹಿರಿಯಡಕ ಸೆರಗಿನಲ್ಲಿ ಹೆರಕಿ ತಂದಿದ್ದ ಹೂವುಗಳನ್ನು ಒಂದೊಂದಾಗಿಯೇ ತನ್ನ ಪಾಡಿಗೆ ತಾನು, ಹಮ್ಮು ಬಿಮ್ಮಿಲದೇ, ಪ್ರಫುಲ್ಲ ಮನಸ್ಥಿಯಲ್ಲಿ ಹರಿಯುತ್ತಿದ್ದ ತೊರೆಯಲ್ಲಿ ಹರಿಯ ಬಿಡುತ್ತಿದ್ದೆ. ಅದು ಹೂವ ಚಿತ್ತಾರದ ಸೀರೆಯುಟ್ಟ ನೀರೆಯಂತೆ ಬಳುಕುತ್ತಾ ಸಾಗುತ್ತಿತ್ತು.  ನಾನೇಕೋ ಇಂದು ಅದನ್ನು ಆಸ್ವಾದಿಸುವ ಮನಸ್ಥಿತಿಯಲ್ಲಿ ಇಲ್ಲ.  ಕೈಗಳು ಶಾಂತವಾಗಿ ತೊರೆಯ ಮೈ ಸವರುತ್ತಿತ್ತಷ್ಟೆ, ಮನವು ಪ್ರಕ್ಷುಬ್ಧ ಕಡಲಾಗಿತ್ತು.  ದುಃಖ ಹೆಪ್ಪು ಗಟ್ಟಿತ್ತು. ಅದು ಒಡೆದು ಹೋಗಲು ಅವನೇ ಬರಬೇಕು‌.  ಅವನ ಮೈಗಂಧವ  ತಂಗಾಳಿ ನನ್ನ ನಾಸಿಕಗಳಿಗೆ […]

Back To Top