Month: October 2020

ಗಾಂಧಿವಿಶೇಷ ಸರ್ವೋದಯ ಪ್ರತಿಯೊಬ್ಬರ ಅಗತ್ಯಗಳನ್ನು  ಪ್ರಕ್ರತಿ ಪೂರೈಸಬಲ್ಲದು ಆದರೆ ಆಕರ್ಷಣೆಗಳನ್ನು ಖಂಡಿತ ಅಲ್ಲ. ಇದು  ರಾಷ್ಟ್ರಪಿತ ಗಾಂಧೀಜಿ ಯವರ ನುಡಿ ಮುತ್ತು. ಅವರ ಗುರಿ ಸ್ವಾತಂತ್ರ್ಯ ಸಂಪಾದನೆಯ ಜೊತೆ ಜೊತೆಗೆ  ಆನಂತರದ ದಿನಗಳ ರಾಜಕೀಯ ಶಿಕ್ಷಣ  ಆರ್ಥಿಕತೆ ಕೃಷಿ  ಮತ್ತು ಕೈಗಾರಿಕೆಯ ಮುನ್ನೋಟ ಸಿದ್ಧಪಡಿಸಿ ತಮ್ಮಕನಸನ್ನು ನನಸಾಗಿಸಲೂ              ರಚನಾತ್ಮಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು . ಅವರ ಮೂಲ ಧ್ಯೇಯ ಸರ್ವರಿಗೆ ಸಮ ಬಾಳು ಸರ್ವರಿಗೆ ಸಮ ಪಾಲು. ರಾಷ್ಟೀಯ ಏಕತೆಯು ಸಾಮಾಜಿಕ  ಸೌಹಾರ್ದತೆಯಿಂದ ಮಾತ್ರ ಸಾಧ್ಯ ಎಂಬುದು ಗಾಂಧೀಜಿಯವರ […]

ಗಾಂಧಿ ವಿಶೇಷ ಹೇ ರಾಮ್ !! ಸಣಕಲು ಕಡ್ಡಿರಪ್ಪನೆ ಕಣ್ಣಿಗೆ ರಾಚುವ ಎಲುಬಿನ ಹಂದರಸದಾ ನೆತ್ತಿಗೆ ಹತ್ತಿದ ಶಾಂತಿ ಮಂತ್ರ; ಸತ್ಯದಅಮಲುಕೈಯಲ್ಲೊಂದು ಊರುಗೋಲುಬೆನ್ನು ಎದೆ ಸುತ್ತಿದೊಂದು ಬಿಳಿ ಶಾಲುಕಣ್ಣಿಗಂಟಿದ ಚಷ್ಮಮೊಣಕಾಲ ಮೇಲೆ ಪಂಚೆಸುತ್ತ ನೆರೆದ ಒಂದಷ್ಟು ಜನರ ಸಂತೆ !ನನ್ನೀ ವೇಷಕ್ಕೆ ಆತ ಗುರಿಯಿಟ್ಟು ಹೊಡೆದ !ಸತ್ಯಕ್ಕಲ್ಲ; ಶಾಂತಿಗಲ್ಲ !ಹೋಗಲಿ ಬೇಕಾಗಿದ್ದೇನೆಂದುಆತ ತೂರಿದ ಗುಂಡಿಗೂ ಅರಿವಿಲ್ಲ !ಅದು ನನ್ನ ಗುಂಡಿಗೆಗೂ ಇನ್ನೂ ದಕ್ಕಿಲ್ಲ !ನನ್ನ ಕೊಂದದ್ದಷ್ಟೆ –ಆತ ತಿರುಗಿ ನೋಡಲಿಲ್ಲ !ನಿರ್ಭಾವುಕನಾದನೇ, ಗಳಗಳ ಅತ್ತನೇತಪ್ಪಿತಸ್ಥ ಮನೋಭಾವವಿತ್ತೇಅಥವಾ ಸೆಟೆದು […]

ಗಾಂಧಿ ವಿಶೇಷ ‘ಹಿಂದ್ ಸ್ವರಾಜ್’ನಲ್ಲಿ ಗಾಂಧಿ ಚಿಂತನೆ :   ತಮ್ಮ ‘ಹಿಂದ್ ಸ್ವರಾಜ್’ ಎಂಬ ಮಹತ್ವದ ಕೃತಿಯಲ್ಲಿ ಗಾಂಧೀಜಿಯವರು ಹೇಳುವ ಮಾತುಗಳನ್ನು ಓದಿದರೆ ಭಾರತಕ್ಕಾಗಿ ಎಂಥ ಒಂದು ಸರಳ ಬದುಕಿನ ಕನಸನ್ನು ಅವರು ಕಂಡಿದ್ದರು ಎಂಬುದರ ಅರಿವಾಗುತ್ತದೆ. ಈ ಕೃತಿಯಲ್ಲಿ ಅವರ ಆಲೋಚನೆಗಳು ಹೀಗೆ ಸಾಗುತ್ತವೆ : ‘ಆಧುನಿಕತೆ ಎಂದರೇನು ? ಸಾಮಾನ್ಯರು ಹೇಳುವಂತೆ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಹಾಕಿಕೊಳ್ಳುವುದೆ? ಹೊಸ ಹೊಸ ಯಂತ್ರಗಳನ್ನು ಆವಿಷ್ಕರಿಸಿ ನಮ್ಮ ಶಾರೀರಿಕ ಶ್ರಮವನ್ನು ಹಗುರಗೊಳಿಸಿಕೊಳ್ಳುವುದೆ?  ಪಾಶ್ಚಾತ್ಯ ನಾಗರಿಕತೆ […]

ಗಾಂಧಿ ವಿಶೇಷ ‘ನಮ್ಮ ಮಹಾತ್ಮ’ ಎಸ್. ವಿಜಯಗುರುರಾಜ ಗುಜರಾತಿನ ಸುಪುತ್ರಕಸ್ತೂರ್ ಬಾ ರ ಬಾಳಮಿತ್ರಆಫ್ರಿಕನ್ ಹಕ್ಕುಗಳಿಗಾಗಿ ಹೋರಾಡಿಅಜೇಯನಾದ ಬ್ಯಾರಿಸ್ಟರ್ ಮೇಲು ಕೀಳಿನ ಕತ್ತಲೆಯ ಕಳೆದುಐಕಮತ್ಯ ಸಾಧಿಸಿದ ಸಾಧಕಸಾಬರ್‌ಮತಿ ಆಶ್ರಮದಿ ನೆಲೆಸಿಚರಕದಿ ನೂಲು ನೇಯ್ದ ಗುರಿಕಾರಮಹೋನ್ನತ ಧ್ಯೇಯಗಳ ಹರಿಕಾರ ಉಪ್ಪಿನ ಸತ್ಯಾಗ್ರಹದಿ ದಂಡೀಯಾತ್ರೆಯಪಾದ ಸವೆಸಿದ ದಂಡನಾಯಕಉಪವಾಸ ಸತ್ಯಾಗ್ರಹಗಳ ಕೈಗೊಂಡುಹರಿಜನ ಅಸ್ಪೃಷ್ಯತೆಗಳ ನಿವಾರಿಸಿಮದ್ಯಪಾನ ವಿರೋಧಿ ಚಳುವಳಿಗಳ ಮುನ್ನಡೆಸಿದ ಮಹಾತ್ಮ ಕಸ್ತೂರ್ ಬಾ ಆಶ್ರಮದ ಆಶ್ರಯಧಾತೆಅನಾಥೆ ಲಕ್ಷಿö್ಮಯ ಲಾಲಿಸಿದ ಮಹಾಮಾತೆಸೇವಾಗ್ರಾಮದ ಕರ್ಮಭೂಮಿಯಲಿಕುಷ್ಠ ರೋಗಿಗಳ ಪಾಲಿಸಿದ ಶುಶ್ರೂಷಕಿಖಾದಿಯ ಒರಟಿನಿಲಿ ಮೃದು ಮನಸ ಸಾಧ್ವಿಧರ್ಮ […]

ಗಾಯ

ಕವಿತೆ ಗಾಯ ಕಾತ್ಯಾಯಿನಿ ಕುಂಜಿಬೆಟ್ಟು ನಾನೇ ಒಂದು ಗಾಯ!ಆಳವಾಗುತ್ತಲೇ ಇರುತ್ತೇನೆಹೃದಯದ ತಳದವರೆಗೂ…!ನೋವಿನ ಹಲ್ಲಿಗೇ ನಾಲಗೆಯುಮತ್ತೆ ಮತ್ತೆ ತುಡಿಯುವಂತೆತಾನೇ ತಾನಾಗಿ ನೊಂದು ಕೀವಾಗಿ ನವೆಯಾಗಿಬೆರಳುಗಳನ್ನು ತುಡಿಸುತ್ತದೆನಿದ್ದೆಯಲ್ಲೂ ಅಭ್ಯಾಸವಾಗಿ! ” ಉಬ್ಬಸಕ್ಕಾದರೂ ಮದ್ದುಂಟು… ಅಭ್ಯಾಸಕ್ಕಿಲ್ಲ!” ಎ೦ದುಬಿಟ್ಟರುಹಾಗನ್ನುವುದೇ ಅಭ್ಯಾಸವಾಗಿದ್ದಗೀಳುತಜ್ಞರು! ಬದುಕಿನ ಕಷ್ಟಗಳನ್ನು ಹಾಡುಹಗಲಲ್ಲೇ ಕಂಡುಹನಿಹನಿದು ಬತ್ತಿವೆ ಕಂಗಳ ಕೆರೆಗಳು !ವಿಲಿವಿಲಿ ಒದ್ದಾಡುತ್ತಿವೆ ಕಣ್ಣ ಮೀನುಗಳು!ನಿದ್ದೆಯಲ್ಲಿ ನಕ್ಷತ್ರ ಸುಟ್ಟುಕಣ್ಣಬೊಂಬೆಗಳು ಉರುಳಿಬಾಯಿಯ ವಸಡಿಗೆ ಬೀಳುತ್ತವೆಹಲ್ಲುಗಳು ಕಳಚಿ ಹೃದಯಕ್ಕೇ ಉದುರಿಕಚ್ಚಿ ಕಚ್ಚಿ ಕಿತ್ತು ತಿನ್ನತೊಡಗುತ್ತವೆ!ಕೈಗಳು ತಲೆಯನ್ನೇ ಕಿತ್ತುಪಕ್ಕಕ್ಕೆ ಎಸೆಯುತ್ತವೆಮೆದುಳನ್ನೇ ಗೆದ್ದಲು ತಿನ್ನುವನೋವನ್ನು ಸಹಿಸಲಾಗದೆ ಚೀರಿ!ಮುಂಡವು ಮಂಡೆಯಿಲ್ಲದೆಯೇಆಗ […]

ಅವಳೂ ಹಾಗೇ .

ಕವಿತೆ ಅವಳೂ ಹಾಗೇ . ಡಾ. ರೇಣುಕಾ ಅರುಣ ಕಠಾರಿ ಬೀಜ ಸಸಿಯಾಗುವ ಹಾಗೆ,ಸಸಿ ಮರವಾಗುವ ಹಾಗೆ,ಮರದಲಿ ಕಾಯಾಗಿ ಹಣ್ಣಾದ ಹಾಗೇಅವಳೂ ಹಾಗೆ., ಮಳೆ ಹನಿಗೆ ಸೂರ್ಯ ಚುಂಬನಕಾಮನ ಬಿಲ್ಲಿನಂದದ ಹಾಗೇಅವಳೂ ಹಾಗೇ., ಮುಡಿಬಿಟ್ಟು ಮೊಲೆಮೂಡಿಚಿತ್ತರಾದಿ ರವಕೆ ಬಿಗಿಯಾದ ಹಾಗೇಅವಳೂ ಹಾಗೇ., ನಿತ್ಯವೂ ಕುಡಿ ಕುಡಿದಷ್ಟುಮಧು ತು..$ ತುಂಬಿ ಬಂದುಕಪ್ಪೆ ಚಿಪ್ಪಿನ ಮುತ್ತಿನ ಹೊಳಪಿನ ಹಾಗೇಅವಳೂ ಹಾಗೇ., ಮೈಮುರಿದು ನಾಚಿ ಕೆನ್ನೆ ಕೆಂಪಾದAತೆಮುಸ್ಸೂಂಜೆ ಮೂಡಣ ನಕ್ಕಂತೆಅವಳೂ ಹಾಗೇ., ಬಯಕೆಯ ಕಾತರಕೆ ಬಾಯಾರಿದಳವಳುಬಾಯಾರಿದೆ ನೆಲಕ್ಕೆಮಳೆ ಬೀಳುವ ತವಕವು ಕಾದಂತೆಅವಳೂ […]

ಹೊಸ ದನಿ – ಹೊಸ ಬನಿ – ೮. ತಲೆ ಬರಹ ಇಲ್ಲದೆಯೂ ತಲೆದೂಗಿಸುವ ನಾಗಶ್ರೀ ಎಸ್ ಅಜಯ್ ಕವಿತೆಗಳು. ಬೆಂಗಳೂರಿನ ಗಾಂಧಿ ಬಜಾರಿಗೆ ಕಾಲ್ನಡಿಗೆಯ ಅಂತರದ ಬಿ.ಪಿ.ವಾಡಿಯಾ ಸಭಾಂಗಣ. ಕವಿ ವಾಸುದೇವ ನಾಡಿಗರ ಕವನ ಸಂಕಲನದ ಬಿಡುಗಡೆ ಸಮಾರಂಭ. ವೇದಿಕೆಯಲ್ಲಿ ಸರ್ವ ಶ್ರೀ ಮೂಡ್ನಾಕೂಡು ಚಿನ್ನಸ್ವಾಮಿ, ಜಿ.ಕೆ.ರವೀಂದ್ರ ಕುಮಾರ್, ಸುಬ್ರಾಯ ಚೊಕ್ಕಾಡಿಯಂಥ ಅತಿರಥ ಮಹಾರಥರು. ಪುಸ್ತಕ ಬಿಡುಗಡೆಯ ಆತಂಕದಲ್ಲಿ ಕವಿ ದಂಪತಿ. ತುಂಬಿದ ಸಭೆಯ ಗೌರವಾನ್ವಿತರಿಗೆಲ್ಲ ಕಲಾಪದ ಸೊಗಸು ಮತ್ತು ಸಂದರ್ಭಕ್ಕೆ ತಕ್ಕ ಕವಿ ನುಡಿಗಳನ್ನೂ […]

Back To Top