ಗಾಂಧಿವಿಶೇಷ
ಸರ್ವೋದಯ
ಪ್ರತಿಯೊಬ್ಬರ ಅಗತ್ಯಗಳನ್ನು ಪ್ರಕ್ರತಿ ಪೂರೈಸಬಲ್ಲದು ಆದರೆ ಆಕರ್ಷಣೆಗಳನ್ನು ಖಂಡಿತ ಅಲ್ಲ.
ಇದು ರಾಷ್ಟ್ರಪಿತ ಗಾಂಧೀಜಿ ಯವರ ನುಡಿ ಮುತ್ತು.
ಅವರ ಗುರಿ ಸ್ವಾತಂತ್ರ್ಯ ಸಂಪಾದನೆಯ ಜೊತೆ ಜೊತೆಗೆ ಆನಂತರದ ದಿನಗಳ ರಾಜಕೀಯ ಶಿಕ್ಷಣ ಆರ್ಥಿಕತೆ ಕೃಷಿ ಮತ್ತು ಕೈಗಾರಿಕೆಯ ಮುನ್ನೋಟ ಸಿದ್ಧಪಡಿಸಿ ತಮ್ಮಕನಸನ್ನು ನನಸಾಗಿಸಲೂ ರಚನಾತ್ಮಕ ಯೋಜನೆಗಳನ್ನು ಹಮ್ಮಿಕೊಂಡಿದ್ದರು . ಅವರ ಮೂಲ ಧ್ಯೇಯ ಸರ್ವರಿಗೆ ಸಮ ಬಾಳು ಸರ್ವರಿಗೆ ಸಮ ಪಾಲು.
ರಾಷ್ಟೀಯ ಏಕತೆಯು ಸಾಮಾಜಿಕ ಸೌಹಾರ್ದತೆಯಿಂದ ಮಾತ್ರ ಸಾಧ್ಯ ಎಂಬುದು ಗಾಂಧೀಜಿಯವರ ನಿಲುವಾಗಿತ್ತು.
ಕೋಮು ,ಅಸ್ಪ್ರಶ್ಯತೆ ,ಶೋಷಣೆ ರಹಿತ ಸಮಾಜದಿಂದ ನವ ಭಾರತ ನಿರ್ಮಾಣ ರಾಮ ರಾಜ್ಯ ಸಾಧ್ಯವೆಂದರು.
ಈ ಸರ್ವೋದಯದ ಪರಿಕಲ್ಪನೆ ಗಾಂಧೀಜಿಯವರಿಗೆ ದೊರಕಿದ ರೀತಿ ಬಹಳ ಸ್ವಾರಸ್ಯಕರವಾದುದು.ಕಾನೂನು ಪದವೀಧರರಾಗಿದ್ದ ಗಾಂಧೀಜಿಯವರು 1893 ರಲ್ಲಿ ದಕ್ಷಿಣ ಆಫ್ರಿಕದ ಕಂಪನಿಯೊಂದರಲ್ಲಿ ಉದ್ಯೋಗ ನಿರ್ವಹಿಸಲು ಹೋಗಿದ್ದಾಗ ಜೋಹಾನ್ಸ್ ಬರ್ಗ್ನ ನಿಂದ ರೈಲು ಪ್ರಯಾಣ ಮಾಡುತ್ತಿದ್ದರು ಆಗ ಅವರ ಕಿರಿಯ ಮಿತ್ರ ಪೋಲಕ್ ಎಂಬುವರು ಈ ಪುಸ್ತಕ ನಿಮ್ಮೊಂದಿಗಿರಲಿ ಪ್ರಯಾಣದ ವೇಳೆ ಓದಿರಿ ನಿಮಗಿದು ಸಮ್ಮತವಾಗುವುದು ಎಂದು ಹೇಳಿ ರಸ್ಕಿನ್ ಬರೆದಿದ್ದ ಅಂಟು ದಿಸ್ ಲಾಸ್ಟ್ ,ಕಟ್ಟಕಡೆಯವನತ್ತ , ರೈಲು ಹೊರಡುತ್ತಿದ್ದಂತೆ ಪುಸ್ತಕದ ಹವ್ಯಾಸವಿದ್ದ ಗಾಂಧೀಜಿ ಓದಲಾರಂಭಿಸಿದರು ಅದನ್ನು ಮುಗಿಸುವವರೆಗೂ ಹೊರ ಪ್ರಪಂಚದ ಅರಿವೇ ಇರಲಿಲ್ಲ .
ಇದರಿಂದ ಅವರು ಕಂಡುಕೊಂಡ ಮೂರು ಅಂಶವೆಂದರೆ
1,ವ್ಯಕ್ತಿಯ ಹಿತ ಆತನ ಸಮಾ ಜದ ಹಿತದಲ್ಲಿಯೆ ಅಡಗಿದೆ.
2.ವ್ಯಕ್ತಿಯಲ್ಲಿ ಮೇಲು ಕೀಳೆಂಬುದಿಲ್ಲ.ವೃತ್ತಿಯಲ್ಲೂ ಮೇಲು ಕೀಳೆಂಬುದಿಲ್ಲ ಸಮಾನ ಗೌರವ ಮುಖ್ಯ .
3. ಶ್ರಮ ಜೀವಿಗಳ ಜೀವನವೇ ಶ್ರೇಷ್ಟ .
ಈ ಹೊತ್ತಿಗೆ ಯನ್ನು ತಮ್ಮ ಮಾತೃಭಾಷೆ ಗುಜರಾತಿಗೆ ಅನುವಾದಿಸಿದರು ಸರ್ವೋದಯವೆಂದು ಹೆಸರಿಟ್ಟರು .
ಸುಮಾರು 2000 ವರ್ಷಗಳ ಹಿಂದೆ ಜಿನಾಚಾರ್ಯ ಸಮಂತಭದ್ರರು ಈ ಸರ್ವೋದಯ ಪವಿತ್ರವಾದುದು ಒಳ್ಳೆಯದು ಎಂದಿದ್ದಾರೆ.ಸರ್ವೋದಯದ ಹಾದಿಯನ್ನು ಅನುಸರಿಸಿದವರೆಂದರೆ,
1.ಮಹಾತ್ಮ ಗಾಂಧೀಜಿ- ಭಾರತಕ್ಕೆ ಬಂದ ಮೇಲೆ ಸಾಬರಮತಿ ಮತ್ತು ಸೇವಾಗ್ರಾಮಗಳಲ್ಲಿ ಶ್ರಮಾಧಾರಿತ ಜೀವನಕ್ರಮ ಜಾರಿಗೆ ತಂದರು.
2 ವಿನೋಬಾ ಭಾವೆಯವರು
1951_ರಲ್ಲಿ ತೆಲಂಗಾಣದ ಪೋಚಮ್ ಎಂಬ ಹಳ್ಳಿಯಲ್ಲಿ ಭೂದಾನ ಪ್ರಾರಂಭಿಸಿದರು. ೭೫೦೦೦ ಕಿಮೀ ಪಾದ ಯಾತ್ರೆಮಾಡಿ ಉಳ್ಳವರಿಂದ ಇಲ್ಲದವರಿಗೆ ಭೂಮಿ ಹಂಚಿದ್ದರು ಜೊತೆಗೆ ಸಂಪತ್ತಿನ ದಾನ ,ಜ್ಞಾನ ದಾನ ,ಶ್ರಮ ದಾನ, ವನ್ನು ಜಾರಿಗೊಳಿಸಿದರು.
3. ಜಯಪ್ರಕಾಶ್ ನಾರಾಯಣ್.
೧೯೨೯ರಲ್ಲಿ ಗಾಂಧೀಜಿಯವರನ್ನು ಭೇಟಿ ಮಾಡಿದ್ದರು . ೨೫ವರ್ಷ ಹೋರಾಟ ನಡೆಸಿ ೧೯೬೫ _ರಲ್ಲಿ ಶಾಂತಿಯುತ ಹೋರಾಟಕ್ಕಾಗಿ ಮ್ಯಾಗ್ಸೇಸ್ ಪ್ರಶಸ್ತಿ ಲಭಿಸಿತ್ತು. ಮಧ್ಯ ಪ್ರದೇಶದ ಚಂಬಲ್ ಕಣಿವೆ ಢಕಾಯಿತರನ್ನು ತಮ್ಮ ಆತ್ಮ ಶಕ್ತಿಯ ಮೂಲಕ ಪರಿವರ್ತಿಸಿದರು.
ಪ್ರಪಂಚದಲ್ಲಿ ಎಲ್ಲರೂ ಒಳ್ಳೆಯದನ್ನು ಹೇಳಿದ್ದಾಗಿದೆ ಉಳಿದಿರುವುದು ಆಚರಣೆ ಮಾತ್ರ.-ಸ್ಯಾಕ್ರಟೀಸ್
ಲೋಕಾ ಸಮಸ್ತಸುಖಿನೋಭವಂತು ಎಂಬ ವೇ ದದಸಾರವೇ ಸರ್ವೋದಯದ ತಾತ್ಪರ್ಯವಾಗಿದೆ.
ಕರೋನಾದಿಂದ ನಾವು ಸಾಕಷ್ಟು ಪಾಠ ಕಲಿತಿದ್ದೇವೆ ,ಇನ್ನು ಮುಂದಾದರೂ ನಮ್ಮಲ್ಲಿ ಮಾನವೀಯ ಮೌಲ್ಯಗಳು ಜಾಗೃತ ಗೊಳ್ಳಲಿ ಹಾಗೆ ಸದಾಶಯದ ಹಾದಿ ನಮ್ಮದಾಗಲಿ.
ಜೈ ಭಾರತ್.
*******************************
ಶ್ರೀವಲ್ಲಿ ಶೇಷಾದ್ರಿ.
ಅದ್ಭುತವಾಗಿ ಬರೆದಿದ್ದೀರಿ. ಶ್ರೀವಲ್ಲಿ ಶೇಷಾದ್ರಿ ಮೇಡಂ. ಅಭಿನಂದನೆಗಳು