“ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟ ಕ್ಲೇಶವನ್ನೆಲ್ಲಾ ನಾನೂ ಪಡಬೇಕು: ಮಹಾತ್ಮ ಗಾಂಧೀಜಿ” ವಿಶೇಷ ಲೇಖನ ಗೊರೂರು ಅನಂತರಾಜು
“ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟ ಕ್ಲೇಶವನ್ನೆಲ್ಲಾ ನಾನೂ ಪಡಬೇಕು: ಮಹಾತ್ಮ ಗಾಂಧೀಜಿ” ವಿಶೇಷ ಲೇಖನ ಗೊರೂರು ಅನಂತರಾಜು
“ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟ ಕ್ಲೇಶವನ್ನೆಲ್ಲಾ ನಾನೂ ಪಡಬೇಕು: ಮಹಾತ್ಮ ಗಾಂಧೀಜಿ” ವಿಶೇಷ ಲೇಖನ ಗೊರೂರು ಅನಂತರಾಜು
ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ : ಶತಮಾನೋತ್ಸವ ಡಾ.ಎಸ್.ಬಿ. ಬಸೆಟ್ಟಿ ಅವರ ವಿಶೇಷ ಲೇಖನ
ಗಾಂಧಿ ವಿಶೇಷ ರಾಮಭಕ್ತ ಗಾಂಧೀಜಿ-– ಭಾರತವ ಬೆಳಗಿಸಲು ತತ್ವಗಳ ಮಾಡಿ, ದೇಶವನುಳಿಸಲು ಅಹಿರ್ನಿಶಿ ದುಡಿದರು….ಕಾಲುನಡಿಗೆಯೇ ಮುದ್ರೆಯಾಗಿಸಿ, ನಿದ್ರೆ ಮರೆತು ದೇಹದಂಡಿಸಿ ಸಾಗಿದರು…. ಊರೂರು ಅಲೆದರು, ಜನಗಳ ಒಟ್ಟಾಗಿಸಿ ತಾನೊಬ್ಬನೇ ಎಂದು ಮೆರೆಯದವರು….ದಂಡಿನೊಡನೆ ನಡಿಗೆ ಹೊರಟು, ಉಪ್ಪಿಗೆ ತೆರ ತೆರಲಾಗದೆಂದು ಸತ್ಯಾಗ್ರಹವ ಘೋಷಿಸಿದವರು…. ಹೋರಾಟಕ್ಕಾಗಿಯೇ ಹುಟ್ಟಿಬಂದು ಹೊಡೆದಾಟವ ಒಪ್ಪದಾತ್ಮ, ಶಾಂತಿಯನ್ನಪ್ಪಿ ನಡೆಯಿತು…ಇಷ್ಟಪಟ್ಟ ಕಡಲೆಕಾಯಿ, ನಿತ್ಯ ಪ್ರಯೋಗದ ಜೀವನ ಈ ಒಣದೇಹಿಯ ಮುಂದೆ ಮಂಡಿಯೂರಿತು…. ಹುಡುಕಿಬಂದ ಕಷ್ಟಗಳನು ಇಷ್ಟಪಟ್ಟು ಮೆಟ್ಟಿನಡೆದು, ಗದ್ದುಗೆಯಾಸೆ ಪಡದವರು….ದೇಶವೊಂದೇ ಗಮನದಲ್ಲಿ, ಸೇವೆಯೊಂದೇ ಕಾರ್ಯದಲೆಂದು ತೋರಲು ಮುಂದಾಳಾಗಿ ನಡೆದವರು….. ದೇಶವ ಒಗ್ಗೂಡಿಸಿ, ಆಂಗ್ಲರ ಬೆಚ್ಚಿಸಿದ ಸತ್ಯವಂತ ಮಹಾತ್ಮನ ಅಸಹಕಾರ ಚಳುವಳಿ….ಕನ್ನಡಕಧಾರಿಯ ಉಪವಾಸ ಸತ್ಯಾಗ್ರಹಕೆ, ನೀಡಿ ತೊಲಗಿದರು ಭಾರತಕ್ಕೆ ಸ್ವಾತಂತ್ರ್ಯದ ಬಳುವಳಿ…. ಕೋಲನು ಹಿಡಿದು ದೇಶವಿದೇಶ ಅಲೆದ, ಸ್ವಚ್ಛತಾ ಕಾರ್ಯದ ರೂವಾರಿ ಇವರು….ದೇಹ ಸವೆಸಿ, ಅಹಿಂಸೆಯ ಪಸರಿಸಿ, ಗುಂಡೇಟನುಂಡು ಅಸುನೀಗಿದವರು…. ಗುಜರಾತಿನಲ್ಲಿ ಜನಿಸಿ, ಮೊಳಗಿಸಿ, ಎಚ್ಚರಿಸಿ, ಹಾಕಿದರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ….ಅಂದಿಗೂ, ಇಂದಿಗೂ, ಎಂದೆಂದಿಗೂ ಧರ್ಮ, ಅಹಿಂಸೆಯ ಜಗಕೆ ತೋರಿ ಅಮರರಾದರು ರಾಮಭಕ್ತ ನಮ್ಮ ಕರಮಚಂದ ಗಾಂಧಿ…. ****************************** ಶಾಂತಿವಾಸು
ಗಾಂಧಿ ವಿಶೇಷ ಕನ್ನಡ ಶಾಯರಿಗಳು 01 ಅಜ್ಜ… ರೇಛಲೋ ಇತ್ತು ನೋಡ್ರೀನಿಮ್ಮ ಕಾಲ್ದಗಾಸತ್ಯ, ನ್ಯಾಯ, ನೀತಿ, ಧರ್ಮಕಾಲು ಮುಕ್ಕಡೋ ಇದ್ದವ್ರೀಈಗಲೂ ಇದ್ದಾವ್… ರೀಕಿಮ್ಮತ್ ಇಲ್ರೀಅವೇ..!ಹಿಕ್ಮತ್ ಮಾಡ್ಯಾರ್ರೀ !! 02 ಬಾಪುಸ್ವಾತಂತ್ರ್ಯ ಪೂರ್ವದಾಗನಿಮ್ಮಾತು ತಣ್ಣಗಿತ್ತುಬೆಚ್ಚಗಾತು ರಕ್ತಹರಿಲಿಲ್ಲ ಮತ್ತೆ..?ಅದೇ ಮಹಾತ್ಮನತಾಕತ್ತು ಅಲ್ವೇನ್ರೀ…? 03 ಮಹಾತ್ಮ ಅಂಥಜಗತ್ತಿನಾಗ್ಕ್ಯಾಮೆರಾದೊಳಗಕೂಡಲಿಲ್ಲ ನೋಡ್ರೀ..!ನಮ್ಮ ಎದಿಯಾಗನಿಮ್ಮ ಇಟಗೊಂಡಿವ್ರೀಹಂಗಾ ಬದುಕ್ದ್ರೀ ನೀವು…!! 04 ಬ್ರಿಟಿಷರಿಗೆದಂಡಿಗೆ ಹೋದ್ರುಚಳುವಳಿಗೆ ಹೋದ್ರುನಿಮ್ಮ ನಡಿಗೆಹಾವು ಹರದ್ಹಂಗಸಾಯ್ ಹೊಡದ್ಹಂಗರೀ…! 05 ಖರೇ ಹೇಳಾವ್ರೇನೀವು ಒಬ್ಬರೇನೋಡ್ರಲ್ಲಾ..!ರಾಮ್ ರಹೀಮ್ಮನ್ ಮೇ ಹೈಸಬ್ಕಾ ಭಗವಾನ್ ಏಕ್ಹೈ ಅಂದೋರೂ..!! *************************** ಹುಳಿಯಾರ್ ಷಬ್ಬೀರ್
ಗಾಂಧಿ ವಿಶೇಷ ಗಾಂಧೀಗೆ, ಗಾಂಧೀ ಎಂದಾಗ,ಅದಾರು ಈ ಗಾಂಧೀಎಂಬ ಪ್ರಶ್ನೆ ಭುಗಿಲೆನ್ನುತ್ತದೆ.ಹೀಗೀಗೆ ಹೀಗೀಗೆ ಎಂದು ಬಿಡಿಸಿಟ್ಟಾಗ,ಓ ಅದಾ,ಲಂಗೋಟಿ ಅಜ್ಜ ಎನ್ನದವರಿಲ್ಲ.ಮೂರ್ಖ ಮುದುಕ,ಸತ್ತ ಅಹಿಂಸೆಯ ಫಾರ್ಮಲಾ ಬಳಸಿಬ್ರಟಿಷರನ್ನೇನೋ ನಡುಗಿಸಿದ ಆದರೆಭಾರತೀಯನಿಂದೇ ಮುಳುಗಿದ.ಎಷ್ಟೆಲ್ಲಾ ಇತ್ತು,ಕುರ್ಚಿಯ ಗಟ್ಟಿ ತಾಕತ್ತುಇರಲಿಲ್ಲವೆಂದ ಮೇಲೆಅವನದೇನು ಆದರ್ಶ.ಹಗರಣದಿ ಸಿಲುಕಿಜೇಲಿನಲ್ಲಿದ್ದೂ ಮಂತ್ರಿಯಾಗುವಈಗಿನ ಬಿಳಿ ಟೋಪಿಯವರಲ್ಲಿಇವನ್ಯಾವ ಲೆಕ್ಕ.ನಿಜವಾಗಿಯೂ ತನ್ನಫ್ಯೂಚರ್ ಹಾಳು ಮಾಡಿಕೊಂಡ.ಸ್ವತಂತ್ರ ಭಾರತ,ಸ್ವತಂತ್ರ ನಾಡೆಂದುದಿಕ್ಕು ದಿವಾಳಿಯಿಲ್ಲದೇ ಅಡ್ಡಾಡಿಬದುಕ ಕೊನೆ ಮಾಡಿಕೊಂಡ.ಆದರೂ ಅಜ್ಜಮತ್ತೆ ಹುಟ್ಟಿ ಬರುವಯತ್ನ ಮಾತ್ರ ಬೇಡ.ಬಂದರೂ ನಾ ಗಾಂಧೀಎನ್ನಬೇಡ.ಪಕ್ಷ,ಓಟು,ಕುರ್ಚಿಯಲಿನಿನ್ನ ಎಳದಾಡಿಕ್ಷಣ ಕ್ಷಣವೂ ಕೊಲ್ಲುತ್ತಾರೆಅಷ್ಟೊಂದು ಮುಂದುವರೆದಿದೆನೀ ಕಟ್ಟಿದ ನಿನ್ನ ಭಾರತ. ************************************ ರಜಿಯಾ ಬಳಬಟ್ಟಿ
ಗಾಂಧಿ ವಿಶೇಷ ಗಾಂಧಿ ದಿಗ್ದರ್ಶನ ಕಲಿಸಿಕೊಟ್ಟ ಪಾಠ ಶೂನ್ಯಹಣದಾಹ, ಅಧಿಕಾರ ಮೋಹಕ್ಕೆ ನಾಗಾಲೋಟಬೆಟ್ಟದಷ್ಟು ಪಾಪಕ್ಕೆಕ್ಷಮೆಯೂ ಸಿಗಲಿಕ್ಕಿಲ್ಲ !ವಿದ್ಯೆ ವಂಚಿತ ಬಾಲಕರಶೋಷಿತ ಕಿಶೋರಿಯರಹಸಿದ ಕಣ್ಬೆಳಕಲ್ಲಿ ಜಗದ ಹೆಣವೇ ಕಾಣುತಿದೆ;ಗಾಳಿಯಲ್ಲಾದರೂ ಗಾಂಧಿವಾದ ತೀಡಬಾರದೇನೆರಳು ಬಿಸಿಲಿನ ನಡುವೆದಣಿದ ದೀನರಿಗೆ ಭಾಗ್ಯ ಯೋಜನೆಮರಿಚಿಕೆಯಾಗಿ, ಮಸಲತ್ತು ನಡೆದಿದೆಇನ್ಯಾರದೊ ಜೇಬಿಗೆ ತುತ್ತಾಗಿದೆ.ಭ್ರಷ್ಟ ನೋಡುವುದೇ ಕಷ್ಟಹಗಲಿನಲ್ಲೇ ಒಂಟಿ ಹೆಣ್ಣು ತಿರುಗಾಡುವಂತಿಲ್ಲಇನ್ನೆಲ್ಲಿ ರಾಮರಾಜ್ಯ! ಕನಸೇ ಅದುಭಗ್ನ ರಾಜಕಾರಣ,ಸೊರಗು ದೇಶಪ್ರೇಮಸಾವಿಗೆ ಶರಣಾಗುವ ಅನ್ನದಾತರುವ್ಯಸನಿ ಯುವಕರು, ಢೊಂಗಿ ದಾನಿಗಳುಅಮಾನವೀಯ ಅಂಧಾನುಕರಣೆಗೆಚೂರಾದರೂ ಗಾಂಧಿತತ್ವ ನೆನಪಾಗಲಿ…ಶ್ವೇತಕಾಯ,ನಡುವಲ್ಲಿ ಕೆಂಪುಬತ್ತಿ ತಿರುಗುತ್ತಕೇ ಕೇ ಹಾಕುತ್ತ ರಥಗಳ ಹಿಂಡುದೊರಗು ಖಾದಿ,ಅಲ್ಲ ಮೆರಗು,ಪೊಗರುಧರಿಸಿದ ನಾಯಕರು !ಸಿಂಹಾಸನಕ್ಕೆ ವರಗಿ,ಹಾರಕ್ಕೆ ಕೊರಳೊಡ್ಡಿಮೈಕಾಸುರನ ಮೇಲೆರಗಿಭಾಷಣಶೂರರು,ಹೊಗಳುಭಟ್ಟರುಮಹಾತ್ಮನೆಂದು ಜಪಿಸುತ್ತಾರೆ.ಗಾಂಧಿನಿಯಮ ಯಾರಿಗೂ ಬೇಕಿಲ್ಲನಡೆಯುವುದೆಲ್ಲ ನಿಯಮಬಾಹಿರವೇ !ಇತ್ತೀಚೆಗೆ ಹೊಸ ಚಹಾದ ಪರಿಮಳ ಸೂಸಿದೆಸ್ವಚ್ಛಭಾರತದ ಪೊರಕೆಗಳು ಅಲ್ಲಲ್ಲಿ ಸೆಳೆಯುತ್ತಿವೆಕೊಳೆಯಾಗಿದ್ದ ನನ್ನ ಚಿತ್ರ ಈಗ ಗರಿಗರಿನವರಂಗುಗಳಲ್ಲಿ ಓಡಾಡುತ್ತಿವೆ.ನಕಲಿ ಫೋಟೊಗಳು ಇದ್ದಂತಿಲ್ಲಒಂದೇಕಡೆ ಬೀಗಜಡಿದು ಕೂತಿಲ್ಲವೆಂದುಸ್ವಲ್ಪ ನಿಟ್ಟುಸಿರು ಬಿಟ್ರೇ……ಹಗರಣಗಳು, ಪ್ರಕರಣಗಳು ಚಳುವಳಿ ರೂಪತಾಳಿಮೀ ..ಟೂ ಮೆನ್ ಟೂ ಗಳ ಕೂಗಾಟಧರ್ಮದ ಮೆಟ್ಟಿಲಿಗೆ ಕ್ರಾಂತಿಹೆಜ್ಜೆಯ ಹುನ್ನಾರಸಂಸ್ಕೃತಿ, ಸಂಪ್ರದಾಯ, ಸಂಸ್ಕಾರಗಳು ಗಾಳಿಗೆ ತೂರಿವೆಶಿಕ್ಷಣದಲ್ಲಿ ಸಮಾನತೆ,ದುರ್ಬಲರ ಸಂರಕ್ಷಣೆ,ಗಡಿಕಾಯ್ವ ಯೋಧರ ಸ್ಥಿತಿಗತಿಗಳ ಚಿಂತನೆಯಿಲ್ಲ.ಭಾರತೀಯತೆ, ಮಾನವೀಯತೆಯನ್ನೇ…ಮರೆತಿದ್ದಾರೆ !!! ಹೇ ರಾಮ ಹೇ ರಾಮ ************************************* ವಿಭಾ ಪುರೋಹಿತ್
ಗಾಂಧಿ ವಿಶೇಷ ಮತ್ತೆ ಹುಟ್ಟಿ ಬನ್ನಿ ಗಾಂಧಿ ಮತ್ತೆ ಹುಟ್ಟಿ ಬನ್ನಿ ಓ ಪರಮಪೂಜ್ಯ ಗಾಂಧಿಅಹಿಂಸೆ ಏರಲೇಬೇಕಿದೆ ಎಲ್ಲರೆದೆಯ ಗಾದಿಸತ್ಯ ಸ್ವಾವಲಂಬನೆ ನೀವು ನಡೆದ ಹಾದಿಆತ್ಮನಿರ್ಭರ ನಡೆಗೆ ಅದುವೆ ತಾನೇ ಬುನಾದಿ ಬಿತ್ತುತ್ತಲೇ ಸಾಗಿದಿರಿ ಅಹಿಂಸೆಯ ಬೀಜಅವು ಮೇಲೆದ್ದು ಚಿಗುರಿ ಮರವಾದದ್ದು ನಿಜಅಲ್ಲಲ್ಲಿ ತೂಗುತಿವೆ ಪ್ರೀತಿ ಗೂಡುಗಳ ಸಾಲುಗೆದ್ದಲು,ವಿಷ ಸರ್ಪಗಳೂ ಕೇಳುತಿವೆ ಪಾಲು ಸತ್ಯವೆಂದರೆ ನೀವು ಮಹಾತ್ಮರೆಂದರೆ ನೀವುನಿತ್ಯ ನಿಮ್ಮ ಭಜನೆ ಭಾಷಣಗಳು ಹಲವುನಿಮ್ಮ ಜೀವನಸಾರ ನುಡಿಗೆ ಮೀಸಲು ಮಾಡಿನಿಮ್ಮಂತೆ ಬಾಳುವುದನು ಮರೆತೆವು ನೋಡಿ ನೀವು ಹಚ್ಚಿಟ್ಟ ದೀಪ ಕಾಣದು ಹೊರಗಣ್ಣಿಗೆಒಳಗಣ್ಣ ರೆಪ್ಪೆ ಬಿಡಿಸೊ ಕಲೆ ಸಿದ್ದಿಸಿಲ್ಲ ನಮಗೆಬೇಡುವೆವು ಮತ್ತೆ ಬನ್ನಿ ಪರಮ ಪೂಜ್ಯ ಗಾಂಧಿಎಲ್ಲ ಹೃದಯದೊಳಗೆ ಮತ್ತೆ ಜನಿಸಿ ಬನ್ನಿ ಗಾಂಧಿ ****************************************** ರೇಖಾ ಭಟ್
ಗಾಂಧಿ ವಿಶೇಷ ಎರಡು ಕವಿತೆಗಳು ಸ್ಮಾರಕ ಅಂದು ಸ್ವತಂತ್ರ ಪೂರ್ವದಂದು ತನು ಮನ ತೊರೆದು ಕುಡಿ ಕುಟುಂಬ ಬಿಟ್ಟು ಬಂಧು ಬಳಗ ಮರೆತು ಸ್ವತಂತ್ರಕ್ಕಾಗಿ ಪಣ್ಣ ತೊಟ್ಟು ನಿಂತೆ. ಇಂದಿನ ರಾಜಕಾರಣಿಗಳು ಅಂತರಾತ್ಮಕ್ಕೆ ಹೆದರಿ ಭದ್ರತಾ ಸಿಬ್ಬಂದಿಯಾಗಿ ನಿನ್ನನು ಸೌಧದ ಹೊರಗೆ ಇಟ್ಟಿದ್ದಾರೆ ಆದರೆ, ಬೆವರು ಹರಿಸುವ ಕಾರ್ಮಿಕರು ಗೌರವಾರ್ಥಕವಾಗಿ ಉದ್ಯಾನವನದಲ್ಲಿ ಪ್ರತಿಷ್ಠಾಪಿಸಿ ಸ್ಮರಿಸಿ ಮೆರೆಸಿದ್ದಾರೆ ಜನಸಂದಣಿಯ ನಡುವೆ ಮೌನವಾಗಿ ನೀನು ಸ್ಮಾರಕವಾಗಿ ನಿಂತಿದ್ದೀಯಾ ಗಾಂದಿ (ಆಂಗ್ಲದ ಮೌನಿಮೆಂಟ್ ಅನುವಾದ) ಪರಿಮಳ ಗಾಂಧಿಯ ಕಸ್ತೂರಿ ಭಾರತದ ಕಸ್ತೂರಿ ಗುಜುರಾತಿನ ಕುವರಿ ದೇಶದ ಉದ್ದಗಲಕ್ಕೂ ನಿನ್ನ ನಾಮ ಸ್ಮರಣೆ ವಿವಿಧ ಸಂಘ ಸಂಸ್ಥೆಗಳಲ್ಲಿ ಹಾದಿ ಬೀದಿಗಳಲ್ಲಿ ಬಾಪುವಿನ ಹೆಜ್ಜೆಗೆ ಹೆಜ್ಜೆ ಹಾಕಿ ಬಾಪುವಿನ ನೆರಳಾದಾಕ್ಕೆ ಬಾಪುವಿನ ಭಾವಕ್ಕೆ ಲಹರಿಯಾದಾದ್ದಕ್ಕೆ ಭಾರತದ ಸಂಸ್ಕೃತಿ ಸಂಕೇತವಾದಾದ್ದಕ್ಕೆ ನಿನ್ನ ತ್ಯಾಗಕ್ಕೆ ಎಲ್ಲೆಯುಂಟೆ ಕುಟುಂಬ ದೇಶಕ್ಕೆ ಗಾಂಧಿ ನೆನಪಾದರೆ ಕಸ್ತೂರಿ ಬಾಯಿ ಮರೆಯಾಗದು ಗಾಂಧಿ ಪರಿಮಳ ಕಸ್ತೂರಿ ಭಾರತದ ಕಸ್ತೂರಿ ಬಾಯಿ ********************************************* ರತ್ನಾ ನಾಗರಾಜ್
ಗಾಂಧಿ ವಿಶೇಷ ಮಹಾತ್ಮ ಮಹಾತ್ಮನಾಗಿದ್ದು ಗಾಂಧೀಜಿಸಾಮಾನ್ಯರಲ್ಲಿ ಅಸಾಮಾನ್ಯನಾಗಿದ್ದಕ್ಕೆ !ದೇವರ ಅಪರಾವತಾರವೆಂದೇನೂ ಅಲ್ಲಅನುಸರಣೆಯಿರಲಿ ಆರಾಧನೆ ಬೇಕಿಲ್ಲ ನಿನ್ನೊಳಗಿನ ನಿನ್ನ ಕಂಡುಕೊಂಡೆಪತಿತನಾಗಿಯೂ ಪಾವನನಾದೆಮಾರಲಿಲ್ಲ ನಿನ್ನಾತ್ಮಸಾಕ್ಷಿಯಕಕ್ಷಿದಾರರ ವಕಾಲತ್ತಿನ ತಕ್ಕಡಿಯಲ್ಲಿಟ್ಟುನಿಯತ್ತಿನದೇ ಮೇಲುಗೈ ! ಘನತೆಯಿತ್ತೆ ಶ್ರಮಿಕನ ಬೆವರಿಗೆದುಡಿವ ತನುವಿನ ಬೆವರ ಹನಿಸುಖದ ವ್ಯಾಧಿಗಳ ಮದ್ದೆಂಬ ಮತಿಯಿದ್ದವದುಡಿಮೆಯ ಹಿರಿಮೆಯರಿತ ಬಹುರೂಪಿತನ್ನುಡುಗೆಯ ತಾನೆ ಹೊಲಿದ ಸಿಂಪಿಗಗೋಖಲೆಯೇ ಮೆಚ್ಚಿದ ಮಡಿವಾಳಸಮಗಾರನ ವೈದ್ಯನಂತೆ ಕಂಡ ಅಸ್ಪೃಶ್ಯತಾ ವಿರೋಧಿಭಂಗಿಗಳ ಹೀನಾಯಕೆ ಮರುಗಿದ ಮಾನವತಾವಾದಿಜೈಲಿಗಟ್ಟಿದವಗೆ ಮೆಟ್ಟು ಹೊಲಿದ ಮೋಚಿಸಹಕಾರ ಕೃಷಿಯ ಲಾಭವರಿತ ಸಾವಯವ ಕೃಷಿಕಬಡವರಿಗಾಗಿ ಚಂದಾ ಎತ್ತಿದ ತಿರುಕಆಹಾರವೇ ರೋಗಕೆ ಮದ್ದೆಂದ ಧನ್ವಂತರಿಉನ್ನತಿಗಾಗಿ ಕಲೆಯೆಂದರಿತ ಲೇಖಕಸಮಾನತೆಗೆ ಹೋರಾಡಿದ ದ.ಆಫ್ರಿಕಾದ ದಳಪತಿಸಿದ್ಧಾಂತಗಳಿಗೆ ಸೆರೆಯಾದ ಜೈಲು ಹಕ್ಕಿ ದಾಂಪತ್ಯವು ಸೊಗದ ಸಾಂಗತ್ಯವೆಂದುದೌರ್ಜನ್ಯವ ದೂರವಿಟ್ಟ ಸಂಸಾರಿಗಯಂತ್ರಕ್ಕಲ್ಲ ಯಂತ್ರ ವ್ಯಾಮೋಹ ದ್ವೇಷಿಧರ್ಮವಾಗಲಿಲ್ಲ ನಿನಗೆ ರಾಮನಾಮಅದೊಂದು ಭರವಸೆಯ ಮಂತ್ರ!ನೋಡಿದೆವು ‘ಹರಿಶ್ಚಂದ್ರ ನಾಟಕ’ ನಿನ್ನಂತೆತೊಡಲಿಲ್ಲ ಸತ್ಯವ್ರತದ ದೀಕ್ಷೆ ನಿನ್ನಂತೆಸ್ವಾತಂತ್ರ ಗಳಿಕೆಗೆ ಅಹಿಂಸೆಯೇ ಆಯುಧಬ್ರಿಟಿಷರ ನಡುಗಿಸಿದ ಸತ್ಯಾಗ್ರಹದ ಪ್ರವರ್ತಕಸತ್ಯಾನ್ವೇಷಣೆಯೆ ನಿನ್ನ ಬದುಕಿನ ಪ್ರಯೋಗಅರೆಬೆತ್ತಲೆಯೆ ಅರಮನೆಗೆ ಹೋದ ಫಕೀರನಡೆನುಡಿಗಳೊಂದಾದ ದಿಟ್ಟತನದ ಬದುಕುಧಿಕ್ಕರಿಸಿ ಅಧಿಕಾರವ ದೂರ ಸರಿದ ಸಂತ ಮಹಾತ್ಮನ ಸಂಕೀರ್ಣ ಬದುಕಿನಒಳನೋಟಕ್ಕಷ್ಟೆ ದಕ್ಕುವುದು ಕಾಣ್ಕೆಪಕ್ಷಿನೋಟಕ್ಕೆ ಅವರವರ ಎಣಿಕೆ ******************************* ಎಂ. ಆರ್. ಅನಸೂಯ
ಗಾಂಧಿ ವಿಶೇಷ ಗಾಂಧಿ ವಿಶೇಷ ಬೇಳೆ ಬೇಯಿಸಿಕೊಳ್ಳುತಿರುವರು ನಿನ್ನ ಹೆಸರಿನಲ್ಲಿಹೊಟ್ಟೆ ತುಂಬಿಸಿಕೊಳ್ಳುತಿರುವರು ನಿನ್ನ ಹೆಸರಿನಲ್ಲಿ ಹೊಗಳಿಕೆ-ತೆಗಳಿಕೆ ನಡೆಯುತಿವೆ ಅಂಧಭಕ್ತಿಯಲ್ಲಿಚಪಲ ತೀರಿಸಿಕೊಳ್ಳುತಿರುವರು ನಿನ್ನ ಹೆಸರಿನಲ್ಲಿ ನಿನ್ನ ಆದರ್ಶಗಳು ಪುಸ್ತಕಗಳಲ್ಲಿ ಮರಿ ಹಾಕುತಿವೆಮೌಲ್ಯಗಳನ್ನು ಕೊಲ್ಲುತಿರುವರು ನಿನ್ನ ಹೆಸರಿನಲ್ಲಿ ಪೂಜಿಸುತಿರುವರು ನಿನ್ನ ಸುಂದರ ಭಾವಚಿತ್ರಗಳನ್ನುವ್ಯಕ್ತಿತ್ವವನ್ನು ಮಾರಿಕೊಳ್ಳುತಿರುವರು ನಿನ್ನ ಹೆಸರಿನಲ್ಲಿ ಗಾಂಧಿಯನ್ನು ಮನುಷ್ಯನೆಂದು ತಿಳಿಯಲಿಲ್ಲ ಮಲ್ಲಿಸಂಪತ್ತನ್ನು ಲೂಟಿ ಮಾಡುತಿರುವರು ನಿನ್ನ ಹೆಸರಿನಲ್ಲಿ ******************************** ರತ್ನರಾಯ ಮಲ್ಲ
You cannot copy content of this page