ಕವಿತೆ
ರಜಿಯಾ ಕೆ ಭಾವಿಕಟ್ಟಿ
ನಿಮ್ಮಂತೆ ಇರಲಾಗದೆ ನನ್ನಂತೆ ನಾನು
ಇರಲಾಗದೆ.ಪರರ ಚಿಂತೆಗೆ ಚಡಪಡಿಸುತಿರೆ
ಮನದ ದುಗುಢ ಇಮ್ಮಡಿಯಾಗುತಲಿ.
ದಿನದೂಡುವಂತಾಗಿದೆ.
ಇರುವುದನ್ನು ಇಲ್ಲದಂತೆ ಕಂಡು ಇಲ್ಲದನ್ನು
ಇರುವುದೆಂಬ ಭಾವದಲಿ ಬದುಕು ಬರುಡಾಗಲು
ಸಿದ್ಧಸ್ಥವಾಗುತಲಿ ದೂರವೇ ನಿಂತು ದಡ ಸೇರಲು
ಆತುರದ ದೋಣಿ ತವಕಿಸುತಿದೆ.
ಜಗದೊಡಲಲಿ ತೆನೆ ಚಿಗುರಿದ ಕ್ಷಣದಲಿ
ಉತ್ತವರು ಯಾರೋ ಬಿತ್ತವರೂ ಯಾರೋ
ಉತ್ತಮರನು ಹುಡುಕುವ ಬರದಲಿ ಮಧ್ಯಸ್ಥ
ಉಳಿದವನೇ ಉಳ್ಳವನಾಗುವ ಇದ್ದವ ಇಲ್ಲದವನಾದ .
ಪರಮ ವೈರಿಯನು ಗುರುವೆಂದು ತಿಳಿದವ
ಮುಂದಾದ ಅವಸಾನಕೆ ವಶವಾಗಿ ಮತಿ ಇನವನಾದ
ಒಳಿತಿಗಾಗಿ ಹೊರಟು ಕೆಡಕುಗಳು ಬಲೆಗೆ
ಅವನೇ ವರವಾದ ದುರಂತಗಳ ಸೆಲೆಗೆ ಬದುಕಾದ.
ಸಿರಿಗಾಗಿ ಸಮರಗೈದು ಸಂಧಾನದಲಿ ಪಶುವಾದ
ಧನಕನವನು ದೂರಮಾಡಿ ದಯೇಯಿಂದ ಅವ
ಬುದ್ಧನಾದ ಬದುಕಿನ ಉದ್ದಕೂ ಹೆಸರಾದ
ಮತಿಗೆಟ್ಟ ಅಂಗುಲಿಯ ಪಾಲಿಗೆ ದೈವವಾದ
ಅಂದವನು ತೆರೆದಿಟ್ಟು ಆಸೆಗಳನು ತೆರೆದಿಟ್ಟು
ಕೂಡಿಟ್ಟ ಹೊಸತನದ ಕನಸುಗಳನು ಹೊರಬಿಟ್ಟು
ಬಂಡರಿಗೆ ಲಜ್ಜೆಗೆಟ್ಟು ಸೂಗಿನ ಕವಚಕ್ಕೆ ನಗಾರಿಯ
ಬಿಗಿದಿಟ್ಟು ಸರಿತೂಕದವನೆನಲು ಸಮ್ಮತಕೆ ಸಲ್ಲದವ.
ಅವ ಇರುವುದನ್ನು ಕಾಣಲಾಗದವ .
************************************