Month: July 2020

ದೇವನೂರು ಮಹಾದೇವ

ದೇವನೂರ ಮಹಾದೇವ ಸಂದರ್ಶನ ರಹಮತ್ ತರಿಕೆರೆ ಅವರಿಂದ (1999 ರಲ್ಲಿನಡೆದ ಸಂದರ್ಶನವನ್ನುಸಂಗಾತಿಯ ಓದುಗರಿಗಾಗಿ ಪ್ರಕಟಿಸುತ್ತಿದ್ದೇವೆ.) (ಕನ್ನಡದ ದೊಡ್ಡ ಲೇಖಕರ ವಿಶಿಷ್ಟತೆ ಎಂದರೆ, ಅವರು ಎಷ್ಟು ದೊಡ್ಡ ಕಲಾವಿದರೋ ಅಷ್ಟೇ ದೊಡ್ಡ ರಾಜಕೀಯ ಸಾಮಾಜಿಕ ಚಿಂತಕರು ಕೂಡ. ಇದಕ್ಕೆ ಕಾರಣ ಕರ್ನಾಟಕದ ಸಾಮಾಜಿಕ ಸನ್ನಿವೇಶಗಳೂ ಬಸವಣ್ಣ ಕುವೆಂಪು ಕಾರಂತ ಮುಂತಾದ ಚಿಂತಕ ಲೇಖಕರ ಪರಂಪರೆಯೋ ನಮ್ಮ ಲೇಖಕರ ಸಾಮಾಜಿಕ ಹಿನ್ನೆಲೆಯೊ ಗೊತ್ತಿಲ್ಲ. ‘ನನಗೆ ಏನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ಎಂಬಂತೆ ಚಿಂತಿಸುವವರು ನಮ್ಮ ಸಂಸ್ಕೃತಿಯಲ್ಲಿ ದೊಡ್ಡ ಚಿಂತಕರು’ ಎಂದು […]

ಶರಣಾಗಿ ಬಿಡಲೆ

ಅನುವಾದಿತ ಕವಿತೆ ಮೂಲ ಕನ್ನಡ: ವಸುಂಧರಾ ಕದಲೂರು ಇಂಗ್ಲೀಷಿಗೆ: ಸಮತಾ ಆರ್. ಶರಣಾಗಿ ಬಿಡಲೆ ನಿನ್ನ ಕಂಗಳ ಪ್ರಾಮಾಣಿಕತೆ  ನನ್ನನು ಹಿಂಬಾಲಿಸುತ್ತಿದೆ. ಭದ್ರ ಕೋಟೆ ಗಟ್ಟಿ ಬೇಲಿ ಛಿದ್ರಗೊಳಿಸಿ ಎದೆ ತಟ್ಟುತ್ತಿದೆ. ನೀನು ಮಂಡಿಯೂರಿ ಬಿಡು ನೀನೂ ಮಂಡಿಯೂರಿ ಬಿಡು ಮಾರ್ದನಿಸುವ ಮಾತುಗಳಿಗೆ ಇನ್ನೆಷ್ಟು ಕಾಲ ಕಿವುಡಾಗಿರಲಿ ಹಾದಿ ಮರೆವ ಮುನ್ನ ನಾಕು ಹೆಜ್ಜೆ ನಡೆದು ಬರಲೆ ಹನಿ ಮುತ್ತು ಜಲಗರ್ಭದ ಚಿಪ್ಪೊಳಗೆ ಕಾಣೆಯಾಗಲು ಬಿಡಬೇಡ ಮುಳುಗಿ ತೆಗೆ ಪಿಸುಮಾತು ಕೇಳುತ್ತಿದೆ ಪ್ರತಿಧ್ವನಿ ತರಂಗವಾಗಿ ಹೃದಯದಲಿ ನಯವಾಗಿ […]

ಮೌನಯುದ್ಧ

ಪುಸ್ತಕ ಪರಿಚಯ ಮೌನ ಯುದ್ದ(ಕವನಸಂಕಲನ) ಕವಿ: ಸುರೇಶ್ ಎಲ್. ರಾಜಮಾನೆ ಪ್ರಕಾಶನ: ವಿಶ್ವ ಖುಷಿ ಪ್ರಕಾಶನ, ನವನಗರ ಬಾಗಲಕೋಟ. ಪುಟಗಳು: 92  ಬೆಲೆ: 120/- ಪ್ರಕಟಿತ ವರ್ಷ: 2018 ಕವಿಯ ಸಂಪರ್ಕ ಸಂಖ್ಯೆ: 8105631055          ಗಂಭೀರ ಕಾವ್ಯಾಧ್ಯಯನ ಮೂಲಕ ನಿರಂತರ ಅನುಸಂಧಾನದಲ್ಲಿ ತೊಡಗಿ ಕಾವ್ಯ ರಚನೆ ಕೃಷಿಗೆ ಮುಂದಾಗಿರುವ ರನ್ನಬೆಳಗಲಿಯ ಯುವಕವಿ ಸುರೇಶ್ ರಾಜಮಾನೆಯವರು “ಸುಡುವ ಬೆಂಕಿಯ ನಗು” ಎನ್ನುವ ಕೃತಿಯನ್ನು ಪ್ರಕಟಿಸುವ ಮೂಲಕ ಸಾಹಿತ್ಯ ಲೋಕವನ್ನು ಪ್ರವೇಶಿಸಿದರು. ಈಗ “ಮೌನಯುದ್ಧ”ದ ಮೂಲಕ ನಮ್ಮೊಂದಿಗೆ ಮಾತಿಗಿಳಿದಿದ್ದಾರೆ. […]

ಅಮ್ಮಿಣಿ

ಕಿರುಗಥೆ ಕೆ. ಎ. ಎಂ. ಅನ್ಸಾರಿ ಅಮ್ಮಿಣಿಗೆ ಒಂದೇ ಚಿಂತೆ… ಸೂರ್ಯೋದಯಕ್ಕೆ ಮೊದಲೇ ಹೊರಡುವ ಗಂಡ ಸುಂದ ವಾಪಸ್ಸು ಬರುವಾಗ ಕತ್ತಲೆಯಾಗುತ್ತದೆ. ಖಂಡಿತಾ ಅವನು ಹೆಚ್ಚಿನ ಸಮಯ ಲಚ್ಚಿಮಿ ಯ ಗುಡಿಸಲಲ್ಲೇ ಕಳೆಯುತ್ತಿರಬಹುದು.  ರಾತ್ರಿ ತನ್ನ ಗುಡಿಸಲು ಸೇರಿದರೆ ಗದ್ದಲ ಬೇರೆ. ಸಾರಾಯಿ ಏರಿಸದೆ ಒಂದು ದಿನವೂ ಬಂದದ್ದಿಲ್ಲ. ಹಾಗೆಂದು ಮನೆ ಖರ್ಚಿಗೆ ಕೊಡುವುದಿಲ್ಲ ಎಂದಲ್ಲ. ಮಕ್ಕಳ ಮೇಲೆ ಪ್ರೀತಿಯಿದೆ .. ಆದರೂ ಆ ಲಚ್ಚಿಮಿ ಯ ಗುಡಿಸಲಲ್ಲಿ ಅವನಿಗೆ ಏನು ಇಷ್ಟು ಕೆಲಸ .. ? […]

ಸಾಹಿತ್ಯದ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ

ಚರ್ಚೆ (ಈ ಲೇಖನದಲ್ಲಿ ಪ್ರಸ್ತಾಪಿಸಲಾದ ಅಂಶಗಳ ಬಗ್ಗೆ ವಸ್ತುನಿಷ್ಠ ಚರ್ಚೆ ನಡೆಸಲು ಬಯಸುವಿರಾದರೆ ನಿಮ್ಮಬರಹಗಳನ್ನು ಕಳಿಸಬಹುದು-ಸಂ) ಚಂದಕಚರ್ಲ ರಮೇಶ ಬಾಬು ಸಾಹಿತ್ಯದ ಹರಿವು ಬಾಯಿ ಮಾತಿನಿಂದ ಹಿಡಿದು, ಬರವಣಿಗೆ, ಮುದ್ರಣ, ಪುಸ್ತಕ ವಿತರಣ, ಪುಸ್ತಕ ಭಂಡಾರಗಳಲ್ಲಿ ದಾಸ್ತಾನು ಹೀಗೆ ಅನೇಕ ವಿಧಗಳಾಗಿ ನಮಗೆ ಕಂಡಿದೆ. ಬಾಯಿಮಾತಿನಿಂದ ಹರಡಿದ ಸಾಹಿತ್ಯ ದಾಖಲೆಗೊಳ್ಳದೆ ಅನೇಕ ವಚನಗಳು, ಪದಗಳು ಮತ್ತು ಕೃತಿಗಳು ನಮಗೆ ಅಲಭ್ಯವಾಗಿವೆ. ಬರವಣಿಗೆ ಆರಂಭವಾದ ಮೇಲೆ ಈ ಅಡಚಣೆ ಸ್ವಲ್ಪ ಮಟ್ಟಿಗೆ ತಹಬಂದಿಗೆ ಬಂದಿತು. . ತಾಳೆಗರಿಗಳ ಮೇಲೆ […]

ದೇವರ ವಾನಪ್ರಸ್ತ.

ರಾತ್ರಿಯಿಡೀ ಕಗ್ಗತ್ತಲು. ಯಾಕಿಲ್ಲ, ಅಮವಾಸ್ಯೆಯ ರಾತ್ರೆಯದು. ಗುಹೆಯೊಂದರಲ್ಲಿ ಮಲಗಿದ್ದ ಶಿಲಾಮಾನವ ರಾತ್ರೆ ಕಳೆಯುತ್ತಿದ್ದ. ಸುತ್ತ ,ಅಡವಿ. ಅದೊಂದು ನಿದ್ದೆಯಲ್ಲದ ನಿದ್ದೆ. ಗಾಳಿಗೆ ಮರಗಳ ಸುಂಯ್..ಸುಂಯ್.. ಒಂಥರಾ ನೀರವ ಕಗ್ಗತ್ತಲು. ಕಣ್ಣಿಗೇನೂ ಕಾಣಿಸದಾದಾಗ, ಕಿವಿ ಅತ್ಯಂತ ಸೂಕ್ಷ್ಮವಾಗುತ್ತೆ. ದೂರದಿಂದ, ನರಿಗಳು ಊಳಿಡುವ ಶಬ್ಧ, ಪಟ್ಟೆ ಹುಲಿ ನಡೆಯುವಾಗ,ಓಡುವಾಗ ಶಬ್ಧಮಾಡುವುದಿಲ್ಲ. ಸೈಲೆಂಟ್ ಕಿಲ್ಲರ್ ಅದು! ಹ್ಞಾ! ಕೇಳಿಸಿತಲ್ಲ, ಜಿಂಕೆಯ ಮರಣಾಕ್ರಾಂದನ..ಖಂಡಿತಾ ಹುಲಿ ಹಿಡಿದಿರಬೇಕು, ನಾಳೆ ಸಿಗುತ್ತೆ ಅದರ ಅವಶೇಷಗಳು. ಹೇಗಿದ್ದರೂ, ಗುಹೆಯ ಬಾಗಿಲಿಗೆ ಬಂಡೆ ಪಾರ್ಶ್ವದಿಂದ ಮುಚ್ಚಿದೆ. ಹುಲಿಗೂ ಭಯವಿದೆ. […]

ವಿನಂತಿಯಷ್ಟೇ…

ಕವಿತೆ ಮಧುಸೂದನ ಮದ್ದೂರು ನಿನ್ನ ಒಂದೇ ಒಂದು ಕನಸಿಗೆ ಇಷ್ಟು ಪರಿತಪಿಸ ಬೇಕಿತ್ತೆ…..? ನಿನ್ನ ಕುಡಿಮಿಂಚ ಕಣ್ಣೋಟಎದೆ ಇರಿದಿದ್ದರೆ ಸಾಕಿತ್ತು..ಎದೆಗೆ ನಿನ್ನ ನೆನಪುಗಳ ಭರ್ಜಿಯಿಂದಇರಿದುಕೊಳ್ಳಬೇಕಿರಲಿಲ್ಲ..ನಿನ್ನ ತುಸು ಸ್ಪರ್ಶದ ಕೆನೆಗಾಳಿ ಎದೆಗೆ ಸೊಂಕಿದ್ದರೆ ಸಾಕಿತ್ತು… ನಿನ್ನ ಸಿಹಿ ಮುತ್ತೊಂದು ಸಿಕ್ಕಿದ್ದರೆ ಸಾಕಿತ್ತು..ಮಧುಶಾಲೆಗೆ ಎಡತಾಕಿ ಮತ್ತಿನ ಬಾಟಲಿಗಳಿಗೆ ಮುತ್ತಿಕ್ಕುವ ಪ್ರಮೇಯವೇ ಇರುತ್ತಿರಲಿಲ್ಲ… ನಿನ್ನ ನವಿರು ಬಿಸಿಯುಸಿರು ನನ್ನೆದೆಗೆ ಸುಳಿಗಾಳಿಯಾಗಿದ್ದರೆ ಸಾಕಿತ್ತು..ಧೂಮಲೀಲಾ ವಿನೋದವಳಿಗೆ ಅಗ್ನಿಮಿತ್ರನಾಗುತ್ತಿರಲಿಲ್ಲ.. ಈಗಲೂ ಕಾಲ‌ಮಿಂಚಿಲ್ಲ..ಒಂದೇ ಒಂದು ಬಾರಿ ಕನಸಿಗೆ ಬಂದು ಬಿಡು ಸಾಕುಈ‌ ನನ್ನಿ ವ್ಯಸನಗಳ ಸಾಮ್ರಾಜ್ಯವ ಸೋಲಿಸಿಎದೆಯ […]

ಗಝಲ್

ಗಝಲ್ ಶಶಿಕಾಂತೆ ನಿನ್ನನ್ನು ಎದೆಯಾಳದಿಂದ ಅನಂತವಾಗಿ ಪ್ರೀತಿಸುತಿರುವೆನುಆಣೆ ಇಡಲೇ,ನನ್ನೊಲವನ್ನೆಲ್ಲಾ ನಿನಗಾಗೇ ಮುಡಿಪಾಗಿಡುವೆನು. ಜೀವನವೆಂಬುದು ಮೂರು ದಿನದ ಸಂತೆಯಂತೆ ಚೆಲುವೆ.ಆ ಸಂತೆಯಲ್ಲಿ ನೀ ನೀಡಿದೆ ನನಗೆ ಯಾರೂ ನೀಡದ ಸ್ನೇಹವನು. ನೀನೀಗ ಹೃದಯ ವೀಣೆ ಮೀಟಿಯಾಗಿದೆ ದೂರ ಹೋಗದಿರು ಸಖಿ ತಾಳಿಕೊಳ್ಳಲಾರದು ನನ್ನೆದೆ ವಿರಹದ ಬೇಗೆಯನು. ಈ ಬಾಳು ಬರಡು ಬಂಜರುಭೂಮಿ ಆಗಿತ್ತು ನಿನ್ನಾಗಮದ ಮೊದಲು.ಪ್ರೇಮ ಸಿಂಚನದಿಂದ ಮನದಲಿ ನೀ ಮೂಡಿಸಿದೆ ಹೊಸ ಬಯಕೆಗಳನು ನಿನ್ನ ಹೆಸರೇ ನನ್ನುಸಿರಾಗಿದೆ ನಾವು ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದಾಗದಿಂದ.ಬಾ ಜಾನು, ನನ್ನೆದೆಗೊರಗಿ ಮಲಗಿ […]

ಉತ್ತರ ಏನು?

ಕವಿತೆ ನಂದಿನಿ ಹೆದ್ದುರ್ಗ ಅವನೆನ್ನ ಅಗತ್ಯವಲ್ಲ.ಅನಿವಾರ್ಯವಲ್ಲಅಭೇದ್ಯವೂ ಅಲ್ಲ.ನಡುದಾರಿಯಲಿ ಸಿಕ್ಕ ದಾರಿಹೋಕ.ನನ್ನ ನೋಡಿ ಸಣ್ಣಗೆ ನಕ್ಕ. ಒಡ್ಡಿಕೊಂಡೆವು ಎಂದುಎರಡುಅಲುಗಿನ ನಡೆಗೆ ನಾವಿಬ್ಬರೂ.? ಅವನೀಗ ನನ್ನೆದೆಯ ರಾಗ.ಬೆವರ ಬೆಳಕು.ಹೆರಳ ಸಿಕ್ಕು.ಕಣ್ಣ ಚುಕ್ಕಿ.ಒಳಗಿನೊಳಗಿನ ಭಕ್ತಿ. ಅವನೆನ್ನ ಬಯಕೆ ಎನ್ನ ಬಳಲಿಕೆಮಳೆಗರೆವ ಮುಗಿಲುಆಳದ ದಿಗಿಲುಅವನೆನ್ನ ಬೇಕುಪದ್ಯದ ಪರಾಕು.ಅವನು…ಸಿಹಿಯಾದ ಕತ್ತಲುಹೂ ಹಿಡಿದ ಹಿತ್ತಿಲು.ಅವನೆನ್ನ ಸುಖ ನನ್ನ ಮೋಹದ ಸಖ ಜಗದ ಆ ಬದಿಯಲಿ ಅವನುಸಮೃದ್ಧ ಏಕಾಂತದಲಿ ನಾನುಹರಿದು ಅಲೆಗಳ ಬಣ್ಣಸುತ್ತೆಲ್ಲಾ ತಿಳಿಗೆಂಪು ಉದ್ಯಾನ.ಹೊರಳಿದರೆ ಹಗಲುಅವನೆದೆಯ ಮಗ್ಗುಲು ನನ್ನಇಂದು ನಾಳೆ ನಿನ್ನೆಗಳೆಲ್ಲಾಕಣ್ಣು ಕೂಡಿದಕ್ಷಣದ ಧ್ಯಾನದಲ್ಲಿ ಅದೇ […]

ನನ್ನೊಳಗಿನ ನೀನು.

ಕವಿತೆ ಶೀಲಾಭಂಡಾರ್ಕರ್ ಹುಡುಕುತ್ತೇನೆ ನಿನ್ನನ್ನು ಲೆಕ್ಕವಿಲ್ಲದನಕ್ಷತ್ರಗಳ ಮಿಣುಕು ಮಿಣುಕುನಾಟ್ಯದೊಳಗೆ.ಆತುರಗಾರ ಚಂದ್ರನೂನಿನ್ನ ನೆನಪಿಸುತ್ತಾನೆ..ಅವಸರದಿ ಅವಿತುಕೊಳ್ಳುವಾಗಮೋಡದ ಸೆರಗಿನೊಳಗೆ ಬೀಸಿ ಬರುವ ತಂಗಾಳಿಯೊಂದುಸದ್ದಿಲ್ಲದೆ ತುಟಿಗಳಿಗೆಮುತ್ತಾಗಿ ಬಿಸಿಯಾಗುವತುಂಟ ಸಮಯದಿನೀನೇ ಇರುವೆ ಆ ಇರುವಿನೊಳಗೆ. ಹಿತ್ತಲ ಮೂಲೆಯ ಗಿಡದಲ್ಲೀಗಅಬ್ಬಲಿಗೆಯ ಶ್ರಾಯ.ಹೂ ಅರಳುವ ಮೃದು ಮಧುರಪರಿಮಳವಾಗಿ ನೀನಿರುವೆ.ಗಂಧ ಸುಗಂಧದೊಳಗೆ. ಸಂಜೆಗಳಲಿ ಕೆಂಪಾಗಿಸೂರ್ಯ ಮುಳುಗುವಾಗಕಾಡುವ ನೆನಪಾಗುವೆ..ಅಂಗಳದಲ್ಲಿ ಆಟವಾಡುವಬುಲ್‍ಬುಲ್ ಜೋಡಿ ಹಕ್ಕಿಗಳಲಲ್ಲೆ ಸಲ್ಲಾಪಗಳ ಸದ್ದು ಗದ್ದಲದೊಳಗೆ. ನಿಶ್ಶಬ್ದವಾಗಿ ಪಿಸುನುಡಿಯೊಂದುಒಳಗಿನಿಂದ ಉಸುರಿದಾಗಯುಗಗಳಿಂದ ಹುಡುಕುತಿದ್ದನನ್ನನ್ನೇ ಎಲ್ಲೆಡೆ.. ಕಂಡುಕೊಂಡೆ.,ನಿನ್ನ ಕಂಡಾಗ ನನ್ನೊಳಗೆ. **************************

Back To Top